Anna Bhagya: ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಯಾವಾಗ ಜಮೆಯಾಗಲಿದೆ?

ಅನ್ನ ಭಾಗ್ಯ ಹಣ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಖಾತೆಗೆ ಜಮಾ ಆಗಲಿದ್ದು, ಈ ತಿಂಗಳ ಹಣ ಯಾವಾಗ ಬರಲಿದೆ ಎಂದು ಪಡಿತರ ಚೀಟಿದಾರರೂ ಕಾಯ್ತಾ ಇದ್ದಾರೆ.

Anna Bhagya Scheme: ಕಾಂಗ್ರೆಸ್(Congress) ಸರಕಾರದ ಗ್ಯಾರಂಟಿ ಯೋಜನೆ ಗಳು ಇಂದು ಬಹಳಷ್ಟು ಸುದ್ದಿಯಲ್ಲಿವೆ , ಅದರಲ್ಲೂ ಹೆಚ್ಚು ಸುದ್ದಿಯಲ್ಲಿರುವ ಯೋಜನೆ ಎಂದರೆ ಗೃಹಲಕ್ಷ್ಮಿ(Gruha Lakshmi) ಮತ್ತು ಅನ್ನಭಾಗ್ಯ ಯೋಜನೆ, ಅನ್ನ ಭಾಗ್ಯ ಯೋಜನೆಯಡಿ ಪೂರ್ಣ ಪ್ರಮಾಣದ ಅಕ್ಕಿ ನೀಡಲು ಸಾಧ್ಯ ಆಗಿಲ್ಲ ಎಂಬ ನಿಟ್ಟಿನಲ್ಲಿ ಐದು ಕೆಜಿಗೆ ಹಣವನ್ನು ನೀಡುವುದಾಗಿ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದೆ. ಈ ಹಣ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಖಾತೆಗೆ ಜಮಾ ಆಗಲಿದ್ದು, ಈ ತಿಂಗಳ ಹಣ ಯಾವಾಗ ಬರಲಿದೆ ಎಂದು ಪಡಿತರ ಚೀಟಿದಾರರೂ ಕಾಯ್ತಾ ಇದ್ದಾರೆ.

Anna Bhagya
Image Source: India Today

ಯಾವಾಗ ಹಣ ಬರಲಿದೆ
ಪಡಿತರ ಹಣ ಹೋದ ತಿಂಗಳು‌ಜಮೆ ಯಾಗಿದ್ದು, ಈ ತಿಂಗಳ ಹಣ ಕೆಲವೇ ದಿನದಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಯಾಗಲಿದೆ, ಇನ್ನು ಪಡಿತರ ಅಗತ್ಯವಿರುವಂತಹ ಕುಟುಂಬಗಳಿಗೆ ಮಾತ್ರವೇ ಹಣ ವರ್ಗಾವಣೆ ಮಾಡಲಿದ್ದು ಬಿಪಿಎಲ್, ಅಂತ್ಯೊದಯ ಕಾರ್ಡ್ ಹೊಂದಿರುವವರಿಗೆ ಮಾತ್ರ ಆಹಾರ ಇಲಾಖೆಯು ಹಣ ಜಮೆ ಮಾಡಲಿದೆ

ಚೆಕ್ ಮಾಡಿ

ನಿಮಗೆ ಅನ್ನ ಭಾಗ್ಯದ ಹಣ ಈ ತಿಂಗಳಿನಲ್ಲಿ ಬಂದಿದೆಯೇ ಎಂದು ನೀವು ಚೆಕ್ ಮಾಡಬಹುದಾಗಿದೆ,
ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.ಗೆ ಭೇಟಿ ನೀಡಿ, ನಂತರ DBT status ನಲ್ಲಿ , ಅನ್ನಭಾಗ್ಯ ಯೋಜನೆ ಯಡಿಯಲ್ಲಿ ನಿಮ್ಮ ಸ್ಟೇಟಸ್ , ಹಣದ ವಿಚಾರ ಮಾಹಿತಿ ಪಡೆಯಬಹುದಾಗಿದೆ , ಇನ್ನು ಸರ್ಕಾರದ ಸಹಾಯವಾಣಿ 1800-425-5889 ಈ ಸಂಖ್ಯೆ ಅನ್ನು ಸಂಪರ್ಕ ಮಾಡಬಹುದಾಗಿದೆ.

Anna Bhagya
Image Source: Oneindia kannada

ನಿಮ್ಮ ಬ್ಯಾಂಕ್ ಖಾತೆ ಸರಿ ಇದೆಯೇ?

Join Nadunudi News WhatsApp Group

ಒಂದು ವೇಳೆ ನಿಮಗೆ ಅನ್ನಭಾಗ್ಯ ದ ಹಣ ಬಾರದೇ‌ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್, ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಸರಿಯಾಗಿ ಚೆಕ್ ಮಾಡಿ‌ಕೊಳ್ಳಿ, ಇನ್ನು ಸುಮಾರು 22 ಲಕ್ಷ ಬಿಪಿಎಲ್ ಕಾರ್ಡ್ ಇದ್ದ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲದೆ ಹಣ ಜಮೆಯಾಗಿಲ್ಲ, ಇವರಿಗೆ ವಿಶೇಷ ಕ್ರಮ ವಹಿಸಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ

Join Nadunudi News WhatsApp Group