WhatsApp Account: ಈಗ ಒಂದೇ ಮೊಬೈಲ್ ನಲ್ಲಿ ಈ ರೀತಿಯಾಗಿ ತೆರೆಯಿರಿ 2 ವಾಟ್ಸಾಪ್ ಖಾತೆ, ಇಲ್ಲಿದೆ ಸುಲಭ ವಿಧಾನ.
ವಾಟ್ಸಪ್ ಬಳಕೆದಾರರಿಗಾಗಿ ಇದೀಗ ಮಲ್ಟಿ ಅಕೌಂಟ್ ನ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ.
WhatsApp Multi Account New Update: ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇದೀಗ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ.
ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ ಗಳನ್ನೂ ಪರಿಚಯಿಸಿದೆ. ಮೆಟಾ (Meta) ತನ್ನ ವಾಟ್ಸಪ್ ಚಾಟಿಂಗ್ ಸಿಸ್ಟಮ್ ಅಲ್ಲಿ ಕೂಡ ಸಂಪೂರ್ಣ ಬದಲಾವಣೆಯನ್ನು ತಂದಿದೆ. WhatsApp Screen Sharing, Video sharing, Multi device ಸೇರಿದಂತೆ ಇನ್ನಿತರ ಸಾಕಷ್ಟು ಅಪ್ಡೇಟ್ ಗಳು ವಾಟ್ಸಾಪ್ ಬಳಕೆದಾರರಿಗೆ ದೊರೆಯುತ್ತಿದೆ.
ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸಾಪ್
ಸಾಮಾನ್ಯವಾಗಿ ಹೆಚ್ಚಿನ ಜನರು ಎರಡು SIM ಗಳನ್ನೂ ಉಪಯೋಗಿಸುತ್ತಾರೆ. ಒಂದು ಸಿಮ್ ವ್ಯವಹಾರಕ್ಕೆ ಉಪಯೋಗಿಸಿದರೆ ಇನ್ನೊಂದು ವೈಯಕ್ತಿಕವಾಗಿ ಬಳಸುತ್ತಾರೆ. ಈ ಹಿಂದೆ ಒಂದು ಮೊಬೈಲ್ ನಲ್ಲಿ ಎರಡು ಸಿಮ್ ಇದ್ದರು ಕೂಡ ಒಂದೇ ವಾಟ್ಸಾಪ್ ಖಾತೆಯನ್ನು ತೆರೆಯಲು ಅವಕಾಶ ಇದ್ದಿತ್ತು. ಆದರೆ ಇನ್ನುಮುಂದೆ ನೀವು ನಿಮ್ಮ ಮೊಬೈಲ್ ನಲ್ಲಿ ಒಂದಕ್ಕಿಂತ ಹೆಚ್ಚಿನ ವಾಟ್ಸಾಪ್ ಅಕೌಂಟ್ ಉಪಯೋಗಿಸುವಂತೆ ಹೊಸ ಫೀಚರ್ ಅನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ.
WhatsApp Multi Account Feature
ವಾಟ್ಸಪ್ ಬಳಕೆದಾರರಿಗಾಗಿ ಇದೀಗ ಮಲ್ಟಿ ಅಕೌಂಟ್ ನ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ವಾಟ್ಸಾಪ್ ಬಳಕೆದಾರರು ಒಂದೇ ಮೊಬೈಲ್ ನಲ್ಲಿ ವಿವಿಧ ಅಕೌಂಟ್ ಗಳನ್ನೂ ತೆರೆಯಬಹುದಾಗಿದೆ. ಬಹು ಖಾತೆಗಳನ್ನು ಒಂದೇ ಡಿವೈಸ್ ನಲ್ಲಿ ಇರಿಸುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಭಾಷಣೆಗಳು, ಕೆಲಸ ಸಂಬಂಧಿತ ಚರ್ಚೆಗಳು ಮತ್ತು ಇತರ ಸಾಮಾಜಿಕ ಸಂವಹನಗಳನ್ನು ಒಂದೇ ಅಪ್ಲಿಕೇಶನ್ ನಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ.
WhatsApp Multi Account Feature ಬಳಸುವ ವಿಧಾನ
*ಸದ್ಯ ವಾಟ್ಸಾಪ್ ಮಲ್ಟಿ ಅಕೌಂಟ್ ಫೀಚರ್ ಬೀಟಾ ಪರೀಕ್ಷಕರಿಗೆ ಲಾಭವಾಗಲಿದೆ.
*ವಾಟ್ಸಾಪ್ ಮಲ್ಟಿ ಅಕೌಂಟ್ ಫೀಚರ್ ಅನ್ನು ಪಡೆಯಲು ನೀವು ವಾಟ್ಸಾಪ್ ಬಿಟಾದ ಇತ್ತೀಚಿನ ನವೀಕರಣವನ್ನು Install ಮಾಡಿಕೊಳ್ಳಬೇಕಿದೆ.
*WhatsApp Setting ನಲ್ಲಿ ಬೀಟಾ ಪರೀಕ್ಷಕರು Multi Account Feature ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು.
* ಇನ್ನು ಈ ಫೀಚರ್ ಕೇವಲ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ಬಳಕೆದಾರರಿಗೂ ತಲುಪಲಿದೆ.