WhatsApp QR: ವಾಟ್ಸಾಪ್ ಬಳಸುವವರಿಗೆ ಬಂತು QR ಕೋಡ್ ಸೌಲಭ್ಯ, ಇನ್ನುಮುಂದೆ ಎಲ್ಲವೂ QR ಕೋಡ್ ನಲ್ಲಿ.
ವಿಡಿಯೋ ಮೆಸೇಜ್ ಶೇರಿಂಗ್ ಫೀಚರ್ ಬೆನ್ನಲ್ಲೇ ವಾಟ್ಸಾಪ್ ಮತ್ತೊಂದು ಫೀಚರ್ ಬಿಡುಗಡೆಗೊಳಿಸಲು ಸಿದ್ಧತೆ ನೆಡೆಸುತಿದ್ದೆ.
WhatsApp QR Code Feature: ದೇಶದಲ್ಲಿ ಅತಿ ಹೆಚ್ಚು ಜನಪ್ರಿಯ Chatting ಅಪ್ಲಿಕೇಶನ್ ಎಂದರೆ ಮೊದಲ ಸ್ಥಾನ WhatsApp ಪಡೆದುಕೊಂಡಿದೆ. ದೇಶದಲ್ಲಿ ಅದೆಷ್ಟೋ ಮಿಲಿಯನ್ ನಷ್ಟು ಜನರು ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ. Meta ಮಾಲೀಕತ್ವದ WhatsApp ದಿನ ನಿತ್ಯ ಒಂದಾದರು ಫೀಚರ್ Update ನೊಂದಿಗೆ ಗ್ರಾಹಕರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ.
ವಾಟ್ಸಾಪ್ ಫೀಚರ್ ಅಪ್ಡೇಟ್ ನಿಂದಾಗಿ ಬಳಕೆದಾರರು ಹೆಚ್ಚಿನ ಅನುಕೂಲವನ್ನು ಪಡೆಯುತ್ತಿದ್ದಾರೆ. ಬಳಕೆದಾರರು ದಿನನಿತ್ಯ ಹೊಸ ಹೊಸ ಅಪ್ಡೇಟ್ ಅನ್ನು ಪಡೆಯುತ್ತಿದ್ದಾರೆ. ಇನ್ನು ವಾಟ್ಸಾಪ್ ಇತ್ತೀಚಿಗೆ ತನ್ನ Chatting System ನಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಲು ಸಂಪೂರ್ಣವಾಗಿ ಸಜ್ಜಾಗಿದೆ. ಈಗಾಗಲೇ ನೂತನ ಫೀಚರ್ ಗಳು ಬಿಡುಗಡೆಗೊಂಡು ಹೆಚ್ಚಿನ ಕ್ರೇಜ್ ಮೂಡಿಸಿದೆ.
ವೈರಲ್ ಆಗುತ್ತಿದೆ WhatsApp New Feature
ಇತ್ತೀಚಿಗೆ ಬಿಡುಗಡೆಗೊಂಡ ವಾಟ್ಸಾಪ್ ನ ಎಲ್ಲ ಫೀಚರ್ ಗಳು ಬಳಕೆದಾರರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ. ಸದ್ಯ ವಾಟ್ಸಾಪ್ ನ ವಿಡಿಯೋ ಮೆಸೇಜ್ ಶೇರಿಂಗ್ ಫೀಚರ್ ಬಾರಿ ಸಂಚಲನ ಮೂಡಿಸುತ್ತಿದೆ. ವಿಡಿಯೋ ಕಾಲ್ ಬದಲಾಗಲಿ ಈ ವಿಡಿಯೋ ಮೆಸೇಜ್ ಶೇರಿಂಗ್ ಫೀಚರ್ ಬಳಕೆದಾರರಿಗೆ ಹೆಚ್ಚು ಇಷ್ಟವಾಗುತ್ತಿದೆ.
60 ಸೆಕೆಂಡುಗಳ ವಿಡಿಯೋ ಮೆಸೇಜ್ ಶೇರಿಂಗ್ ಫೀಚರ್ ಬಾರಿ ವೈರಲ್ ಆಗುತ್ತಿದೆ. ಇದೀಗ ಕಂಪನಿಯು ಈ ಫೀಚರ್ ನ ಬೆನ್ನಲ್ಲೇ ಮತ್ತೊಂದು ಫೀಚರ್ ಬಿಡುಗಡೆಗೊಳಿಸಿ ಸಜ್ಜಾಗಿದೆ. ಈ ನೂತನ ಫೀಚರ್ ವಿಡಿಯೋ ಮೆಸೇಜ್ ಶೇರಿಂಗ್ ಫೀಚರ್ ಗಿಂತ ಹೆಚ್ಚು ಬಳಕೆದಾರರಿಗೆ ಇಷ್ಟವಾಗಲಿದೆ.
QR Code Data Transfer
ವಾಟ್ಸಾಪ್ ಇದೀಗ QR Code Data Transfer Feature ಅನ್ನು ಬಳಕೆದಾರರಿಗೆ ನೀಡಲಿದೆ. ಬಳಕೆದಾರರು ಈ ಫೀಚರ್ ನಿಂದ ಸುಲಭವಾಗಿ ನಿಮ್ಮ ಸಂಪರ್ಕದ ವಿವರವನ್ನು ತಿಳಿಯಬಹುದಾಗಿದೆ. QR ಕೋಡ್ ಬಳಸುವ ಮೂಲಕ ನಿಮ್ಮ ವಾಟ್ಸಾಪ್ ಸಂಪರ್ಕವನ್ನು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ನಿಮ್ಮ ವಾಟ್ಸಾಪ್ ಸೆಟ್ಟಿಂಗ್ ನಲ್ಲಿಯೇ ಈ ಫೀಚರ್ ಅನ್ನು ಕಾಣಬಹುದಾಗಿದೆ.
WhatsApp QR Code Setting
*ನಿಮ್ಮ ವಾಟ್ಸಾಪ್ ಖಾತೆಯನ್ನು ತೆರೆದು ಅದರಲ್ಲಿ Setting ಆಯ್ಕೆಯನ್ನು ಕ್ಲಿಕ್ ಮಾಡಿ.
*ನೀವು ಸೆಟ್ಟಿಂಗ್ ಕ್ಲಿಕ್ ಮಾಡಿದಾಗ ಅಲ್ಲಿ ನಿಮ್ಮ Profile ಕಾಣಿಸುತ್ತದೆ. ನಿಮ್ಮ ಪ್ರೊಫೈಲ್ ನ ಬಲ ಭಾಗದಲ್ಲಿ QR Code ಕಾಣಿಸುತ್ತದೆ.
*QR Code ಐಕಾನ್ ಮೇಲೆ ಟ್ಯಾಪ್ ಮಾಡಿದರೆ ಅಲ್ಲಿ My Code ಕಾಣಿಸುತ್ತದೆ.
*ಮೈ ಕೋಡ್ ಸೆಕ್ಷನ್ ನಲ್ಲಿ ನೀವು ನಿಮ್ಮ QR code ಸ್ಕ್ಯಾನರ್ ಅನ್ನು ಕಾಣುತ್ತೀರಿ.
*ಈ ಕೋಡ್ ಅನ್ನು ಸ್ಕಾನ್ ಮಾಡುವ ಮೂಲಕ ನೀವು ಸುಲಭವಾಗಿ ನಿಮ್ಮ ಸಂಪರ್ಕದ ವಿವರವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.