Scam Message: ವಾಟ್ಸಾಪ್ ನಿಂದ ನಿಮಗೆ ಈ ಮೆಸೇಜ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ, ಕೊನೆಯ ಎಚ್ಚರಿಕೆ.

ವಾಟ್ಸಾಪ್ ಬಳಕೆದಾರರಿಗೆ ಕೊನೆಯ ಎಚ್ಚರಿಕೆ, ಎಚ್ಚರ ತಪ್ಪಿದರೆ ಖಾತೆ ಖಾಲಿ.

WhatsApp Scam Message: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಹೆಚ್ಚು ಬಳಕೆದಾರರನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಹೆಚ್ಚಿನ ಫೀಚರ್ ನ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇತ್ತೀಚೆಗಂತೂ ವಾಟ್ಸಾಪ್ ನಲ್ಲಿ ವಿಭಿನ್ನ ಫೀಚರ್ ಗಳನ್ನೂ ಬಿಡುಗಡೆಗೊಳಿಸಲಾಗಿದೆ.

ಬಳಕೆದಾರರು ಹೊಸ ಹೊಸ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ವಾಟ್ಸಾಪ್ ನಲ್ಲಿ ಇತ್ತೀಚಿಗೆ ವಂಚನೆಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಒಂದಲ್ಲ ಒಂದು ರೀತಿಯ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ.

WhatsApp users should be careful
Image Credit: Lokmat

ವಾಟ್ಸಾಪ್ ಬಳಕೆದಾರರು ಎಚ್ಚರ ವಹಿಸಬೇಕು
ವಂಚಕರು ಇತ್ತೀಚಿಗೆ ಜನರನ್ನು ಸುಲಭವಾಗಿ ಯಾಮಾರಿಸುತ್ತಿದ್ದಾರೆ. ಯಾವುದೇ ಒಂದು ಸಣ್ಣ ಲಿಂಕ್ ನ ಮೇಲೆ ಕ್ಲಿಕ್ ಮಾಡಿದರು ಕೂಡ ಜನರು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುವ ಪರಿಸ್ಥಿತಿ ಎದುರಾಗಿದೆ. ವ್ಯಕ್ತಿಯ ಸಣ್ಣ ವೈಯಕ್ತಿಯ ಮಾಹಿತಿಯ ಆಧಾರದ ಮೇಲೆ ದೊಡ್ಡ ವಂಚನೆಯನ್ನೇ ಮಾಡಬಹುದಾಗಿದೆ. ಹೀಗಾಗಿ ಯಾರೊಬ್ಬರೂ ಕೂಡ ತಮ್ಮ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ನೀಡಬಾರದು.

ಇತ್ತೀಚಿಗೆ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಯ ವೇಳೆ ಕೂಡ ವಿವಿಧ ರೀತಿಯ ಸ್ಕ್ಯಾಮ್ ಗಳು ನಡೆದಿದ್ದವು. ಆದರೆ ಇದೀಗ ಮತ್ತೆ ವಾಟ್ಸಾಪ್ ನ ಮೂಲಕ ಹಗರಣ ನಡೆಯುತ್ತಿದೆ. ವಾಟ್ಸಾಪ್ ನಲ್ಲಿ ಬರುದ ಒಂದು ಸಂದೇಶ ಜನರಿಗೆ ಹೆಚ್ಚಿನ ನಷ್ಟವನ್ನು ನೀಡಲಿದೆ. ನಿಮಗೂ ಈ ರೀತಿಯ ಸಂದೇಶ ಬಂದಿದ್ದರೆ ನೀವು ಎಚ್ಚರ ವಹಿಸಿ. ಯಾವುದೇ ಕಾರಣಕ್ಕೂ ಸುಳ್ಳು ಸಂದೇಶಗಳಿಗೆ ಗಮನ ಹರಿಸಬೇಡಿ.

WhatsApp scams have started again
Image Credit: TV9hindi

ವಾಟ್ಸಾಪ್ ನಿಂದ ನಿಮಗೆ ಈ ಮೆಸೇಜ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ
ಕಡಿಮೆ ಬೆಲೆಯಲ್ಲಿ ನಿಮಗೆ ಐಫೋನ್ ಸಿಗಲಿದೆ. ಕೂಡಲೇ ಈ ನಂಬರ್ ಗೆ ಕರೆ ಮಾಡಿ ಎನ್ನುವ ಸಂದೇಶವನ್ನು ಕಳುಹಿಸುವ ಮೂಲಕ ಇತ್ತೀಚಿಗೆ ವಾಟ್ಸಾಪ್ ಸ್ಕ್ಯಾಮ್ ಗಳು ಮತ್ತೆ ಶುರುವಾಗಿದೆ. ಇಂತಹ ಸ್ಕ್ಯಾಮ್ ಸಂದೇಶಗಳು ನಿಮಗೆ ಬಂದರೆ ನೀವು ಎಚ್ಚರ ವಹಿಸಬೇಕು. ಕೂಡಲೇ ಸೈಬರ್ ಕ್ರೈಮ್ ಪೋರ್ಟಲ್ ನಲ್ಲಿ ರಿಪೋರ್ಟ್ ಮಾಡಬೇಕು. ವಾಟ್ಸಾಪ್ ಕರೆಯ ಮೂಲಕ ವಂಚನೆ ಹೆಚ್ಚುತ್ತಿರುವ ಕಾರಣ ಇಂಟರ್ನೆಟ್ ಜಗತ್ತಿನಲ್ಲಿ ಎಷ್ಟು ಎಚ್ಚರ ವಹಿಸಿದರು ಸಾಕಾಗುವುದಿಲ್ಲ.

Join Nadunudi News WhatsApp Group

ಬೇರೆ ದೇಶದ ಕೋಡ್ ಗಳಿಂದ ಸಂದೇಶ ಬರಲಿದೆ
ವಾಟ್ಸಾಪ್ ನ ಮೂಲಕ ವಿವಿಧ ರೀತಿಯ ಉಡುಗೊರೆಗಳ ಆಸೆಯನ್ನು ತೋರಿಸಿ ವಂಚಕರು ಸುಲಭವಾಗಿ ಜನರನ್ನು ಯಾಮಾರಿಸುತ್ತಿದ್ದಾರೆ. ಬೇರೆ ದೇಶದ ಕೋಡ್ ಗಳಿಂದ ವಾಟ್ಸಾಪ್ ಗೆ ಸಂದೇಶ ಅಥವಾ ಕರೆ ಬರಲಿದೆ. ಇನ್ನು +92 ಕೋಡ್ ನಿಂದ ಆರಂಭವಾಗುವ ಸಂಖ್ಯೆಯಿಂದ ಅಪರಿಚಿತ ಕಾಲ್ ನಿಮಗೆ ಬದಿದ್ದರೆ ಅದರ ಬಗ್ಗೆ ನೀವು ರಿಪೋರ್ಟ್ ಮಾಡಬೇಕು. ಏಕೆಂದರೆ +92 ಕೋಡ್ ಪಾಕಿಸ್ತಾನ ದೇಶದ ಕೋಡ್ ಆಗಿದೆ.

WhatsApp scams have started again
Image Credit: Ladbible

ಈ ಕೋಡ್ ನಿಂದ ಕರೆ ಅಥವಾ ಸಂದೇಶ ಬರಲು ಪ್ರಾರಂಭವಾಗಿದೆ. ಐಫೋನ್ 14 ನ ಆಮಿಷ ಒಡ್ಡುವ ಮೂಲಕ ನಿಮ್ಮ ಖಾತೆಯ ಹಣವನ್ನು ಸಂಪೂರ್ಣವಾಗಿ ಖಾಲಿ ಮಾಡುವ ಸಂದೇಶ ಇದಾಗಿರುತ್ತದೆ. ವಾಟ್ಸಾಪ್ ಸೇರಿದಂತೆ ಇನ್ನಿತರ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಅಪರಿಚತ ವ್ಯಕ್ತಿಗಳ ಸಂದೇಶ ಅಥವಾ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಇನ್ನು ಯಾವುದೇ ಸೂಕ್ತ ಮಾಹಿತಿ ಇಲ್ಲದೆ ಮೂರನೇ ವ್ಯಕ್ತಿಗೆ OTP ಮಾಹಿತಿ ನೀಡಬಾರದು.

Join Nadunudi News WhatsApp Group