BBK10 Winner: ಬಿಗ್ ಬಾಸ್ ವಿನ್ ಆಗುವುದು ಯಾರು…? ಬಿಗ್ ಬಾಸ್ ವಿನ್ನರ್ ಯಾರೆಂದು ಭವಿಷ್ಯ ನುಡಿದ ಗುರೂಜಿ.
ಇದೀಗ ಬಿಗ್ ಬಾಸ್ ವಿನ್ನರ್ ಯಾರೆಂದು ಗುರೂಜಿ ಭವಿಷ್ಯ ನುಡಿದಿದ್ದಾರೆ
Bigg Boss Kannada Season 10 Winner: ಸದ್ಯ BBK10 ಬಾರಿ ಟ್ರೆಂಡ್ ನಲ್ಲಿದೆ. ಜನರು ರಾತ್ರಿ ಬಿಗ್ ಬಾಸ್ ಶೋ (Bigg Boss) ನೋಡದೆ ನಿದ್ದೆ ಮಾಡುವುದೇ ಇಲ್ಲ ಎನ್ನಬಹೌದು. ಈ ಬಾರಿಯಂತೂ ಬಿಗ್ ಬಾಸ್ ಬಾರಿ ಡಿಫರೆಂಟ್ ಆಗಿ ಮೂಡಿಬರುತ್ತಿದೆ. ಸದ್ಯ BBK10 ಫೈನಲ್ ಹಂತವನ್ನು ತಲುಪಲು ಇನ್ನೇನು ಕೆಲವು ದಿನಗಳು ಬಾಕಿ ಇದೆ. ವಾರಾಂತ್ಯದಲ್ಲಿ ಅನೇಕೆ ಸ್ಪರ್ದಿಗಳು ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಬಿಗ್ ಬಾಸ್ ವಿನ್ ಆಗುವುದು ಯಾರು…?
ಬಿಗ್ ಬಾಸ್ 13 ನೇ ವಾರದಲ್ಲಿ ಮೈಕಲ್ ಮನೆಯಿಂದ ಹೊರನೆಡೆದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 8 ಸ್ಪರ್ದಿಗಳು ಉಳಿದಿದ್ದು ಈ ವಾರ ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ. ಈ ಬಾರಿ ಟಾಪ್ 5 ನಲ್ಲಿ ಯಾರಿರಲಿದ್ದಾರೆ..? ಹಾಗೆಯೆ ಬಿಗ್ ಬಾಸ್ ವಿನ್ನರ್ ಪಟ್ಟ ಯಾರ ಪಾಲಾಗಲಿದೆ…? ಎನ್ನುವ ಬಗ್ಗೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ. ಇದೀಗ ಬಿಗ್ ಬಾಸ್ ವಿನ್ನರ್ ಯಾರೆಂದು ಗುರೂಜಿ ಭವಿಷ್ಯನುಡಿದಿದ್ದಾರೆ. ಇದರಿಂದ ಬಿಗ್ ಬಾಸ್ ಮನೆಯ ಈ ಸ್ಪರ್ದಿಯ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.
ಬಿಗ್ ಬಾಸ್ ವಿನ್ನರ್ ಯಾರೆಂದು ಭವಿಷ್ಯ ನುಡಿದ ಗುರೂಜಿ
ಹೊಸ ವರ್ಷದ ಶುಭಾರಂಭಕ್ಕೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಬಿಗ್ ಬೋಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮನೆಯಲ್ಲಿನ ಸ್ಪರ್ದಿಗಳ ಭವಿಷ್ಯವನ್ನು ಹೇಳಿದ್ದಾರೆ. ಈ ವೇಳೆ ಬಿಗ್ ಬಾಸ್ ವಿನ್ ಆಗುವುದು ಯಾರು…? ಎನ್ನುವುದರ ಬಗ್ಗೆ ಗುರೂಜಿ ಸುಳಿವು ನೀಡಿದ್ದಾರೆ. ಗುರೂಜಿ ಅವರು ವಿನಯ್ ಗೌಡ ಅವರ ಕುರಿತು ಭವಿಷ್ಯವಾಣಿ ನುಡಿದಿದ್ದಾರೆ.
ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರು ದೀಪದ ಮೇಲೆ ಹಾಕಿರುವ ಹೂವಿನ ಹಾರದಿಂದ ಮೊದಲು ಎರಡು ಬೆರಳಿನಿಂದ ಹೂವಿನ ದಳಗಳನ್ನು ಕೀಳಲು ವಿನಯ್ ಗೆ ಸೂಚಿಸುತ್ತಾರೆ. ಅದು 51 ದಳಗಳನ್ನು ಒಳಗೊಂಡಿರುತ್ತದೆ. ಗುರೂಜಿ ಇದನ್ನು ನೋಡಿ ಐವತ್ತೊಂದು ಎಂದರೆ ಐದು ಮತ್ತು ಒಂದು ಒಟ್ಟು 6 ಎಂದು ಹೇಳಿದರು. ಸಂಖ್ಯೆ 6 ಎಂದರೆ ಅದು ಶುಕ್ರನ ಸಂಕೇತವಾಗಿದೆ. 6 ನೇ ಸಂಖ್ಯೆಯನ್ನು ಶುಕ್ರನು ಆಳುತ್ತಾನೆ.
ಬಿಗ್ ಬಾಸ್ ಸ್ಪರ್ಧಿ ವಿನಯ್ ಗೆ ರಾಜಯೋಗ
ನಿಮ್ಮ ಜೀವನದಲ್ಲಿ ನಿಮ್ಮ ಎಲ್ಲಾ ಸಂತೋಷ ಮತ್ತು ಸೌಕರ್ಯವನ್ನು ಮಹಿಳೆಯರಿಂದ ಮಾತ್ರ ಪಡೆಯಬಹುದು. ವಿಶೇಷವಾಗಿ ಮನಕ್ಕೆ ಹತ್ತಿರವಾದವರಿಂದ ಮಾತ್ರ ಪಡೆಯಬಹುದು. ಬೇರೆಯವರಿಂದ ಪಡೆಯಲು ಸಾಧ್ಯವಿಲ್ಲ. “ನೀವು ಮಹಿಳೆಯರಿಂದ ಸಾಕಷ್ಟು ನೋವು ಮತ್ತು ಸಂಕಟಗಳನ್ನು ಅನುಭವಿಸಿದ್ದೀರಿ” ಎಂದು ಗುರೂಜಿ ಹೇಳಿದರು.
2024 ರಲ್ಲಿ ನೀವು ಉತ್ತಮ ಮಟ್ಟದ ರಾಜಯೋಗವನ್ನು ಹೊಂದಿದ್ದೀರಿ. ವೃತ್ತಿ ಜೀವನದಲ್ಲಿ ಬದಲಾವಣೆಯ ಯೋಗವಿದೆ. ಕೆರಿಯರ್ ಲೈಫ್ ನಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ. ಖಂಡಿತಾ ನಿಮಗೆ ಎಲ್ಲವೂ ಮಂಗಳಕರವಾಗಿದೆ’’ ಎಂದು ವಿನಯ್ ಗೆ ಗುರೂಜಿ ದೊಡ್ಡ ಸೂಚನೆಯನ್ನೇ ನೀಡಿದ್ದಾರೆ.