WhatsApp Misuse: ನಿಮಗೆ ತಿಳಿಯದಂತೆ ನಿಮ್ಮ ಮೊಬೈಲ್ ನ ಈ ಸಾಧನವನ್ನ ಬಳಸುತ್ತದೆ ವಾಟ್ಸಾಪ್, ಜನರೇ ಎಚ್ಚರ.

ವಾಟ್ಸಾಪ್ ಬಳಕೆದಾರರ ಮೊಬೈಲ್ ನಿಂದ ಅವರಿಗೆ ತಿಳಿಯದಂತೆ ಕೆಲವು ಸಾಧನಗಳನ್ನ ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡಲಾಗಿದೆ.

WhatsApp: ವಾಟ್ಸಾಪ್ (WhatsApp) ಇದೀಗ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸಿದೆ. ಹೊಸ ಹೊಸ ಫೀಚರ್ ಗಳ ಮೂಲಕ ವಾಟ್ಸಾಪ್ ತನ್ನ ಗ್ರಾಹಕರನ್ನು ಮತ್ತಷ್ಟು ಸೆಳೆಯುತ್ತಿದೆ. ಇನ್ನು ಇತ್ತೀಚೆಗಷ್ಟೇ ಸಿಇಒ ಎಲೊನ್ ಮಸ್ಕ್ (Elon Musk) ವಾಟ್ಸಾಪ್ ವಿರುದ್ಧ ದೂರು ನೀಡಿದ್ದರು. ವಾಟ್ಸಾಪ್ ಬಳಕೆದಾರರಿಗೆ ಎಲೊನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಬಗ್ಗೆ ವಾಟ್ಸಾಪ್ ತನಿಖೆ ನಡೆಸಿ ಮಾಹಿತಿ ನೀಡಿದೆ.

WhatsApp Misuse
Image Credit: mashable

ವಾಟ್ಸಾಪ್ ವಿರುದ್ಧ ಆರೋಪ ಮಾಡಿದಾ ಎಲೊನ್ ಮಸ್ಕ್
ಇನ್ನು ಟ್ವಿಟರ್ ಇಂಜಿನಿಯರ್ ಫೊಡ್ ಡಬೀರ್ ತನ್ನ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಕೆ ಮಾಡೇ ಇದ್ದಾಗಲೂ ತಾವು ಮಲಗಿದ್ದ ಸಮಯದಲ್ಲಿ ನಿರಂತರವಾಗಿ ಮೈಕ್ರೊಫೋನ್ ಬ್ಯಾಕ್ ಗ್ರೌಂಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ ಎನ್ನುವ ಆಘಾತಕಾರಿ ವಿಷಯವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಸ್ಕ್ರೀನ್ ಶಾರ್ಟ್ ಅನ್ನು ಕೂಡ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಯಾವುದನ್ನೂ ನಂಬಬೇಡಿ ಎಂದು ಪರೋಕ್ಷವಾಗಿ ವಾಟ್ಸಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ದೂರಿನ ಬಗ್ಗೆ ಮಾಹಿತಿ ನೀಡಿದ ವಾಟ್ಸಾಪ್
ಎಲೊನ್ ಮಸ್ಕ್ ಮಾಡಿರುವ ಆರೋಪದ ಬಗ್ಗೆ ಭಾರತ ಸರ್ಕಾರ ತನಿಖೆ ನಡೆಸಿದೆ. ಇದು ಸ್ವೀಕಾರ್ಹವಲ್ಲದ ಉಲ್ಲಂಘನೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗಿದೆವೆಂದು ವರದಿಯಾಗಿದೆ.

It has now been revealed that WhatsApp is constantly running on microphone background while people are sleeping.
Image Credit: dnaindia

ಟ್ವೀಟ್ ನಲ್ಲಿ ವಾಟ್ಸಾಪ್ ದುರ್ಬಳಕೆಯ ಬಗ್ಗೆ ವೈರಲ್ ಆದಾ ಬಳಿಕ ವಾಟ್ಸಾಪ್ ಈ ವಿಷಯವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಇದಕ್ಕೆಲ್ಲ ಕಾರಣ ಆಂಡ್ರಾಯ್ಡ್ ಫೋನ್ ಎಂದು ವಾಟ್ಸಾಪ್ ದೂಷಿಸಿದೆ.

Join Nadunudi News WhatsApp Group

ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸಾಪ್ ಈ ಸಮಸ್ಯೆ ಆಂಡ್ರಾಯ್ಡ್ ನಲ್ಲಿದೆ ಮತ್ತು ವಾಟ್ಸಾಪ್ ನಲ್ಲಿ ಯಾವುದೇ ತೊಂದರೆ ಇಲ್ಲ. ವಾಟ್ಸಾಪ್ ನಲ್ಲಿ ನಡೆಯುವ ಎಲ್ಲ ಸಂದೇಶಗಳು ಮತ್ತು ಕರೆಗಳು ಎಂಡ್ ಟು ಎಂಡ್ ಎನ್ಕ್ರಿಪ್ಟ್ ಆಗಿದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ.

Join Nadunudi News WhatsApp Group