Benefits Of Marriage Registration: ದೇಶದಲ್ಲಿ ಇತ್ತೀಚಿಗೆ ಹಲವಾರು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದೀಗ ನಾವು ಮದುವೆಗೆ ಸಂಬಂಧ ಪಟ್ಟಿರುವಂತಹ ಒಂದು ಹೊಸ ನಿಯಮದ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ. ಹೌದು, ನೀವು ಪ್ರೀತಿಸಿ ಮದುವೆ ಆದರೂ ಅಥವಾ ಮನೆಯವರು ನೋಡಿ ಮಾಡಿರುವಂತಹ ಮದುವೆಯಾದರು ಆ ಮದುವೆಯನ್ನು ನೋಂದಣಿ ಮಾಡುದು ಕಡ್ಡಾಯವಾಗಿದೆ. ಹಾಗಾದರೆ ನಾವೀಗ ಈ ಮದುವೆ ಪ್ರಮಾಣ ಪತ್ರ ಏಕೆ ಬೇಕು..? ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ವಿವಾಹ ಪ್ರಮಾಣ ಪತ್ರ
ವಿವಾಹ ಪ್ರಮಾಣ ಪತ್ರ, ಇದು ದಂಪತಿಗಳು ವಿವಾಹಿತರು ಎಂದು ತೋರಿಸುವ ಒಂದು ಕಾನೂನು ಬದ್ದ ದಾಖಲೆ ಆಗಿದೆ. ಇದನ್ನು ಕೆಲವರು ಕೆಲವರು ಕೇವಲ ಒಂದು ಕಾಗದ ಎಂದು ಪರಿಗಣಿಸುತ್ತಾರೆ, ಆದರೆ ವಿವಾಹ ಪ್ರಮಾಣ ಪತ್ರ ಭವಿಷ್ಯದಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ನಾವೀಗ ಈ ವಿವಾಹ ಪ್ರಮಾಣ ಪತ್ರ ಯಾವೆಲ್ಲ ಕೆಲಸಗಳಿಗೆ ಬೇಕಾಗುತ್ತದೆ ಅನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
* ಕಾನೂನಿನ ರಕ್ಷಣೆ ಸಿಗುತ್ತದೆ
ಕಾನೂನಿನ ಪ್ರಕಾರ ಮದುವೆ ನೋಂದಣಿ ಆದರೆ ಮಾತ್ರ ಅವರು ಪತಿ ಪತ್ನಿ ಎಂದು ಸಾಬೀತಾಗುತ್ತದೆ. ಅಸ್ತಿ ವಿಭಜನೆ, ವಾರಸುದಾರಿಗೆ, ವಿಚ್ಛೇದನ, ಎಲ್ಲ ಸಂದರ್ಭದಲ್ಲೂ ಕೂಡ ಮದುವೆ ನೋಂದಣಿ ಕಡ್ಡಾಯವಾಗಿರುತ್ತದೆ.
* ಪಾಸ್ ಪೋರ್ಟ್, ವೀಸಾ, ಬ್ಯಾಂಕ್ ಖಾತೆ ತೆರೆಯಲು
ಪಾಸ್ ಪೋರ್ಟ್ ಮಾಡಿಸುವಾಗ, ವಿದೇಶಿ ವೀಸಾ ಅರ್ಜಿ ಸಲ್ಲಿಸಲು ಹಾಗೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ವಿವಾಹ ಪ್ರಮಾಣ ಪತ್ರ ಕಡ್ಡಾಯವಾಗಿದೆ.
* ಮಕ್ಕಳ ಭವಿಷ್ಯಕ್ಕೆ ಭದ್ರತೆ
ಮದುವೆ ನೋಂದಣಿ ಇಲ್ಲದಿದ್ದರೆ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಂದೆ ಮತ್ತು ತಾಯಿಯ ಹೆಸರು ಸೇರಿಸಲು ಸಮಸ್ಯೆ ಉಂಟಾಗುತ್ತದೆ. ಶಾಲೆಗೆ ಮಕ್ಕಳನ್ನು ದಾಖಲು ಮಾಡಲು, ಆಧಾರ್ ಕಾರ್ಡ್ ಮಾಡಿಸಲು, ವಿದೇಶಿ ಪ್ರವಾಸಕ್ಕೆ ತೊಂದರೆಯಾಗುತ್ತದೆ.
* ಸರ್ಕಾರೀ ಸೌಲಭ್ಯ ಪಡೆಯಲು
ವಿಧವಾ ಪಿಂಚಣಿ, ಕುಟುಂಬ ಪಿಂಚಣಿ, ಅರೋಗ್ಯ ವಿಮಾ, ಹಾಗೆ ಗೃಹ ಸಾಲದಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯ ಸಿಗುತ್ತದೆ. ಈ ಎಲ್ಲ ಕೆಲಸಗಳಿಗೂ ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ.
ಸುಪ್ರೀಮ್ ಕೋರ್ಟ್ 2006 ಮತ್ತು 2010 ರಲ್ಲಿ ನೀಡಿರುವ ತೀರ್ಪಿನ ಪ್ರಕಾರ, ದಾಖಲೆ ಇಲ್ಲದ ಮದುವೆ ಕಾನೂನಿನ ಪ್ರಕಾರ,” ಮದುವೆಯೇ ಅಲ್ಲ”. ದೀರ್ಘ ಕಾಲದ ವರೆಗೆ ಒಟ್ಟಿಗೆ ಜೀವನ ನೆಡೆಸಿದರು ಸಹ ಮದುವೆ ನೋಂದಣಿ ಮಾಡಿಸದಿದ್ದರೆ ಅವರು ಕಾನೂನಿನ ಪ್ರಕಾರ ಗಂಡ ಹೆಂಡತಿ ಆಗಿರುವುದಿಲ್ಲ. ಈ ಸಣ್ಣ ಕೆಲಸ ಮಾಡಿಸಿ ನಿಮ್ಮ ಭವಿಷ್ಯವನ್ನು ಭದ್ರವಾಗಿರಿಸಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

