Indian Railway: ಹಿರಿಯರಿಗೆ ಮತ್ತು ಅಂಗವಿಕಲರಿಗೆ ರೈಲ್ವೆ ಇಲಾಖೆಯಿಂದ ಹೊಸ ಸೇವೆ, ಒಂದೇ ಭಾರತ್ ರೈಲಿನಲ್ಲಿ ಈ ಸೇವೆ.

ಭಾರತೀಯ ರೈಲ್ವೆ ಇಲಾಖೆ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಗಾಲಿಕುರ್ಚಿ ಸೌಲಭ್ಯ ಒದಗಿಸಲು ಮುಂದಾಗಿದೆ.

Wheelchair Facility In Indian Railway Station: ಸಾಮಾನ್ಯವಾಗಿ ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಹೊಸ ಹೊಸ ನಿಯಮಗಳ ಜೊತೆಗೆ ವಿಶೇಷ ಸೌಲಭ್ಯವನ್ನು ಜಾರಿಗೊಳಿಸುತ್ತಿದೆ. ಇದೀಗ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ.

Wheelchair Facility In Indian Railway Station
Image Credit: Informalnewz

ಭಾರತೀಯ ರೈಲ್ವೆ ಅಲ್ಲಿ ಗಾಲಿಕುರ್ಚಿ ಸೌಲಭ್ಯ
ಭಾರತೀಯ ರೈಲ್ವೆ ಇಲಾಖೆ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಗಾಲಿಕುರ್ಚಿ ಸೌಲಭ್ಯ ಒದಗಿಸಲು ಮುಂದಾಗಿದೆ. ಇದಕ್ಕಾಗಿ ರೈಲುಗಳಲ್ಲಿ ಇಳಿಜಾರುಗಳನ್ನು  ನಿರ್ಮಿಸಲು ನಿರ್ಧರಿಸಿದೆ. ಇದೀಗ ಚೆನ್ನೈ ರೈಲು ನಿಲ್ದಾಣದಲ್ಲಿ ಗಾಲಿಕುರ್ಚಿ ಸೌಲಭ್ಯ ವನ್ನು ಬಳಸಲಾಗಿದೆ. ರೈಲುಗಳಲ್ಲಿ ಈ ರ‍್ಯಾಂಪ್‌ಗಳನ್ನು ನಿರ್ಮಿಸುವುದರಿಂದ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಶ್ರೀಘ್ರದಲ್ಲೇ ವಂದೇ ಭಾರತ್ ರೈಲುಗಳಲ್ಲಿ ಕೂಡ ಗಾಲಿಕುರ್ಚಿ ಸೌಲಭ್ಯ ಒದಗಿಸಲಾಗುತ್ತದೆ
ಹಿರಿಯ ನಾಗರೀಕರಿಗಾಗಿ ಹಾಗು ಅಂಗವಿಕಲರಿಗಾಗಿ ಈ ಸೌಲಭ್ಯವನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಅಶ್ವಿನಿ ವೈಷ್ಣವ್ ಅವರು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗ ಗಾಲಿಕುರ್ಚಿ ಅಗತ್ಯವನ್ನು ಪೂರೈಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ.

Wheelchair Facility In Indian Railway Station
Image Credit: Indiatvnews

ರೈಲಿನ ಬಾಗಿಲುಗಳಲ್ಲಿ ರಾಂಪ್ ಅನ್ನು ಸುಲಭವಾಗಿ ಅಳವಡಿಸಬಹುದಾಗಿದೆ ಮತ್ತು ಅದರ ಅಗಲ ಮತ್ತು ಕಡಿಮೆ ಗ್ರೇಡಿಯಂಟ್ ಕಾರಣದಿಂದಾಗಿ ಗಾಲಿಕುರ್ಚಿ ಬಳಕೆದಾರರಿಗೆ ಬಳಸಲು ಸುಲಭವಾಗಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

ಇದರ ಪರೀಕ್ಷೆಯ ಸಮಯದಲ್ಲಿ ಪ್ರಯಾಣಿಕರಿಂದ ಪಡೆದ ಪ್ರತಿಕ್ರಿಯೆ ತುಂಬಾ ಧನಾತ್ಮಕ ಮತ್ತು ಉತ್ತೇಜಕವಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಮತ್ತು ನಂತರ ಇತರ ಎಲ್ಲಾ ರೈಲುಗಳಲ್ಲಿ ಬಳಸಲು ಪ್ರಾರಂಭಿಸುತ್ತೇವೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group