Internet: ಮೊಬೈಲ್ ಬಳಕೆದಾರರಿಗೆ ಭರ್ಜರಿ ಸುದ್ದಿ: ನೆಟ್ ಇಲ್ಲದೆ ಟಿವಿ ಚಾನೆಲ್ ವೀಕ್ಷಣೆ ಅವಕಾಶ
ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ನಲ್ಲಿ ಲೈವ್ ಟಿವಿ ಚಾನೆಲ್ ವೀಕ್ಷಣೆ ಸಾಧ್ಯ.
Without Internet Benefits: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ. ದಿನದ ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲಿಯೇ ಕಳೆಯುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಸ್ಮಾರ್ಟ್ ಫೋನ್ ಗಳಿಗೆ ಅಂಟಿಕೊಂಡಿರುತ್ತಾರೆ.
ಸ್ಮಾರ್ಟ್ ಫೋನ್ ನಿಂದ ನಮ್ಮ ಕೆಲವು ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಿಕೊಳ್ಳಬಹುದು. ಈ ಸ್ಮಾರ್ಟ್ ಫೋನ್(Smart Phone) ಗಳು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ಹಾಗಾಗಿ ಮೊಬೈಲ್(Mobile) ಗಳನ್ನೂ ಮಿತಿಯಲ್ಲಿ ಬಳಸುದು ಉತ್ತಮ.
ಇನ್ನು ಈ ಸ್ಮಾರ್ಟ್ ಫೋನ್ ಗಳಿಗೆ ಇಂಟರ್ನೆಟ್ ಸಂಪರ್ಕ ಕೂಡ ಅವಶ್ಯಕ. ಮೊಬೈಲುಗಳಲ್ಲಿ ಇಂಟರ್ನೆಟ್ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇಂಟರ್ನೆಟ್(Internet) ಸಂಪರ್ಕ ಇಲ್ಲದೆ ಸ್ಮಾರ್ಟ್ ಫೋನ್ ನಲ್ಲಿ ಟಿವಿ(TV) ಚಾನೆಲ್ ನೋಡಲು ಸಾಧ್ಯವೇ ಎನ್ನುವ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನೆಡೆಸುತ್ತಿದೆ.
ಇಂಟರ್ನೆಟ್ ಸಂಪರ್ಕವಿಲ್ಲದೆ ಮೊಬೈಲ್ ನಲ್ಲಿ ಲೈವ್ ಟಿವಿ ಚಾನೆಲ್ ವೀಕ್ಷಣೆ
ದೇಶದಲ್ಲಿ 80 ಕೋಟಿಗೂ ಅಧಿಕ ಜನ ಮೊಬೈಲ್ ಅನ್ನು ಬಳಕೆಮಾಡುತ್ತಾರೆ. ಅವರಿಗೆ ಶೈಕ್ಷಣಿಕ ನೆರವು ಹಾಗೂ ತುರ್ತು ಎಚ್ಚರಿಕೆ ನೀಡಲು ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನೆಡೆಸುತ್ತಿದೆ. ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಕೇಂದ್ರ ಸರ್ಕಾರ(Central Government) ಪರಿಶೀಲನೆ ನೆಡೆಸುತ್ತಿದೆ. ಇದು ಸಾಧ್ಯವಾದರೆ ಸ್ಮಾರ್ಟ್ ಫೋನ್ ಬಳಕೆದಾರರು ಇಂಟರ್ನೆಟ್ ಸಂಪರ್ಕವಿಲ್ಲದೆ ತಮ್ಮ ಮೊಬೈಲ್ ಗಳಲ್ಲಿ ಲೈವ್ ಟಿವಿ ಚಾನೆಲ್ ಗಳನ್ನೂ ನೋಡಬಹುದಾಗಿದೆ.
ಡೈರೆಕ್ಟ್ ಟು ಮೊಬೈಲ್ ನಿಂದ ಟೆಲಿಕಾಂ ಕಂಪನಿಗಳ ಡೇಟಾ ಕುಸಿಯುವ ಸಾಧ್ಯತೆ ಇರುವುದರಿಂದ ಟೆಲಿಕಾಂ ಆಪರೇಟಿವ್ ಗಳು ವಿರೋಧವನ್ನ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಟೆಲಿಕಾಂ ಇಲಾಖೆ, ಬ್ರಾಡ್ಕಾಸ್ಟ್ ಉದ್ಯಮ, MIB , ಈಟ್ ಕಾನ್ಪುರ್ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳ ಜೊತೆ ಮುಂದಿನವಾರ ಮಹತ್ವದ ಸಭೆ ನೆಡೆಯಲಿದೆ. ಸಭೆಯಲ್ಲಿ ಇಂಟರ್ನೆಟ್ ಇಲ್ಲದೆ ಸ್ಮಾರ್ಟ್ ಫೋನ್ ನಲ್ಲಿ ಟಿವಿ ಚಾನೆಲ್ ವೀಕ್ಷಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.
ಮುಂದಿನ ವಾರ ಸರ್ಕಾರ ಈ ಕುರಿತಾಗಿ ಮಹತ್ವದ ಸಭೆ ನಡೆಸಲಿದ್ದು, ಟೆಲಿಕಾಂ ಇಲಾಖೆ, ಬ್ರಾಡ್ಕಾಸ್ಟ್ ಉದ್ಯಮ, MIB, IIT ಕಾನ್ಪುರ್ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ನೆಟ್ ಇಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಣೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಲಾಗಿದೆ.