WhatsApp: ಖಾಲಿಯಾಗಲಿದೆ ವಾಟ್ಸಾಪ್ ಬಳಸುವವರ ಬ್ಯಾಂಕ್ ಖಾತೆ, ಪೊಲೀಸ್ ಇಲಾಖೆಯಿಂದ ಎಚ್ಚರಿಕೆ.
ವಾಟ್ಸಾಪ್ ನ ಮೂಲಕ ನೆಡೆಯುವ ವಂಚನೆಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಪೊಲೀಸರು.
WhatsApp Scam Alert: ಜನರು ಮಾತನಾಡಲು ಬಳಸುವ ಅಗತ್ಯ ಅಪ್ಲಿಕೇಶನ್ ಅಂದರೆ ಅದು ವಾಟ್ಸಾಪ್ (WhatsApp) ಎಂದು ಹೇಳಬಹುದು. ಹೌದು ಚಾಟ್ ಮಾಡಲು, ಕಾಲ್ ಮಾಡಲು ಮತ್ತು ಅಗತ್ಯ ದಾಖಲೆಗಳನ್ನ ಕಳುಹಿಸಲು ಜನರು ವಾಟ್ಸಾಪ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಸದ್ಯ ವಾಟ್ಸಪ್ಪ್ ನಲ್ಲಿ ಪೇಮೆಂಟ್ ಕೂಡ ಮಾಡುವ ಸೌಲಭ್ಯ ಇದ್ದು ಸಾಕಷ್ಟು ಜನರು ವಾಟ್ಸಾಪ್ ಮೂಲಕ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಾರೆ ಎಂದು ಹೇಳಬಹುದು. ಸದ್ಯ ಇದರ ನಡುವೆ ವಾಟ್ಸಪ್ ನಲ್ಲಿ ವಂಚನೆ ಮಾಡುವ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಸಾಕಷ್ಟು ಜನರು ತಮ್ಮ ಹಣವನ್ನ ಕಳೆದುಕೊಂಡಿದ್ದಾರೆ.
WhatsApp ಮೂಲಕ ವಂಚನೆ
ಇಂಟರ್ನೆಟ್ ಜಗತ್ತಿನಲ್ಲಿ ಎಷ್ಟೇ ಕಾಳಜಿ ವಹಿಸಿದರು ಕೂಡ ನಾವು ಮಾಡುವ ಸಣ್ಣ ತಪ್ಪಿನಿಂದ ಬಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ವಿಶ್ವದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp) ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ.
ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಹತ್ತು ಹಲವು ಹೊಸ ಹೊಸ ಫೀಚರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ದಿನೇ ದಿನೇ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಬಿಡುಗಡೆಗೊಳ್ಳುತ್ತಿದೆ. ಇನ್ನು ವಾಟ್ಸಾಪ್ ನಲ್ಲಿ ಹೆಚ್ಚು ಹೆಚ್ಚು ಫೀಚರ್ ಬಿಡುಗಡೆಗೊಳ್ಳುದರ ಜೊತೆಗೆ ಕೆಲವು ವಂಚನೆಗಳು ನಡೆಯುತ್ತಿವೆ. ಇದೀಗ ವಾಟ್ಸಾಪ್ ನ ಮೂಲಕ ವಂಚನೆಗಳು ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಬಳಕೆದಾರರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ವಾಟ್ಸಪ್ಪ್ ಬಳಸುವವರಿಗೆ ಪೋಲೀಸರ ಎಚ್ಚರಿಕೆ
ವಾಟ್ಸಾಪ್ ಮೂಲಕ ನಡೆಯುವ ವಂಚನೆಯ ಪ್ರಕರಣದ ಬಗ್ಗೆ ಕೋಲ್ಕತ್ತಾ ಪೊಲೀಸರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದೀಗ ವಂಚಕರು ನಿಮ್ಮ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಐಡಿ ರಚಿಸಿ ಬೇರೆಯವರ ಬಳಿ ಹಣವನ್ನು ಪಡೆಯಲು ಪ್ರಾಂಭಿಸಿದ್ದಾರೆ.
ಕೆಲವೊಮ್ಮೆ ವಾಟ್ಸಾಪ್ ಖಾತೆಯನ್ನು ಕೂಡ ಹ್ಯಾಕ್ ಮಾಡಿ ಫೇಕ್ ಐಡಿ ಸೃಷ್ಟಿಸಿ ವಾಟ್ಸಾಪ್ ಮೂಲಕ ಕೂಡ ನಿಮ್ಮ ಹೆಸರಿನಲ್ಲಿ ಬೇರೆಯವರ ಬಳಿ ಹಣ ಕೇಳಿ ವಂಚನೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಬಳಕೆದಾರರು ಯಾವುದೇ ಕಾರಣಕ್ಕೂ ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬಾರದು.
ಇನ್ನು ಸೂಕ್ತ ಮಾಹಿತಿ ಇಲ್ಲದೆ ಯಾರಿಗೂ ಕೂಡ ಯಾವುದೇ ರೀತಿಯ ಒಟಿಪಿಯನ್ನು ಕೂಡ ನೀಡಬಾರದು. ಯಾವುದೇ ರೀತಿಯ ಸ್ಕ್ಯಾಮ್ ಗಳಿಗೆ ಒಳಗಾಗಬಾರದು ಎಂದು ಪೊಲೀಸರು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.