WhatsApp: ವಾಟ್ಸಾಪ್‌ ಸೇರಿದ ಹೊಸ ಫೀಚರ್ಸ್‌! ಏನಿದು ಸಿಕ್ರೆಟ್‌ ಕೋಡ್‌? ಇದನ್ನು ಬಳಸುವುದು ಹೇಗೆ?

ಇದೀಗ ವಾಟ್ಸಾಪ್‌ ತನ್ನ ಬಳಕೆದಾರಿಗೆ ಸಿಕ್ರೆಟ್‌ ಕೋಡ್‌ ಫೀಚರ್ಸ್‌ ಪರಿಚಯಿಸಿದೆ

WhatsApp Secret Code Feature: ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇದೀಗ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ.

ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ ಗಳನ್ನೂ ಪರಿಚಯಿಸಿದೆ. ಮೆಟಾ (Meta) ತನ್ನ ವಾಟ್ಸಪ್ ಚಾಟಿಂಗ್ ಸಿಸ್ಟಮ್ ಅಲ್ಲಿ ಕೂಡ ಸಂಪೂರ್ಣ ಬದಲಾವಣೆಯನ್ನು ತಂದಿದೆ. ಇದೀಗ ವಾಟ್ಸಾಪ್‌ ತನ್ನ ಬಳಕೆದಾರಿಗೆ ಸಿಕ್ರೆಟ್‌ ಕೋಡ್‌ ಫೀಚರ್ಸ್‌ ಪರಿಚಯಿಸಿದೆ.

WhatsApp New Feature
Image Credit: 91mobiles

ವಾಟ್ಸಾಪ್‌ ಚಾಟ್‌ಲಾಕ್‌ ಫೀಚರ್
ಇತ್ತೀಚಿಗೆ ವಾಟ್ಸಾಪ್‌ ಚಾಟ್‌ಲಾಕ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಬಳಕೆದಾರರು ತೀರಾ ಸಿಕ್ರೆಟ್‌ ಎನಿಸುವ ಚಾಟ್‌ಗಳನ್ನು ಲಾಕ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಈ ಚಾಟ್‌ಗಳನ್ನು ತೆರೆಯುವುದಕ್ಕೆ ಬಯೋಮೆಟ್ರಿಕ್‌ ದೃಡೀಕರಣದ ಅಗತ್ಯ ಇದೆ. ಆದರೆ ನೀವು ಲಾಕ್‌ ಮಾಡಿದ ಚಾಟ್‌ಗಳನ್ನು ಸುಲಭವಾಗಿ ಸರ್ಚ್‌ ಮಾಡುವುದಕ್ಕೆ ಯಾವುದೇ ಆಯ್ಕೆಗಳನ್ನು ನೀಡಿರಲಿಲ್ಲ. ಇದೇ ಕಾರಣಕ್ಕೆ ವಾಟ್ಸಾಪ್‌ ಇದೀಗ ಸಿಕ್ರೆಟ್‌ ಕೋಡ್‌ ಎಂಬ ಫೀಚರ್ ಅನ್ನು ಪರಿಚಯಿಸಿದೆ.

ವಾಟ್ಸಾಪ್‌ ಸಿಕ್ರೆಟ್‌ ಕೋಡ್‌ ಫೀಚರ್
ಇದೀಗ ವಾಟ್ಸಾಪ್‌ ತನ್ನ ಬಳಕೆದಾರಿಗೆ ಸಿಕ್ರೆಟ್‌ ಕೋಡ್‌ ಎನ್ನುವ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದು ಚಾಟ್‌ಲಾಕ್‌ ಬಳಸುವವರಿಗೆ ಉಪಯುಕ್ತವಾಗಿದೆ. ಲಾಕ್‌ ಮಾಡಿದ ಚಾಟ್‌ ಸರ್ಚ್‌ ಮಾಡುವುದು ಕಷ್ಟವಾಗುತ್ತದೆ, ಹಾಗಾಗಿ ಚಾಟ್‌ಲಾಕ್ ಮಾಡಿದ ಚಾಟ್‌ಗಳನ್ನು ಸುಲಭವಾಗಿ ಪ್ರವೇಶಿಸಲು ವಾಟ್ಸಾಪ್‌ ನ ಈ ಹೊಸ ಫೀಚರ್ ಸಹಾಯವಾಗಲಿದೆ. ಇದೀಗ ವಾಟ್ಸಾಪ್ ಬಳಕೆದಾರರಿಗೆ ಚಾಟ್ ಅನ್ನು ಲಾಕ್ ಮಾಡುವಾಗ ಸಿಕ್ರೆಟ್‌ ಕೋಡ್‌ ಸೆಟ್‌ ಮಾಡುವ ಆಯ್ಕೆಯನ್ನು ನೀಡುತ್ತದೆ.

WhatsApp Secret Code Feature
Image Credit: Maharashtratimes

ವಾಟ್ಸಾಪ್‌ ಸಿಕ್ರೆಟ್‌ ಕೋಡ್‌ ಫೀಚರ್ ವಿಶೇಷತೆ
ವಾಟ್ಸಾಪ್‌ ಸರ್ಚ್‌ ಬಾರ್‌ನಲ್ಲಿ ಬಳಕೆದಾರರು ಸಿಕ್ರೆಟ್‌ ಕೋಡ್‌ ಮೂಲಕ ಲಾಕ್‌ ಆದ ಚಾಟ್‌ ಅನ್ನು ಸರ್ಚ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಲಾಕ್ ಮಾಡಿದ ಚಾಟ್‌ನ ಹೆಸರನ್ನು ತೋರಿಸುತ್ತದೆ. ಆಗ ನೀವು ನಿಮ್ಮ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಚಾಟ್ ಅನ್ನು ಅನ್ ಲಾಕ್ ಮಾಡಬಹುದು. ಇನ್ನು ಸಿಕ್ರೆಟ್‌ ಕೋಡ್‌ ನಲ್ಲಿ ಬಳಕೆದಾರರು ಯಾವುದೇ ಟೆಕ್ಸ್ಟ್‌ ಅಥವಾ ಇಮೋಜಿ ಅನ್ನು ಸೆಟ್‌ ಮಾಡಬಹುದು.

Join Nadunudi News WhatsApp Group

ಪ್ರಸ್ತುತ ಇದನ್ನು ಆಂಡ್ರಾಯ್ಡ್‌ ಬೀಟಾ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗಿದೆ. ಇನ್ನು ಚಾಟ್ ಲಾಕ್ ಫೀಚರ್ಸ್‌ ಪ್ರಸ್ತುತ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಲಭ್ಯವಾಗಿಲ್ಲ. ಇದು ಕೇವಲ ಬಳಕೆದಾರರ ಪ್ರಾಥಮಿಕ ಡಿವೈಸ್‌ನಲ್ಲಿ ಮಾತ್ರ ಲಭ್ಯವಿದೆ. ವಾಟ್ಸಾಪ್‌ ಸದ್ಯದಲ್ಲೇ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಚಾಟ್ ಲಾಕ್ ಫೀಚರ್ಸ್‌ ಅನ್ನು ಪರಿಚಯಿಸುವ ನಿರೀಕ್ಷೆ ಕೂಡ ಇದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪರಿಪೂರ್ಣ ಮಾಹಿತಿ ಬಹಿರಂಗವಾಗಲಿದೆ.

Join Nadunudi News WhatsApp Group