WhatsApp: ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡುವವರಿಗೆ ಇಂದಿನಿಂದ ಹೊಸ ಸೇವೆ, ಮಾಡಿ ವಿಡಿಯೋ ಮೆಸೇಜ್.
ವಿಡಿಯೋ ಮೆಸೇಜ್ ಮಾಡುವ ಹೊಸ ಫೀಚರ್ ಅನ್ನು ಬಿಡುಗಡೆಮಾಡಿದ ವಾಟ್ಸಾಪ್.
WhatsApp Video Call Feature: ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಗಳನ್ನೂ ಪರಿಚಯಿಸುತ್ತಿದೆ. ಇತ್ತೀಚಿಗಂತೂ ವಾಟ್ಸಾಪ್ ನಲ್ಲಿ ಅನೇಕ ಫೀಚರ್ ಗಳು ಬಿಡುಗಡೆಯಾಗಿದ್ದು ಬಳಕೆದಾರರು ಅದರ ಉಪಯೋವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸದೊಂದು ಫೀಚರ್ ಒಂದನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ವಾಟ್ಸಾಪ್ ನಲ್ಲಿ ಹೊಸ ಫೀಚರ್
ವಾಟ್ಸಾಪ್ ತ್ವರಿತ ವಿಡಿಯೋ ಸಂದೇಶಗಳು ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯ ಮಾಡಿದೆ. ಇದರಲ್ಲಿ ಬಳಕೆದಾರರು ತಮ್ಮ ಚಾಟ್ ಗಳಲ್ಲಿ ಕಿರು ವಿಡಿಯೋ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ತ್ವರಿತ ವಿಡಿಯೋ ಸಂದೇಶಗಳು ಧ್ವನಿ ಸಂದೇಶಗಳಿಗೆ ಹೋಲುತ್ತವೆ ಆದರೆ ವಿಡೋದೊಂದಿಗೆ, ರೆಕಾರ್ಡಿಂಗ್ ಪ್ರಕ್ರಿಯೆಯು ಧ್ವನಿ ಸಂದೇಶಗಳಂತೆಯೇ ಇರುತ್ತದೆ. ಈ ಫೀಚರ್ ಮುಂದಿನ ವಾರದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.
ವಾಟ್ಸಾಪ್ ಬಳಕೆದಾರರಿಗೆ ಹೊಸ ಮಾಹಿತಿ
ಬಳಕೆದಾರರು ವಿಡಿಯೋ ಮೋಡ್ ಗೆ ಬದಲಾಯಿಸಲು ಪಠ್ಯ ಕ್ಷೇತ್ರದ ಬಲಭಾಗದಲ್ಲಿರುವ ಐಕಾನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಅವರ ಸಂಪರ್ಕಗಳೊಂದಿಗೆ 60 ಸೆಕೆಂಡುಗಳವರೆಗೆ ವಿಡಿಯೋವನ್ನು ಹಂಚಿಕೊಳ್ಳಬಹುದು.
ಹ್ಯಾಂಡ್ಸ್ ಫ್ರೀ ವಿಡಿಯೋವನ್ನು ಲಾಕ್ ಮಾಡಲು ಮತ್ತು ರೆಕಾರ್ಡ್ ಮಾಡಲು ಮೇಲಕ್ಕೆ ಸ್ವೈಪ್ ಮಾಡಬಹುದು. ಸಾಮಾನ್ಯ ವಿಡಿಯೋ ಸಂದೇಶಗಳು ಚಾಟ್ ಗಳಲ್ಲಿ ವೃತ್ತಾಕಾರದ ರೂಪದಲ್ಲಿ ತೋರಿಸುತ್ತವೆ. ಅವು ಮ್ಯೂಟ್ ನಲ್ಲಿ ಸ್ವಯಂ ಚಾಲಿತವಾಗಿ ಪ್ಲೆ ಆಗುತ್ತವೆ. ಆದರೆ ಬಳಕೆದಾರರು ಧ್ವನಿಯನ್ನು ಕೇಳಲು ಅವುಗಳ ಮೇಲೆ ಟ್ಯಾಪ್ ಮಾಡಬಹುದು.
ವಾಟ್ಸಾಪ್ ವಿಡಿಯೋ ಕಾಲ್ ಫೀಚರ್
ಇನ್ನು ವಾಟ್ಸಾಪ್ ಇತ್ತೀಚಿಗೆ ಬಳಕೆದಾರರಿಗೆ ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ಚಾಟ್ ಟ್ರಾನ್ಸ್ಫರ್ ಮತ್ತು ಹೊಸ ಸ್ಟಿಕ್ಕರ್ ಜಾರಿ ಮಾಡಿದೆ. ಇದೀಗ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ಲ್ಯಾಂಡ್ ಸ್ಕೇಪ್ ಮೂಡ್ ಪ್ರವರ್ತಿಸಲಿದೆ.
ಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪ್ರೋಟ್ರೈಟ್ ಮೂಡ್ ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್ ನಿಂದ ವಿಡಿಯೋ ಕಾಲ್ ಮಾಡಲು ಬಳಕೆದಾರರು ಮೊಬೈಲ್ ಅನ್ನು ಪ್ರೋಟ್ರೈಟ್ ಮಾಡಲು ಅಥವಾ ಲ್ಯಾಂಡ್ ಸ್ಕೇಪ್ ಯಾವುದೇ ಮೂಡ್ ನಲ್ಲೂ ಕರೆ ಮಾಡಿ ಸಂಭಾಷಣೆ ನಡೆಸಬಹುದು. ಹೊಸ ಫೀಚರ್ ಇದಕ್ಕೆ ಅನುಮತಿ ನೀಡಲಿದೆ.