Voice Note: ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ಗುಡ್ ನ್ಯೂಸ್, ವಾಯ್ಸ್ ಫೀಚರ್ ಬಿಡುಗಡೆ.

ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವವರಿಗೆ ಈಗ ವಾಟ್ಸಾಪ್ ನಲ್ಲಿ ವಾಯ್ಸ್ ನೋಟ್ ಫೀಚರ್ ಅನ್ನು ಜಾರಿಗೆ ತಂದಿದೆ.

WhatsApp Status Voice Note Feature: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇದೀಗ ಹೊಸ ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ದಿನೇ ದಿನೇ ಹೊಸ ಅಪ್ಡೇಟ್ ಗಳನ್ನೂ ಹೊಂದಿದೆ. ಭಾರತದಲ್ಲಿ ಅದೆಷ್ಟೋ ಮಿಲಿಯನ್ ಗಳಷ್ಟು ಜನರು ವಾಟ್ಸಾಪ್ ಅನ್ನು ಬಳಸುತ್ತಾರೆ. ಇದೀಗ ವಾಟ್ಸಾಪ್ ಹೊಸ ಅಪ್ಡೇಟ್ ಅನ್ನು ಪರಿಚಯಿಸಲಾಗಿದೆ.

WhatsApp Status Voice Note Feature
Image Source: Siasat.com

ವಾಟ್ಸಾಪ್ ನಲ್ಲಿ ಹೊಸ ಫೀಚರ್
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರಗಳನ್ನು ಪರಿಚಯ ಮಾಡುವ ಮೂಲಕ ಎತ್ತರ ಸ್ಥಾನದಲ್ಲಿದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸದೊಂದು ಫೀಚರ್ ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಸ್ಟೇಟಸ್ (WhatsApp Status) ನಲ್ಲಿ ಹೊಸ ಫೀಚರ್ ಅನ್ನು

ಬಿಡುಗಡೆ ಮಾಡಲಿದೆ. ಈ ಫೀಚರ್ಸ್ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿ ಲಭ್ಯವಾಗಲಿದೆ.

WhatsApp Status Voice Note Feature
Image Source: The Economic Times

ವಾಟ್ಸಾಪ್ ವಾಯ್ಸ್ ನೋಟ್ ಫೀಚರ್ (WhatsApp Voice Note Feature) 
ವಾಟ್ಸಾಪ್ ಬಳಕೆದಾರರು ಸ್ಟೇಟಸ್ ಅನ್ನು ಅಪ್ಲೋಡ್ ಮಾಡುವುದ ಸಹಜವಾದ ವಿಷಯ. ವಾಟ್ಸಾಪ್ ಸ್ಟೇಟಸ್ ಗಳು 24 ಗಂಟೆಗಳ ಕಾಲ ಇರುತ್ತವೆ. ನೀವು ನಿಮ್ಮ ಸ್ಟೇಟಸ್ ಅನ್ನು ಡಿಲೀಟ್ ಮಾಡುವ ತನಕ ಅವು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇದೀಗ ವಾಟ್ಸಾಪ್ ಸ್ಟೇಟಸ್ ನಲ್ಲಿ ಹೊಸ ಅಪ್ಡೇಟ್ ಬಂದಿದೆ. ಇನ್ನುಮುಂದೆ ನೀವು ವಾಟ್ಸಾಪ್ ಸ್ಟೇಟಸ್ ನಲ್ಲಿ ವಾಯ್ಸ್ ನೋಟ್ ಅನ್ನು ಹಾಕಬಹುದು.

ವಾಟ್ಸಾಪ್ ಚಾಟ್ ನಲ್ಲಿ ಹೇಗೆ ಆಡಿಯೋ ರೆಕಾರ್ಡ್ ಕಳುಹಿಸುತ್ತಿರೋ ಹಾಗೆಯೆ ವಾಟ್ಸಪ್ ಸ್ಟೇಟಸ್ ಗೆ ಸ್ಟೇಟಸ್ ನಲ್ಲಿ ನಿಮಗೆ ರೆಕಾರ್ಡರ್ ಆಯ್ಕೆ ಸಿಗುತ್ತದೆ. ಅಲ್ಲಿ ನೀವು ರೆಕಾರ್ಡ್ ಮಾಡಿ ಸ್ಟೇಟಸ್ ಅಪ್ಲೋಡ್ ಮಾಡಬಹುದು. ಒಂದು ವೇಳೆ ರೆಕಾರ್ಡಿಂಗ್ ನಿಮಗೆ ಇಷ್ಟವಾಗದಿದ್ದರೆ ಅದನ್ನು ಡಿಲೀಟ್ ಕೂಡ ಮಾಡಬಹುದು. ಇನ್ನು ಮುಂದಿನ ದಿನಗಳಲ್ಲಿ ವಾಟ್ಸಾಪ್ ಇನ್ನು ಹತ್ತು ಹಲವು ಫೀಚರ್ ಗಳನ್ನೂ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Join Nadunudi News WhatsApp Group

WhatsApp Status Voice Note Feature
Image Source: Gizbot

Join Nadunudi News WhatsApp Group