Ads By Google

Pension Age: ಈ ರಾಜ್ಯದ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್, ಇನ್ಮುಂದೆ 50 ವರ್ಷಕ್ಕೆ ಸಿಗಲಿದೆ ಪಿಂಚಣಿ ಹಣ

ladies pension age reduce

Image Credit: Original Source

Ads By Google

Women’s Pension Age Reduction: ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿವೆ. ಮಹಿಳೆಯರು ಯೋಜನೆಗಳ ಲಾಭವನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸದೃಢರಾಗುತಿದ್ದಾರೆ. ಸದ್ಯ ಜಾರ್ಖಂಡ್ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಸಾಮಾನ್ಯವಾಗಿ ಎಲ್ಲ ಪಿಂಚಣಿಯ ಯೋಜನೆಗಳ ಲಾಭವನ್ನು ಹೂಡಿಕೆದಾದರೂ 60 ವರ್ಷದ ಬಳಿಕ ಪಡೆಯುತ್ತಾರೆ. ವ್ಯಕ್ತಿಯ ನಿವೃತ್ತಿಯ ವಯಸ್ಸು 60 ವರ್ಷ ಆಗಿರುವುದರಿಂದ ಯಾವುದೇ ರೀತಿಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರು ಕೂಡ ನಿಮಗೆ 60 ವರ್ಷ ಆದ ಬಳಿಕ ಮಾತ್ರ ನಿಮಗೆ ಪಿಂಚಣಿಯ ಹಣ ಲಭ್ಯವಾಗುತ್ತದೆ. ಆದರೆ ಇದೀಗ ಮಹಿಳೆಯರಿಗೆ ಸಂಬಂಧಿಸಿದಂತೆ ಈ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಿದೆ. ಈ ಸರ್ಕಾರವು ಮಹಿಳೆಯರಿಗಾಗಿ ದೊಡ್ಡ ಘೋಷಣೆ ಮಾಡಿದೆ.

Image Credit: Scroll

ಮಹಿಳೆಯರ ಪಿಂಚಣಿ ಪಡೆಯುವ ವಯಸ್ಸು ಇಳಿಕೆ
ಸದ್ಯ ಈ ರಾಜ್ಯ ಸರ್ಕಾರ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಮಹಿಳೆಯರ ಪಿಂಚಣಿ ಅರ್ಹತೆಯ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಸದ್ಯ ಈ ರೂಲ್ಸ್ ಜಾರ್ಖಂಡ್ ನಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ಬರುತ್ತದೆ ಎಂದು ತಿಳಿದು ಬಂದಿರುತ್ತದೆ. ನಮ್ಮ ಕರ್ನಾಟಕದಲ್ಲಿ ಕೂಡ ಮುಂದಿನ ದಿನಗಳಲ್ಲಿ ಮಹಿಳೆಯರ ಪಿಂಚಣಿ ವಯಸ್ಸನ್ನ ಇಳಿಕೆ ಮಾಡುವ ಸದ್ಯತ್ಯೆ ಇದೆ.

ಈ ಸಂಬಂಧ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ. ಇದು ಜಾರಿಯಾದ ನಂತರ ಹೆಚ್ಚುವರಿಯಾಗಿ 18 ಲಕ್ಷ ಫಲಾನುಭವಿಗಳು ಪಿಂಚಣಿ ಯೋಜನೆಗೆ ಸೇರಲಿದ್ದಾರೆ. ರಾಜ್ಯದಲ್ಲಿ ಒಟ್ಟು 35.68 ಲಕ್ಷ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಪಿಂಚಣಿದಾರರ ಸಂಖ್ಯೆ ಶೇ.82 ರಷ್ಟು ಹೆಚ್ಚಾಗಿದೆ.

Image Credit: Moneycontrol

ಅಂಗನವಾಡಿಗಳಿಗೆ ವಿಶೇಷ ಯೋಜನೆ
ಅಂಗನವಾಡಿ ಕೇಂದ್ರಗಳಿಗೆ ಇಲಾಖೆ ಸಮಗ್ರ ಯೋಜನೆ ಸಿದ್ಧಪಡಿಸಿದೆ. ಇನ್ನುಮುಂದೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಬೆಂಚು, ಡೆಸ್ಕ್ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗೆ ಪೌಷ್ಠಿಕಾಂಶದ ಜೊತೆಗೆ ಪೂರ್ವ ಪ್ರಾಥಮಿಕ ಶಾಲಾ ಪ್ರಯೋಜನಗಳನ್ನು ಒದಗಿಸಲು ಚಳಿಗಾಲದ ಸಮವಸ್ತ್ರ, ಓದುವ ಮತ್ತು ಬರೆಯುವ ಸಾಮಗ್ರಿಗಳನ್ನು ಸಹ ಕೇಂದ್ರಗಳಿಗೆ ಒದಗಿಸಲಾಗುವುದು.

ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ
ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಟ್ರಾನ್ಸ್ ಜೆಂಡರ್ ಬೋರ್ಡ್ ಸ್ಥಾಪಿಸಲು ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರಿಗಾಗಿ ವೃದ್ದಾಶ್ರಮವನ್ನು ನಿರ್ಮಿಸಲು ಕಾರ್ಯ ಕೈಗೊಳ್ಳಲಾಗಿದೆ. ಇವೆಲ್ಲದರ ಜೊತೆಗೆ ಜಾರ್ಖಂಡ್ ಸರ್ಕಾರವು ರಾಜ್ಯದ ವಿಧವಾ ವಿವಾಹಕ್ಕೆ ಉತ್ತೇಜನ ನೀಡುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಿಂದ ಯೋಜನೆ ಆರಂಭಾವಾಗಲಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.