WhatsApp: ವಾಟ್ಸಾಪ್ ಬಳಕೆದಾರರಿಗೆ ಹೊಸ ಸುದ್ದಿ, ವಿಡಿಯೋ ಕಾಲ್ ನಲ್ಲಿ ಹೊಸ ಫೀಚರ್.
ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ವಿಡಿಯೋ ಕಾಲ್ ನಲ್ಲಿ ಹೊಸ ಫೀಚರ್ ಬಿಡುಗಡೆ ಮಾಡಿದೆ.
WhatsApp New Feature: ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವುದರಿಂದ ಹೊಸ ಹೊಸ ಫೀಚರ್ ಗಳನ್ನೂ ಗ್ರಾಹಕರ ಬೇಡಿಕೆಯ ಅನುಗುಣವಾಗಿ ಬಿಡುಗಡೆ ಆಗುತ್ತಾ ಇರುತ್ತದೆ. ಇತ್ತೀಚಿಗಂತೂ ವಾಟ್ಸಾಪ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ಫೀಚರ್ ಗಳು ಬಿಡುಗಡೆಯಾಗಿವೆ.
ವಾಟ್ಸಾಪ್ ಹೊಸ ಫೀಚರ್
ಇದೀಗ ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ಹೊಸ ಫೀಚರ್ ಒಂದು ಬಿಡುಗಡೆಯಾಗಿದೆ. ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ಚಾಟ್ ಟ್ರಾನ್ಸ್ಫರ್ ಮತ್ತು ಹೊಸ ಸ್ಟಿಕ್ಕರ್ ಜಾರಿ ಮಾಡಿದೆ. ಇನ್ನು ಈ ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.
ವಾಟ್ಸಾಪ್ ಬಳಕೆದಾರರಿಗೆ ಸಿಗಲಿದೆ ಹೊಸ ಫೀಚರ್
ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ವಾಟ್ಸಾಪ್ ಇದೀಗ ಈಡೇರಿಸಿದೆ. ವಿಡಿಯೋ ಕಾಲ್ ನಲ್ಲಿ ಹೊಸದಾಗಿ ಫೀಚರ್ ಒಂದು ಬಿಡುಗಡೆಯಾಗಿದೆ. ಇದೀಗ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ಲ್ಯಾಂಡ್ ಸ್ಕೇಪ್ ಮೂಡ್ ಪ್ರವರ್ತಿಸಲಿದೆ. ಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪ್ರೋಟ್ರೈಟ್ ಮೂಡ್ ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್ ನಿಂದ ವಿಡಿಯೋ ಕಾಲ್ ಮಾಡಲು ಬಳಕೆದಾರರು ಮೊಬೈಲ್ ಅನ್ನು ಪ್ರೋಟ್ರೈಟ್ ಮಾಡಲು ಅಥವಾ ಲ್ಯಾಂಡ್ ಸ್ಕೇಪ್ ಯಾವುದೇ ಮೂಡ್ ನಲ್ಲೂ ಕರೆ ಮಾಡಿ ಸಂಭಾಷಣೆ ನಡೆಸಬಹುದು. ಹೊಸ ಫೀಚರ್ ಇದಕ್ಕೆ ಅನುಮತಿ ನೀಡಲಿದೆ.
ವಾಟ್ಸಾಪ್ ಬಳಕೆದಾರರು ವಿಡಿಯೋ ಕಾಲ್ ವೇಳೆ ಲ್ಯಾಂಡ್ ಸ್ಕೇಪ್ ಮೂಡ್ ನಲ್ಲಿ ಮೊಬೈಲ್ ಇಟ್ಟು ಸಂಭಾಷಣೆ ನಡೆಸಲು ಅಥವಾ ಇನ್ನಿತರ ಕಾರಣಗಳಿಗೆ ಬಳಕೆದಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು.
ಇದೀಗ ಬಳಕೆದಾರರು ಮೊಬೈಲ್ ಅನ್ನು ಲ್ಯಾಂಡ್ ಸ್ಕೇಪ್ ಮೂಡ್ ನತ್ತ ತಿರುಗಿಸಿದರೆ ಯಾವುದೇ ಸಮಸ್ಯೆ ಇಲ್ಲ. ಕರೆಯಲ್ಲಿರುವ ವ್ಯಕ್ತಿ ಅಥವಾ ಚಿತ್ರಗಳು ಉಲ್ಟಾ ಕಾಣುವುದಿಲ್ಲ. ಬಳಕೆದಾರರ ಮುಂದಿದ್ದ ಸಮಸ್ಯೆಯೊಂದನ್ನು ಇದೀಗ ವಾಟ್ಸಾಪ್ ಬಗೆಹರಿಸಿದೆ.