Ads By Google

White Blood: ಈ ಮಗುವಿನ ದೇಹದಲ್ಲಿ ಹರಿಯುತ್ತಿರುವುದು ಬಿಳಿ ಬಣ್ಣದ ರಕ್ತ, ಮಗುವಿಗೆ ಇರುವ ಸಮಸ್ಯೆ ಕಂಡು ಆಶ್ಚರ್ಯ ಪಟ್ಟ ವೈದ್ಯರು.

baby blood white
Ads By Google

ರಕ್ತ ಇಲ್ಲದ ಜೀವಿಯನ್ನ ಈ ಭೂಮಿಯ ಹುಡುಕಲು ಬಹಳ ಕಷ್ಟ. ಇನ್ನು ಪ್ರತಿಯೊಬ್ಬ ಮಾನವನಿಗೂ ರಕ್ತ ಬಹಳ ಅವಶ್ಯಕ. ಮಾನವನ ದೇಹದಲ್ಲಿ ರಕ್ತ ಹೆಚ್ಚಾದರೂ ಸಮಸ್ಯೆಯಾಗುತ್ತದೆ ಮತ್ತು ರಕ್ತ ಕಡಿಮೆಯಾದರೂ ಕೂಡ ಬಹಳ ಸಮಸ್ಯೆ ಆಗುತ್ತದೆ. ಅದೇ ರೀತಿಯಲ್ಲಿ ಮಾನವನ ದೇಹದಲ್ಲಿ ಕೆಂಪು ಬಣ್ಣದ ರಕ್ತ ಇರುತ್ತದೆ ಮತ್ತು ಸಾಮಾನ್ಯವಾಗಿ ಎಲ್ಲಾ ಮಾನವನ ದೇಹದ ರಕ್ತ ಕೆಂಪು ಆಗಿರುತ್ತದೆ. ಮಾನವನ ರಕ್ತ ಒಂದೇ ಬಣ್ಣದಲ್ಲಿ ಇರುತ್ತದೆ, ಆದರೆ ಅದರ ಗ್ರೂಪ್ ಮಾತ್ರ ಬೇರೆಬೇರೆ ಆಗಿರುತ್ತದೆ. ಅದೇ ರೀತಿಯಲ್ಲಿ ಒಬ್ಬ ಮಾನವನ ದೇಹದಲ್ಲಿ ಬಿಳಿ ರಕ್ತದ ಕಣಗಳು ಕೂಡ ಇರುತ್ತದೆ, ಆದರೆ ಅದೂ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಸದ್ಯ ಈಗ ಇಡೀ ವಿಶ್ವವೇ ಆಶ್ಚರ್ಯ ಪಡುವ ಘಟನೆ ನಮ್ಮ ದೇಶದಲ್ಲಿ ನಡೆದಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಇಲ್ಲೊಂದು ಮಗುವಿಗೆ ಬಿಳಿ ರಕ್ತ ಇದ್ದು ಅದನ್ನ ನೋಡಿದ ವೈದ್ಯರು ಒಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ. ಮಗುವಿನ ಬಿಳಿ ರಕ್ತ ಮತ್ತು ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಬಹಳ ವೈರಲ್ ಆಗಿದ್ದು, ಇದು ವೈದ್ಯರ ತಲೆಬಿಸಿಗೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹೌದು ಮಧ್ಯಪ್ರದೇಶದಲ್ಲಿ ಅನಾಯಾ ಅನ್ನುವ ಹೆಣ್ಣು ಬಹಳ ಸಮಯಗಳಿಂದ ಕೆಲವು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮಗುವಿನ ಪೋಷಕರು ಮಗುವಿನ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ.

ಮಗು ಬಹಳ ಸಮಯದಿಂದ ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದು ಬಹಳ ಅಶ್ವಸ್ಥವಾಗಿದ್ದ ಕಾರಣ ವೈದ್ಯರು ಮಗುವಿನ ರಕ್ತ ಪರೀಕ್ಷೆಯನ್ನ ಮಾಡಿದ್ದಾರೆ. ರಕ್ತ ಪರೀಕ್ಷೆ ಮಾಡುವ ಸಮಯದಲ್ಲಿ ಮಗುವಿನ ರಕ್ತವನ್ನ ಕಂಡು ವೈದ್ಯರು ಒಮ್ಮೆ ಆಶ್ಚರ್ಯ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ. ಹೌದು ಮಗುವಿನ ರಕ್ತ ಪರೀಕ್ಷೆ ಮಾಡುವ ಸಮಯದಲ್ಲಿ ಮಗುವಿನ ರಕ್ತನಾಳದಲ್ಲಿ ಕೆಂಪು ರಕ್ತದ ಬದಲಾಗಿ White Blood ಹರಿಯುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಲ್ಯಾಬ್ ನಲ್ಲಿ ಮಗುವಿನ ರಕ್ತವನ್ನ ಪರೀಕ್ಷೆ ಮಾಡುವ ಸಮಯದಲ್ಲಿ ಇಂತಹ ಅಚ್ಚರಿ ಕಂಡುಬಂದ ಕಾರಣ ವೈದ್ಯರು ಮಗುವನ್ನ ತಕ್ಷಣ ಮುಂಬೈ ನ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ದು ಮುಂಬೈ ನಲ್ಲಿ ಕೂಡ ರಕ್ತ ಪರೀಕ್ಷೆ ಮಾಡಿದ ಸಮಯದಲ್ಲಿ ಮಗುವಿನ ರಕ್ತನಾಳದಲ್ಲಿ White Blood ಹರಿಯುತ್ತಿರುವುದು ಬೆಳಕಿಗೆ ಬಂದಿದೆ.

ಮಗುವಿನ ದೇಹದಲ್ಲಿ ಈ ಬಿಳಿ ರಕ್ತ ಹರಿಯಲು ಕಾರಣ ಆ ಮಗುವಿನ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಬಹಳ ಹೆಚ್ಚಳ ಆಗಿರುವುದು ಎಂದು ವೈದ್ಯರು ಹೇಳಿದ್ದು, ಸದ್ಯ ಮಗುವಿಗೆ ಸೂಕ್ತ ಪ್ರಮಾಣದ ಚಿಕಿತ್ಸೆಯನ್ನ ನೀಡಲಾಗುತ್ತಿದೆ ಎಂದು ಮಗುವಿಗೆ ತಂದೆ ಇಮ್ರಾನ್ ಹೇಳಿದ್ದಾರೆ. ಚಿಕ್ಕ ಮಗುವಿಗೆ ಹೇಗೆ ಇಷ್ಟು ಕೊಲೆಸ್ಟ್ರಾಲ್ ಬಂತು ಅನ್ನುವುದು ಜನರ ಪ್ರಶ್ನೆಗೆ ಕಾರಣವಾಗಿದೆ. ಇಂತಹ ಪ್ರಕರಣ ಕಂಡುಬರುವುದು ಇದೆ ಮೊದಲು ಎಂದು ವೈದ್ಯರು ಹೇಳಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field