EPF: ಮದುವೆಗೆ PF ಹಣವನ್ನ ತಗೆಯುವುದು ಹೇಗೆ….? PF ಹಣ ತಗೆಯಲು ಈ ನಿಯಮ ಕಡ್ಡಾಯ.

EPF ಹಣ ಹಿಂಪಡೆಯಲು ಈ ನಿಯಮ ಕಡ್ಡಾಯ, PF ಖಾತೆ ಇದ್ದವರಿಗೆ.

Withdraw PF Money For Marriage: ಪ್ರತಿಯೊಬ್ಬರ ಜೀವನದಲ್ಲೂ ಉದ್ಯೋಗ ಎನ್ನುದು ಬಹಳ ಮುಖ್ಯವಾದ ಅಂಶವಾಗಿದೆ. ಏಕೆಂದರೆ ಸರಿಯಾದ ಕೆಲಸ ಇದ್ದರೆ ಮಾತ್ರ ಜೀವನ ಶೈಲಿಯನ್ನು ಸರಿಯಾಗಿ ನಿರ್ವಹಿಸಿ ಕೊಂಡು ಹೋಗಲು ಸಾಧ್ಯ.

ಸರ್ಕಾರೀ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ PF ಸೌಲಭ್ಯವನ್ನು ನೀಡಲಾಗುತ್ತದೆ. PF ಸರ್ಕಾರವು ಪರಿಚಯಿಸಿದ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಹೂಡಿಕೆದಾರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

PF Withdrawal Rules
Image Credit: Smallcase

ಉದ್ಯೋಗಿಗಳ ಭವಿಷ್ಯ ನಿಧಿ
ಕಂಪನಿ ಉದ್ಯೋಗಿಗಳ ಸಂಬಳದಲ್ಲಿ PF ಅನ್ನು ಕಡಿತಗೊಳಿಸಿ ನಿವೃತ್ತಿಯ ನಂತರ ಅದನ್ನು ನೀಡಲಾಗುತ್ತದೆ. ಸರ್ಕಾರಿ ಕೆಲಸವಿದ್ದರೆ ಅದರಲ್ಲಿಯೂ PF ಅನ್ನು ಕಡಿತಗೊಳಿಸಲಾಗುತ್ತದೆ. ನಿವೃತ್ತಿಯ ನಂತರ ಆ ಹಣ ದೊರೆಯುತ್ತದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಬಿಟ್ಟ 45 ದಿನಗಳ ನಂತರ PF ಹಣವನ್ನು ಹಿಂಪಡೆಯಲಾಗುತ್ತದೆ, ಆದರೆ ಸರ್ಕಾರಿ ಉದ್ಯೋಗಗಳಲ್ಲಿ ನಿವೃತ್ತಿಯ ಮೊದಲು PF ಹಣವನ್ನು ಹಿಂಪಡೆಯಲಾಗುತ್ತದೆ.

ಈ ಕಾರಣಗಳಿಗೆ ನೀವು PF ನಿಂದ ಹಣವನ್ನು ಹಿಂಪಡೆಯಬಹುದು
*ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ
*ಅಧ್ಯಯನಕ್ಕೆ ಸಂಬಂಧಿಸಿದಂತೆ
*ಮದುವೆಯಾಗಲು ಹಣವನ್ನು ಹಿಂಪಡೆಯಬಹುದು
*ಭೂಮಿ ಖರೀದಿಸಲು
*ಮನೆ ಖರೀದಿಸಲು

Withdraw PF Money For Marriage
Image Credit: Presswire18

ಉದ್ಯೋಗಿಯ ಮದುವೆಗೆ ಭವಿಷ್ಯ ನಿಧಿ
ನೀವು PF ಹಣವನ್ನು ಬಳಸಿಕೊಂಡು ಮದುವೆಯಾಗಲು ಬಯಸಿದರೆ, ನೀವು ನಿಮಗೆ ಅಗತ್ಯವಿರುವಷ್ಟು ಹಣವನ್ನು PF ನಿಂದ ಹಿಂಪಡೆಯಲು ಸಾದ್ಯವಾಗುದಿಲ್ಲ. ಮದುವೆಗಾಗಿ PF ನಲ್ಲಿ 50 % ಹಣವನ್ನು ಮಾತ್ರ ತೆಗೆಯಬಹುದಾಗಿದೆ. ಹಾಗೆ EPF ನಿಂದ ಹಿಂಪಡೆದ ಹಣವನ್ನು ಮತ್ತೆ ಠೇವಣಿ ಮಾಡಲು ಸಾಧ್ಯವಿಲ್ಲ.

Join Nadunudi News WhatsApp Group

EPF ಪ್ರಕಾರ ನಮ್ಮ ಮುಂಗಡ ಹಣವನ್ನು ಸಮಯಕ್ಕೆ ಹಿಂಪಡೆಯಬಹುದು. ಇದಕ್ಕಾಗಿ ನಾವು ಫಾರ್ಮ್ 31 ಅನ್ನು ಸಲ್ಲಿಸಲಾಗುತ್ತದೆ, ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಅದನ್ನು ಸಂಸ್ಥೆಗೆ ಸಲ್ಲಿಸಬೇಕು. ಫಾರ್ಮ್ ಅನ್ನು ಸ್ವೀಕರಿಸಿದ ನಂತರ ಮೊತ್ತವನ್ನು ಫಾರ್ಮ್‌ ನಲ್ಲಿ ತುಂಬಬೇಕಾಗುತ್ತದೆ. ಇದನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.

EPF ಹಣ ತಗೆಯಲು ಈ ನಿಯಮ ಕಡ್ಡಾಯ
ಹೌದು PF ಹಣವನ್ನು ಹಿಂತೆಗೆದುಕೊಳ್ಳಲು ಕೆಲವು ನಿಯಮಗಳಿರುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ 7 ವರ್ಷಗಳ EPF ಸದಸ್ಯತ್ವವನ್ನು ಪೂರ್ಣಗೊಳಿಸಿದ ನಂತರ EPF ಹಣವನ್ನು ಹಿಂಪಡೆಯಬಹುದು ಹಾಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Join Nadunudi News WhatsApp Group