Passkey: ಇನ್ನುಮುಂದೆ ವಾಟ್ಸಾಪ್ ಬಳಸಲು ಯಾವುದೇ ಪಾಸ್ ವರ್ಡ್ ಬೇಕಾಗಿಲ್ಲ, ವಾಟ್ಸಾಪ್ ಬಳಸುವವರಿಗೆ ಹೊಸ ಸೇವೆ.
ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಫೀಚರ್ ಪರಿಚಯಿಸಿದ Meta.
WhatsApp Passkey Feature Update: ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇತ್ತೀಚಿಗೆ ವಿಭಿನ್ನ ಫೀಚರ್ ನ ಮೂಲಕ ಗ್ರಾಹಕರಿಗೆ ತಲುಪುತ್ತಿದೆ. ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ WhatsApp ಚಾಟಿಂಗ್ ಗೆ ಬೆಸ್ಟ್ ಅಪ್ಲಿಕೇಶನ್ ಎನ್ನಬಹುದು. ಸದ್ಯ WhatsApp ನಲ್ಲಿ ಈಗಾಗಲೇ ಹಲವು ಫೀಚರ್ ಬಿಡುಗಡೆಗೊಂಡಿದೆ. ಇತ್ತೀಚೆಗಷ್ಟೇ WhatsApp Channel ಆರಂಭಗೊಂಡಿದ್ದು ವಾಟ್ಸಪ್ ಮತ್ತೊಂದು ಹೆಜ್ಜೆ ಮುಂದೆ ಸಾಗಿದೆ.
ದೇಶದ ಪ್ರಧಾನಿ ಅವರಿಂದ ಹಿಡಿದು ಬಾಲಿವುಡ್ ತಾರೆಯರು ಕೂಡ ಈ WhatsApp Channel ಆರಂಭಿಸಿದೆ. WhatsApp Channel ನ ಮೂಲಕ ಜನರು ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಎನ್ನಬಹುದು. ಸದ್ಯ WhatsApp Channel ಫೀಚರ್ ಹೈಲೈಟ್ ಆಗುತ್ತಿದ್ದಂತೆ ಇದೀಗ Meta ಮತ್ತೊಂದು ಫೀಚರ್ ಪರಿಚಯಿಸಿದೆ. ಈ ಫೀಚರ್ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಅಷ್ಟಕ್ಕೂ ಏನಿದು ಹೊಸ ಫೀಚರ್? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇನ್ನುಮುಂದೆ ವಾಟ್ಸಾಪ್ ಗೆ ಪಾಸ್ ವರ್ಡ್ ಅಗತ್ಯವಿಲ್ಲ
ಈ ಮೊದಲು WhatsApp Login ಆಗಲು ನಿಮ್ಮ ಮೊಬೈಲ್ ಸ್ಕ್ಯೆಗೆ OTP ಅಗತ್ಯವಿತ್ತು. OTP ಬಂದ ಬಳಿಕ ನಿಮ್ಮ ವಾಟ್ಸಾಪ್ ಖಾತೆ ಲಾಗಿನ್ ಆಗಿ ಆಕ್ಟಿವೇಟ್ ಆಗುತ್ತಿತ್ತು. ಈ SMS ಧ್ರಡೀಕರಣ ಪ್ರಕ್ರಿಯೆಯಿಂದ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸಿದ್ದರು. ವಾಟ್ಸಾಪ್ ಇನ್ಸ್ಟಾಲ್ ಮಾಡುವಾಗ, ಮತ್ತೆ ಮತ್ತೆ ಲಾಗಿನ್ ಮಾಡುವಾಗ ಈ ಪಾಸ್ ವರ್ಡ್ ಅಗತ್ಯವಿತ್ತು. ಸದ್ಯ ವಾಟ್ಸಪ್ ಪಾಸ್ ವರ್ಡ್ ಇಲ್ಲದೆಯೂ ಲಾಗಿನ್ ಮಾಡಬಹುದಾಗಿದೆ. ಇದಕ್ಕಾಗಿ ಹೊಸ ಫೀಚರ್ ಪರಿಚಯವಾಗಿದೆ.
Password ಬದಲು Passkey Feature
ಇತ್ತೀಚೆಗಷ್ಟೇ Google ನಲ್ಲಿ ಕೂಡ Passkey ಸೌಲಭ್ಯವನ್ನು ಪರಿಚಯಸಲಾಗಿತ್ತು. ಇದೀಗ WhatsApp ತನ್ನ ಬಳಕೆದಾರರಿಗೆ ಪಾಸ್ ಕೀ ಸೌಲಭ್ಯವನ್ನು ಪರಿಚ್ಯಿಸಿದೆ. ಪಾಸ್ ವರ್ಡ್ ಮರೆತುಹೋದ ಸಮಯದಲ್ಲಿ ಈ ಹೊಸ ಫೀಚರ್ ಸಹಾಯವಾಗುತ್ತದೆ.
ನೀವು WhatsApp Account Sign In ಗೆ Password ಬದಲಾಗಿ ಫಿಂಗರ್ ಫ್ರಿನ್ಟ್, ಫೇಸ್ ರೆಕಗ್ನಿಷನ್, ಪಿನ್, ಪ್ಯಾಟರ್ನ್ ಅನ್ನು ಬಳಸಬಹುದು. ಯಾವುದೇ ಪಾಸ್ ಕೀ ಅನ್ನು ಬಳಸುವ ಮೂಲಕ ನೀವು WhatsApp Account ಗೆ ಸುಲಭವಾಗಿ Log In ಆಗಬಹುದು. ಈ ಪಾಸ್ ಕೀ ಸೌಲಭ್ಯ ವಾಟ್ಸಾಪ್ ಬಳಕೆದಾರರಿಗೆ ಇನ್ನಷ್ಟು ಭದ್ರತೆಯನ್ನು ನೀಡಲಿದೆ.