Ringing Bels Company Smart Phone Freedom 251: ರಿಂಗಿಂಗ್ ಬೆಲ್ಸ್ (Ringing Bels) ಕಂಪನಿಯು 2016 ರಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಫೋನ್ ನೀಡುವುದಾಗಿ ಹೇಳಿಕೊಂಡಿತ್ತು. ಫೋನಿನ ಬೆಲೆ 251 ರೂ. ಗಳಾಗಿದ್ದವು. ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆ ಸಮಯದಲ್ಲಿ ಈ ಕೆಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬುಕ್ಕಿಂಗ್ ಶುರುವಾಗಿತ್ತು.
ಆದರೆ ಐದಾರು ತಿಂಗಳು ಕಳೆದರು ಜನರಿಗೆ ಫೋನ್ ತಲುಪಲೇ ಇಲ್ಲ ಹಾಗಾಗಿ ಜನರು ಇದರ ವಿರುದ್ಧ ದನಿ ಎತ್ತಿದರು. ಇದಾದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಇದರಿಂದ ಕಂಪನಿ ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಸರಕಾರ ಕಂಪನಿ ವಿರುದ್ಧ ಕ್ರಮ ಕೈಗೊಂಡು ಕೊನೆಗೆ ಕಂಪನಿ ಜನರ ಹಣವನ್ನು ವಾಪಾಸ್ ನೀಡಬೇಕಾಯಿತು.
ಪ್ರೀಡಂ 251 ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಅತ್ಯಂತ ಅಗ್ಗದ ಮೊಬೈಲ್ ಎಂದು ಪರಿಗಣಿಸಲಾಗಿದೆ. ಆದರೆ, ಇದೊಂದು ಮೋಸ ಹಾಗೂ ಜನರ ಕೈಗೆ ಮೊಬೈಲ್ ಬಾರದ ಕಾರಣ ಇದು ತಪ್ಪು. ಕಂಪನಿಯು ಈ ಫೋನಿನ ನಿಯಮಿತ ಬೆಲೆಯನ್ನು ರೂ. 500 ಎಂದು ಹೇಳಿದೆ.
ರಿಂಗಿಂಗ್ ಬೆಲ್ಸ್ 50 ಲಕ್ಷ ಫೋನ್ ಗಳನ್ನೂ ಮಾರಾಟ ಮಾಡುವ ಗುರಿಯನ್ನು ಹೊಂದಿತ್ತು. ಆದರೆ ವೆಬ್ ಸೈಟ್ ಮೊದಲ ದಿನವೇ ಕ್ರ್ಯಾಶ್ ಆಗಿತ್ತು. ಬುಕ್ಕಿಂಗ್ ಅನ್ನು ಮುಚ್ಚುವಾಗ ಕಂಪನಿಯು 1 .75 ಕೋಟಿ ಯುನಿಟ್ ಗಳ ಮುಂಗಡ ಆರ್ಡರ್ ಗಳನ್ನೂ ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ.
ಅನೇಕ ಜನರು ಈ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಅದು ಯಾರಿಗೂ ಸಿಗಲಿಲ್ಲ. ಅದೇ ಸಮಯದಲ್ಲಿ ಕಂಪನಿಯು ಆರಂಭದಲ್ಲಿ 30000 ಜನರಿಗೆ ಪ್ರಿ ಆರ್ಡರ್ ಮೊತ್ತವನ್ನು ಹಿಂದಿರುಗಿಸುವ ಬಗ್ಗೆ ಮಾತನಾಡಿದೆ. ಫೋನ್ ಡೆಲವರಿ ಮಾಡುವಾಗ ಪಾವತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಕಂಪನಿ ಹೇಳಿತ್ತು. ಆದರೆ ಪ್ರೀಡಂ 251 ಅನ್ನು ಇಂದಿಗೂ ವಿತರಿಸಲಾಗಿಲ್ಲ.
ಫೆಬ್ರವರಿ 20, 2016 ರಂದು ಕಂಪನಿಯ ಕಚೇರಿಗಳ ಮೇಲೆ ದಾಳಿ ನಡೆಸಲಾಯಿತು. ಕಂಪನಿಯು ಪರಿಚಯಿಸಿದ ಉತ್ಪನ್ನಗಳು BIS ಪ್ರಮಾಣೀಕರಣವನ್ನು ಪಡೆದಿಲ್ಲ ಎನ್ನುವುದು ತಿಳಿದುಬಂದಿತ್ತು.