Yash: ಸುದೀಪ್ ಹಾಗು ದರ್ಶನ್ ಬರ್ತೇಡೆಗೆ ವಿಶ್ ಏಕೆ ಮಾಡಲ್ಲ ಎಂದು ಕಾರಣ ಕೊಟ್ಟ ಯಶ್.

Why Yash Not Wishes On Sudeep and Darshan Birthday: ರಾಕಿಂಗ್ ಸ್ಟಾರ್ ಯಶ್ ರವರು ಸದ್ಯ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶಾದ್ಯಂತ ಹೆಸರು ಮಾಡಿರುವವಂಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಕೆಜಿಎಫ್ ಸಿನಿಮಾ(KGF Movie)  ಸರಣಿ ಮೂಲಕವಾಗಿ ಬೃಹತ್ ಹೆಸರು ಮಾಡಿರುವ ಯಶ್ ಬಹು ಬೇಡಿಕೆಯ ನಟ ಎನ್ನಬಹುದು.

ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ರವರ ಕಾಲ್ ಶೀಟ್‌ಗಾಗಿ(Yash Callsheet)  ಟಾಲಿವುಡ್ ಮತ್ತು ಬಾಲಿವುಡ್ ನಿರ್ಮಾಪಕರೂ ಕೂಡ ಕಾಯುತ್ತಿದ್ದಾರೆ. ಹೀಗೆ ಸಿಕ್ಕಾಪಟ್ಟೆ ಯಶಸ್ಸು ಕಂಡಿರುವ ಯಶ್ ಅವರನ್ನು ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಎನ್‌ಕ್ಲೇವ್ ಕಾರ್ಯಕ್ರಮಕ್ಕೆ ಆಹ್ವಾನಿಸಿ ಕರೆಸಲಾಗಿತ್ತು.

ಸದ್ಯ ಇದೇ ಸಂದರ್ಭದಲ್ಲಿ ತಾವು ಯಾರಿಗೂ ಸಹ ಸೋಶಿಯಲ್ ಮೀಡಿಯಾದ ತಮ್ಮ ಖಾತೆಗಳಲ್ಲಿ ಹುಟ್ಟುಹಬ್ಬದ ಶುಭ ಕೋರದೇ ಇರಲು ಕಾರಣವೇನೆಂಬುದನ್ನೂ ತಿಳಿಸಿದ್ದಾರೆ.

Why Yash Not Wishes On Sudeep and Darshan Birthday event
Image Credit: Times Of India

ಶುಭ ಕೋರದೇ ಇರಲು ಕಾರಣ

ಹೌದು ನಾನು ಯಾರಿಗೂ ಸಹ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲು ಇಚ್ಛಿಸುವುದಿಲ್ಲ ಎಂದಿರುವ ಯಶ್ ಏಕೆಂದರೆ ಒಬ್ಬ ಸ್ನೇಹಿತನಿಗೆ ವಿಶ್ ಮಾಡಿ ಮತ್ತೊಬ್ಬ ಸ್ನೇಹಿತನಿಗೆ ವಿಶ್ ಮಾಡುವುದನ್ನು ಮರೆತು ಹೋದರೆ ಆತ ಅನ್ಯಥಾ ಭಾವಿಸಬಹುದು.

Join Nadunudi News WhatsApp Group

ಈ ಕಾರಣದಿಂದಯೇ ನಾನು ಯಾರಿಗೂ ಸಹ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುವುದಿಲ್ಲ ಅದರಿಂದ ತುಸು ದೂರ ಉಳಿಯುತ್ತೇನೆ ಎಂದು ಯಶ್ ರವರು ಹೇಳಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಯಾರಿಗೂ ಸಹ ಶುಭ ಕೋರುವುದಿಲ್ಲ

Why Yash Not Wishes On Sudeep and Darshan Birthday event
Image Credit: Times Of India

ಹೀಗೆ ಸೋಶಿಯಲ್ ಮೀಡಿಯಾ ಮೂಲಕ ಯಾರಿಗೂ ಸಹ ಶುಭ ಕೋರುವುದಿಲ್ಲ ಎಂದ ಯಶ್ ಅಂತಹ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಹುಟ್ಟು ಹಬ್ಬವಿದ್ದರೆ ಕರೆ ಮಾಡುವ ಮೂಲಕ ಸ್ವತಃ ನಾನೇ ವಿಶ್ ಮಾಡುತ್ತೇನೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ನನ್ನ ವೈಯಕ್ತಿಕ ಜೀವನ ಮತ್ತು ನನ್ನ ಚಿತ್ರಗಳ ಬಗ್ಗೆ ಮಾತ್ರ ಆಗಾಗ ಪೋಸ್ಟ್ ಮಾಡುತ್ತಿರುತ್ತೇನೆ ಅಷ್ಟೇ ಎಂದು ತಿಳಿಸಿದರು.

ಯಶ್ ವಿರುದ್ಧ ಸಾಕಷ್ಟು ಟ್ರೋಲ್

ಇನ್ನು ನಟ ಯಶ್ ರವರು ಇಂಡಿಯಾ ಎನ್ ಕ್ಲೇವ್ ವೇದಿಕೆಯಲ್ಲಿ ಮಾತನಾಡಿದ ಈ ವಿಷಯದ ಕುರಿತಾಗಿ ಈ ಹಿಂದೆ ಯಶ್ ವಿರುದ್ಧ ಸಾಕಷ್ಟು ಟ್ರೋಲ್ ನಡೆದಿದ್ದು ಯಶ್ ಯಾರಿಗೂ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುವುದಿಲ್ಲ.

ಓರ್ವ ದೊಡ್ಡ ನಟನಾಗಿ ಇನ್ನೊಬ್ಬ ನಟನ ಕುರಿತು ಪೋಸ್ಟ್ ಮಾಡುವುದಿಲ್ಲ ಅದರಲ್ಲಿಯೂ ಕೂಡ ದರ್ಶನ್ ಹಾಗೂ ಸುದೀಪ್ ಹುಟ್ಟುಹಬ್ಬದಂದು ಯಶ್ ಟ್ವೀಟ್ ಮಾಡುವುದಿಲ್ಲ ಎಂಬ ಗಂಭೀರವಾದಂತಹ ಆರೋಪವಿತ್ತು.

Why Yash Not Wishes On Sudeep and Darshan Birthday event
Image Credit: Times Of India

ಸದ್ಯ ಯಶ್ ಅವರು ಸ್ನೇಹಿತರಿಗೆ ಹುಟ್ಟುಹಬ್ಬದ ಶುಭಾಶಯ ಕೋರಬೇಕೆಂದರೆ ಕರೆ ಮಾಡುತ್ತೇನೆ ಹೊರತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕವಾಗಿ ಇದೀಗ ಈ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದ್ದಾರೆ.

Join Nadunudi News WhatsApp Group