World Cup Income: ವಿಶ್ವಕಪ್ 2023 ರ ಆಯೋಜನೆಯಿಂದ ಭಾರತಕ್ಕೆ ಬರುವ ಒಟ್ಟು ಲಾಭ ಎಷ್ಟು…? ಕೋಟಿ ಕೋಟಿ ಆದಾಯ.

ವಿಶ್ವಕಪ್ ನಿಂದ ಭಾರತದ ಆರ್ಥಿಕತೆಗೆ ಬರಲಿದೆ ಕೋಟಿ ಕೋಟಿ ಲಾಭ.

World Cup 2023 India’s economy Income: ಈಬಾರಿ World Cup 2023 ಭಾರತದಲ್ಲಿ ಆಯೋಜಿಸಿರುವುದು ಎಲ್ಲರಿಗು ತಿಳಿದೇ ಇದೆ. 2011 ರಲ್ಲಿ ಭಾರತದಲ್ಲಿ ವಿಶ್ವ ಕಪ್ ನಡೆಸಿದಾಗ ಟೀಮ್ ಇಂಡಿಯಾ ಕಪ್ ಗೆದ್ದಿತ್ತು. ಹೀಗಾಗಿ 2023 ರಲ್ಲಿ ಕೂಡ ಭಾರತದಲ್ಲಿಯೇ ಮ್ಯಾಚ್ ಇರುವ ಕಾರಣ ಈ ಬಾರಿ ಕೂಡ Team India Cup ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು ಬಹುನಿರೀಕ್ಷಿತ India v/s Pakistan ಪಂದ್ಯ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆಯಲಿದೆ.

ಸದ್ಯ ಪಕಿಸ್ತಾನದ ವಿರುದ್ಧ ಭಾರತ ವಿಜಯ ಸಾದಿಸುತ್ತ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಬಾರಿ ಭಾರತದಲ್ಲಿ ಆಯೋಜಿಸಿರುವ ವಿಶ್ವಕಪ್ 2023 ಯಿಂದ Indian Economy ಎಷ್ಟು ಲಾಭ ಬರಬಹುದು ಎನ್ನುವ ಬಗ್ಗೆ ಕೆಲವರಿಗೆ ಪ್ರಶ್ನೆ ಮೂಡಿರಬಹುದು. ಈ ಬಾರಿಯ ವಿಶ್ವಕಪ್ ನಿಂದ ಭಾರತಕ್ಕೆ ಬರುವ ಆದಾಯ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

World Cup 2023 India's economy Income
Image Credit: Timesnowhindi

ಭಾರತದ ಆರ್ಥಿಕತೆಯ ಲೆಕ್ಕಾಚಾರ ಹೇಗೆ..?
World Cup 2023 ನೋಡಲು ದೇಶ ವಿದೇಶಗಳಿಂದರು ಜನರು ಆಗಮಿಸಲಿದ್ದಾರೆ. ಈ ವೇಳೆ ಪಂದಯ ವೀಕ್ಷಣೆಗಾಗಿ ಟಿಕೆಟ್ ಖರೀದಿ, ವಿಮಾನಯಾನ, ಹೋಟೆಲ್, ಆಹಾರ ಇತರ ಸೇವೆಯಲ್ಲಿ ಹೆಚ್ಚಿನ ಏರಿಕೆ ಕಂಡುಬರಲಿದೆ. ವಿದೇಶಿ ಪ್ರವಾಸಿಗರು ತಮ್ಮ ಖರ್ಚಿಗಾಗಿ ಸರಿಸುಮಾರು 450 ರಿಂದ 600 ಕೋಟಿ ಹಣ ಖರ್ಚು ಮಾಡಲಿದ್ದಾರೆ. ಇನ್ನು ದೇಶೀ ಪ್ರವಾಸಿಗಳು 150 ರಿಂದ 250 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ಇಂಧನಕ್ಕಾಗಿ 300 ರಿಂದ 500 ಕೋಟಿ ಮೀಸಲಿಡಬಹುದು. ಈ ಎಲ್ಲ ಖರ್ಚಿನ ಆದರದ ಮೇಲೆ ಭಾರತ ಆರ್ಥಿಕತೆಗೆ ಬರುವ ಲಾಭವನ್ನು ಲೆಕ್ಕಾಚಾರ ಹಾಕಬಹುದು.

ವಿಶ್ವಕಪ್ 2023 ಯಿಂದ ಭಾರತದ ಆರ್ಥಿಕತೆಗೆ ಎಷ್ಟು ಆದಾಯ ಬರಲಿದೆ..?
ಸದ್ಯ ಭಾರತದಲ್ಲಿ ನಡೆಯಲಿರುವ World cup 2023 ರಿಂದಾಗಿ ಭಾರತದ GDP 2 .65 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಈ ಅವಧಿಯಲ್ಲಿ ಭಾರತದ GDP ಗೆ 22,000 ಕೋಟಿ ರೂ. ಮೊತ್ತದ ಕೊಡುಗೆ ಸಿಗಲಿದೆ ಎಂದು BOB ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

World Cup 2023 Latest Update
Image Credit: Financialexpress

ಅಕ್ಟೋಬರ್ 5ರಿಂದ ಆರಂಭವಾಗಿರುವ ಈ ಟೂರ್ನಿಯಲ್ಲಿ 45 ದಿನಗಳ ಕಾಲ ದೇಶದ ವಿವಿಧ ಕೇಂದ್ರಗಳಲ್ಲಿ 10 ದೇಶಗಳ ನಡುವೆ ಒಟ್ಟು 48 ಪಂದ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕನಿಷ್ಠ 25 ಲಕ್ಷ ಮಂದಿ ದೇಶದ 10 ಸ್ಥಳಗಳ ಕ್ರೀಡಾಂಗಣಗಳಲ್ಲಿ 48 ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಲಿದ್ದಾರೆ. ಈ ಎಲ್ಲ ಖರ್ಚಿನ ಲೆಕ್ಕಾಚಾರ ಹಾಕಿದರೆ World Cup 2023 ಯಿಂದ 18000 ರಿಂದ 22000 ಕೋಟಿ ರೂ. ದೇಶದ ಆರ್ಥಿಕತೆಗೆ ಬರಲಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group