Wife’s Property Right: ವಿಚ್ಛೇಧನ ಪಡೆದ ನಂತರ ಹೆಂಡತಿ ಯಾವ ಯಾವ ಆಸ್ತಿಯಲ್ಲಿ ಹಕ್ಕು ಪಡೆಯುತ್ತಾಳೆ, ಸುಪ್ರೀಂ ಕೋರ್ಟ್ ನಿಯಮ.
ಮಹಿಳೆಯು ತನ್ನ ಮದುವೆಯ ನಂತರ ಪಡೆಯುವ ಆಸ್ತಿಯ ಹಕ್ಕಿನ ಬಗ್ಗೆ ಮಾಹಿತಿ.
Wife’s Property Right In Husband Property: ಭಾರತೀಯ ಕಾನೂನಿನಲ್ಲಿ ಹೆಣ್ಣು ಮಕ್ಕಳ ಆಸ್ತಿ ಹಕ್ಕಿನ ಬಗ್ಗೆ ವಿವಿಧ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ. ಭಾರತೀಯ ಕಾನೂನಿನ (Indian Law) ಪ್ರಕಾರ ಹೆಣ್ಣು ಮಕ್ಕ್ಳು ಗಂಡಿನಷ್ಟೇ ಆಸ್ತಿಯ ಹಕ್ಕನ್ನು ಹೊಂದಿರುತ್ತಾರೆ. ಅದು ತಂದೆಯ ಸ್ವಯಾರ್ಜಿತ ಆಸ್ತಿ ಆಗಿರಲಿ ಅಥವಾ ಪಿತ್ರಾರ್ಜಿತ ಆಸ್ತಿ ಆಗಿರಲಿ ಹೆಣ್ಣು ಮಕ್ಕಳು ಆಸ್ತಿ ಅಧಿಕಾರ ಹೊಂದಿರುತ್ತಾರೆ.
ದೇಶದಲ್ಲಿ ಯಾರೇ ಆಗಲಿ ಹೆಣ್ಣು ಮಕ್ಕಳ ಆಸ್ತಿ ಹಕ್ಕನ್ನು ಕಸಿದುಕೊಳ್ಳಲು ಬಂದರೆ ಮಹಿಳೆಯರು ಅಂತವರ ವಿರುದ್ಧ ಕಾನೂನು ಹೋರಾಟ ನಡೆಸಬಹುದು. ಇನ್ನು ಮಹಿಳೆಯರಿಗೆ ತಂದೆ ತಾಯಿಯ ಆಸ್ತಿಯ ಅಧಿಕಾರದ ಜೊತೆಗೆ ಮದುವೆಯ ನಂತರ ತನ್ನ ಗಂಡನ ಮನೆಯ ಆಸ್ತಿಯ ಮೇಲೆ ಕೂಡ ಹಕ್ಕನ್ನು ಹೊಂದಿರುತ್ತಾಳೆ. ಇದೀಗ ಮಹಿಳೆಯು ತನ್ನ ಮದುವೆಯ ನಂತರ ಪಡೆಯುವ ಆಸ್ತಿಯ ಹಕ್ಕಿನ ಬಗ್ಗೆ ಮಾಹಿತಿ ತಿಳಿಯೋಣ.
ವಿಚ್ಛೇಧನ ಪಡೆದ ನಂತರ ಹೆಂಡತಿ ಯಾವ ಯಾವ ಆಸ್ತಿಯಲ್ಲಿ ಹಕ್ಕಿ ಪಡೆಯುತ್ತಾಳೆ..?
*ಗಂಡನ ಮನೆಯ ಪಿತ್ರಾರ್ಜಿತ ಆಸ್ತಿ
ಗಂಡನ ಮನೆಯ ಆಸ್ತಿಯ ವಿಚಾರದಲ್ಲಿ ಆಸ್ತಿ ನಿಯಮ ಸ್ವಲ್ಪ ಬದಲಾವಣೆ ಇದೆ. ಗಂಡನ ಮನೆಯ ಆಸ್ತಿಯು ಪಿತ್ರಾಜ್ರಿತ ಆಸ್ತಿಯಾಗಿದ್ದರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಇರುವುದಿಲ್ಲ. ತನ್ನ ಗಂಡನಿಗೆ ಅವರ ಮನೆಯಲ್ಲಿ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಪಾಲಿನ ಅಧಿಕಾರ ಹೆಂಡತಿಯದ್ದಾಗಿರುತ್ತದೆ. ಗಂಡನ ಮನೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿ ಪಾಲನ್ನು ಕೇಳುವಂತಿಲ್ಲ.
*ಗಂಡನ ಸ್ವಯಾರ್ಜಿತ ಆಸ್ತಿ
ಗಂಡನೇ ಸ್ವಂತ ಆಸ್ತಿ ಮಾಡಿದ್ದರೆ ಅದು ಸ್ವಯಾರ್ಜಿತ ಆಸ್ತಿ ಆಗುವ ಮೂಲಕ ಅದು ಸಂಪೂರ್ಣವಾಗಿ ಹೆಂಡತಿಯ ಹಕ್ಕಾಗಿರುತ್ತದೆ. ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಂಡತಿ ಸಂಪೂರ್ಣ ಅಧಿಕಾರವನ್ನು ಹೊಂದುತ್ತಾಳೆ. ಪತಿಯ ಮರಣದ ನಂತರ ಪತ್ನಿಯು ತನ್ನ ಗಂಡನ ಆಸ್ತಿಯ ಅಧಿಕಾರವನ್ನು ಪಡೆಯುತ್ತಾಳೆ ಎನ್ನಬಹುದು.
*ಆಸ್ತಿಯಲ್ಲಿ ಗಂಡನ ಹೆಸರು ಇಲ್ಲದಾಗ
ಗಂಡನ ಮನೆಯ ಆಸ್ತಿಯನ್ನು ಗಂಡನ ಹೆಸರಿನಲ್ಲಿ ನೋಂದಾಯಿಸಿದ್ದರೆ ಪತ್ನಿಗೆ ಆಸ್ತಿಯ ಮೇಲೆ ಕಾನೂನು ಹಕ್ಕು ಇಲ್ಲ. ಕಾನೂನಿನ ದೃಷ್ಟಿಯಲ್ಲಿ, ಆಸ್ತಿಯನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಅವರೇ ಆಸ್ತಿಯ ಮಾಲೀಕರು. ಇನ್ನು ಆಸ್ತಿಯನ್ನು ಖರೀದಿಸಲು ಪತಿ ಮತ್ತು ಹೆಂಡತಿ ಇಬ್ಬರೂ ಜಂಟಿಯಾಗಿ ಪಾವತಿಸಿದ್ದರೆ, ಆದರೆ ಆಸ್ತಿಯನ್ನು ಗಂಡನ ಹೆಸರಿನಲ್ಲಿ ಮಾತ್ರ ನೋಂದಾಯಿಸಲಾಗಿದೆ. ಆಗಲೂ ಹೆಂಡತಿ ಆ ಆಸ್ತಿಯಲ್ಲಿ ತನ್ನ ಪಾಲು ಪಡೆಯಲು ಸಾಧ್ಯವಿಲ್ಲ .
*ಜಂಟಿ ಆಸ್ತಿ
ಜಂಟಿ ಆಸ್ತಿ ಎಂದರೆ ಗಂಡ ಮತ್ತು ಹೆಂಡತಿ ಇಬ್ಬರ ಹೆಸರಿನಲ್ಲಿ ಆಸ್ತಿಯ ನೋಂದಣಿ. ಪತಿ ಮತ್ತು ಪತ್ನಿ ಇಬ್ಬರ ಹೆಸರಿಗೂ ಆಸ್ತಿ ನೋಂದಣಿಯಾಗಿದ್ದರೆ. ಆದ್ದರಿಂದ ವಿಚ್ಛೇದನದ ನಂತರ ಹೆಂಡತಿ ಆ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ ಪತ್ನಿ ಆಸ್ತಿಯನ್ನು ಖರೀದಿಸಲು ಪಾವತಿಸಿದ ಆಸ್ತಿಯ ಮೊತ್ತವನ್ನು ಮಾತ್ರ ಕ್ಲೈಮ್ ಮಾಡಬಹುದು.
*ಪತಿ ಎರಡನೇ ಮದುವೆಯಾದಾಗ
ಪತಿ ಎರಡನೇ ಬಾರಿಗೆ ಮದುವೆಯಾದರೂ, ಅವನ ಆಸ್ತಿಯಲ್ಲಿ ಅವನ ಮೊದಲ ಹೆಂಡತಿ ಮತ್ತು ಮಕ್ಕಳು ಹಕ್ಕು ಪಡೆಯುತ್ತಾರೆ. ಹಾಗೆಯೆ ಪತಿಗೆ ಎರಡನೇ ಪತ್ನಿಯಿಂದ ಹುಟ್ಟಿದ ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಲಾಗುತ್ತದೆ.