WhatsApp Trick: ಇನ್ಮುಂದೆ ವಾಟ್ಸಾಪ್ ಬಳಸಲು ಇಂಟರ್ನೆಟ್ ಅಗತ್ಯ ಇಲ್ಲ, ವಾಟ್ಸಾಪ್ ನಿಂದ ಬಿಗ್ ಅಪ್ಡೇಟ್

ಇನ್ಮುಂದೆ ವಾಟ್ಸಾಪ್ ಅನ್ನು ಇಂಟರ್ನೆಟ್ ಇಲ್ಲದೆ ಬಳಕೆ ಮಾಡಬಹುದು

WhatsApp Using By Without Internet: ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್ ಅಂದರೆ ಅದು WhatsApp ಎಲ್ಲರ ಮೊಬೈಲ್ ನಲ್ಲಿ ಕೂಡ ವಾಟ್ಸಾಪ್ ಇದ್ದೆ ಇರುತ್ತದೆ.  ಯಾವುದೇ ಫೋಟೋ ಸೆಂಡ್ ಮಾಡಲು, ಸಂದೇಶ ಕಳುಹಿಸಲು ಈಗ ಎಲ್ಲರೂ ವಾಟ್ಸಾಪ್ ಬಳಸುವುದು ಸಹಜವಾಗಿದೆ. ವಾಟ್ಸಾಪ್ ನೋಡದೆ ಎಲ್ಲರ ದೈನಂದಿನ ಜೀವನ ಶುರು ಆಗುವುದೇ ಇಲ್ಲ ಎಂದರೆ ತಪ್ಪಾಗಲಾರದು.

ವಾಟ್ಸಾಪ್ ನಲ್ಲಿ ಈಗ ಹಲವಾರು ಅಪ್ಡೇಟ್ ಗಳು ಬಂದಿರುದರಿಂದ ವಾಟ್ಸಾಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಇನ್ನು ಇಂಟರ್ನೆಟ್ ಇಲ್ಲದೆ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಬಳಕೆ ಮಾಡುವುದು ಅಸಾಧ್ಯ. ಇದೀಗ ನಾವು ಈ ಲೇಖನದಲ್ಲಿ ಇಂಟರ್ ನೆಟ್ ಇಲ್ಲದೆ ವಾಟ್ಸಾಪ್ ಬಳಕೆಯ ಬಗೆ ಮಾಹಿತಿ ಹೇಳಲಿದ್ದೇವೆ.

WhatsApp Using Latest Update
Image Credit: Elpais

ಇಂಟರ್ನೆಟ್ ಇಲ್ಲದೆಯೂ ವಾಟ್ಸಾಪ್ ನಲ್ಲಿ ಚಾಟ್ ಮಾಡಬಹುದು
ಯಾವುದೇ ಸಂದೇಶ ಅಥವಾ ಯಾವುದೇ ಫೋಟೋ ಕಳುಹಿಸಬೇಕಾದರು ಕೂಡ ನಮಗೆ ಇಂಟರ್ನೆಟ್ ವ್ಯವಸ್ಥೆ ಇರಲೇ ಬೇಕು. ಕರೆ ಮಾಡುವುದನ್ನು ಬಿಟ್ಟರೆ ಇಂಟರ್ನೆಟ್ ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ.ಆದರೆ ಇಂಟರ್ನೆಟ್ ನ ಸಹಾಯ ಇಲ್ಲದೆ ಇಂದಿನ ದಿನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು ಎಂದರೆ ನೀವು ನಂಬುತ್ತೀರಾ…?

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನ ಸೌಲಭ್ಯ ಇಲ್ಲದೆಯೂ ಕೂಡ ಎಲ್ಲರೂ ವಾಟ್ಸಾಪ್ ಅನ್ನು ಬಳಸಿ ಪರಸ್ಪರ ಒಬ್ಬರ ಜೊತೆ ಒಬ್ಬರು ಚಾಟ್ ಮಾಡಬಹುದು, ಸಂದೇಶ ಕಳುಹಿಸಬಹುದು,ವಾಯ್ಸ್ ರೆಕಾರ್ಡರ್ ಕೂಡ ಕಳುಹಿಸಬಹುದು. ವಾಟ್ಸಾಪ್ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಕೂಡ ಕಾರ್ಯನಿರ್ವಹಿಸುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.

WhatsApp Using By Without Internet
Image Credit: Times Of
India

ಇಂಟರ್ನೆಟ್ ಇಲ್ಲದೆ ವಾಟ್ಸಾಪ್ Use ಮಾಡುವುದು ಹೇಗೆ..?
ಇದು ಇತ್ತೀಚೆಗೆ ತನ್ನ Android, iOS ಮತ್ತು ವೆಬ್ ಬಳಕೆದಾರರಿಗಾಗಿ ಪ್ರಾಕ್ಸಿ ಎಂಬ ವೈಶಿಷ್ಟ್ಯವನ್ನು ಅನಾವರಣಗೊಳಿಸಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸುಲಭವಾಗಿ ಸಂವಹನ ಮಾಡಬಹುದು. ಅಂದರೆ ಈ ಪ್ರಾಕ್ಸಿ ಆಯ್ಕೆಯ ಮೂಲಕ ಸಂದೇಶ, ಫೋಟೋ, ವಿಡಿಯೋ ಕಳುಹಿಸಬಹುದು. ಸರ್ಕಾರದ ಸೆನ್ಸಾರ್‌ ಶಿಪ್‌ ನಿಂದಾಗಿ ಇಂಟರ್ನೆಟ್ ಅಡ್ಡಿಪಡಿಸಿದರೆ ಅಥವಾ ನಿರ್ಬಂಧಿಸಿದರೆ ಬಳಕೆದಾರರು ಪ್ರಾಕ್ಸಿ ವೈಶಿಷ್ಟ್ಯವನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಬಳಸಬಹುದು.

Join Nadunudi News WhatsApp Group

ಬಳಕೆದಾರರು ತಮ್ಮ ಪ್ರದೇಶದಲ್ಲಿ ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಅಥವಾ ನಿರ್ಬಂಧಿಸಿದಿದ್ದರೂ ಸಹ WhatsApp ನ ಈ ವೈಶಿಷ್ಟ್ಯವನ್ನು ಪಡೆಯಬಹುದು. ಸಾಮಾನ್ಯವಾಗಿ ಕೆಲವು ಸಂಸ್ಥೆಗಳು ಅಥವಾ ವ್ಯಾಲೆಂಟರಿಗಳು ಈ ಪ್ರಾಕ್ಸಿ ಸರ್ವರ್‌ ಗಳನ್ನು ರಚಿಸಿದ್ದಾರೆ. ನಂತರ ಅದನ್ನು ಬಳಕೆದಾರರಿಗೆ ಬಳಸಲು ಆನ್‌ ಲೈನ್‌ ನಲ್ಲಿ ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ನೀವು ಲಭ್ಯವಿರುವ ಸರ್ವರ್ ಮೂಲಕ WhatsApp ಅನ್ನು ಬಳಸಬಹುದು.

Join Nadunudi News WhatsApp Group