Pule Donkey Cheese: ವಿಶ್ವದ ಈ ಅತೀ ದುಬಾರಿ ಪನ್ನೀರ್ ಯಾವ ಪ್ರಾಣಿಯ ಹಾಲಿನಿಂದ ಮಾಡಲಾಗುತ್ತದೆ.

ಪುಲೆ ಚೀಸ್ ಅನ್ನುವ ಪನ್ನೀರ್ ವಿಶ್ವದ ಅತೀ ದುಬಾರಿ ಪನ್ನೀರ್ ಆಗಿದೆ

Pule Donkey Cheese Panneer Price: ಸಾಮಾನ್ಯವಾಗಿ ಎಲ್ಲರೂ ಪನ್ನೀರ್ (Panneer) ಅನ್ನು ಇಷ್ಟಪಡುತ್ತಾರೆ. ಪನ್ನೀರ್ ಹೆಚ್ಚು ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೆ ಕೂಡ ಒಳ್ಳೆಯದು. ಯಾವುದಾದರು ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಈ ಪನ್ನೀರ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇದೀಗ ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಪನ್ನೀರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Pule Donkey Cheese Panneer Price
Image Source: Curley Tales

 

ಅತ್ಯಂತ ದುಬಾರಿ ಪನ್ನೀರ್ ಯಾವುದು
ಈ ವಿಶ್ವದಲ್ಲಿ ಸಿಗುವ ಅತೀ ದುಬಾರಿ ಪನ್ನೀರು ಅಂದರೆ ಅದೂ ಪುಲೆ ಚೀಸ್ ಪನ್ನೀರ್ ಆಗಿದೆ. ಪುಲೆ ಚೀಸ್ ನ ಬೆಲೆಯ ಬಗ್ಗೆ ಇದೀಗ ತಿಳಿದುಕೊಳ್ಳೋಣ. ಪುಲೆ ಚೀಸ್ (Pule Donkey Cheese) ನ ಬೆಲೆ ಸುಮಾರು 800-1000 ಯುರೋಗಳು ಅಂದರೆ ಕೆಜಿಗೆ ಸುಮಾರು 80,000 ರಿಂದ 82,000 ರೂಪಾಯಿಗಳು.

ಇದು ವಿಶ್ವದ ಅತ್ಯಂತ ದುಬಾರಿ ಚೀಸ್ ಎಂದು ಪರಿಗಣಿಸಲಾಗುತ್ತದೆ. ಅನುಪಯುಕ್ತ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುವ ಕೆಲವು ಪ್ರಾಣಿಗಳ ಹಾಲಿನಿಂದ ಪನ್ನೀರ್ ಅನ್ನು ತಯಾರಿಸಲಾಗುತ್ತದೆ. ಯಾವ ಪ್ರಾಣಿಗಳ ಹಾಲಿನಿಂದ ಪನ್ನೀರ್ ಅನ್ನು ತರಯಾರಿಸಲಾಗುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Pule Donkey Cheese Panneer Price
Image Source: Daily Mail

ಕತ್ತೆಯ ಹಾಲಿನಿಂದ ಪನ್ನೀರ್ ಅನ್ನು ತಯಾರಿಸಲಾಗುತ್ತದೆ
ಈ ಪುಲೆ ಚೀಸ್ ಪನ್ನೀರ್ ಅನ್ನು ಕತ್ತೆಯ ಹಾಲಿನಿಂದ (Donkey Milk) ತಯಾರಿಸಲಾಗುತ್ತದೆ. 25 ಲೀಟರ್ ಹಾಲಿನಿಂದ ಕೇವಲ ಒಂದು ಕಿಲೋ ಪನ್ನೀರ್ ಅನ್ನು ತಯಾರಿಸಲಾಗುತ್ತದೆ.

Join Nadunudi News WhatsApp Group

ಪನ್ನೀರ್ ಅನ್ನು ಸಾಮಾನ್ಯ ಕತ್ತೆಯ ಹಾಲಿನಿಂದ ತಯಾರಿಸಲು ಸಾಧ್ಯವಿಲ್ಲ. ಸರ್ಬಿಯಾದಲ್ಲಿ ಕಂಡುಬರುವ ವಿಶೇಷ ಕತ್ತೆಯ ಬಾಲ್ಕನ್ ಹಾಲಿನಿಂದ ತಯಾರಿಸಲಾಗುತ್ತದೆ. ಈ ಪುಲೆ ಚೀಸ್ ಅನ್ನು ಸರ್ಬಿಯಾದ ಜಸಾವಿಕ ಸ್ಪೆಷಲ್ ನೇಚರ್ ರಿಸರ್ವ್ ನಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. 60 ಪ್ರತಿಶತ ಬಾಲ್ಕನ್ ಕತ್ತೆ ಹಾಲು ಮತ್ತು 40 ಪ್ರತಿಶತ ಮೇಕೆ ಹಾಲನ್ನು (Goat Milk) ಬಳಸಿ ಪನ್ನೀರ್ ಅನ್ನು ತಯಾರಿಸುತ್ತಾರೆ.

Pule Donkey Cheese Panneer Price
Image Source: India Today

Join Nadunudi News WhatsApp Group