Rachin Ravindra: ಒಂದೇ ಪಂದ್ಯದಲ್ಲಿ ಕೊಹ್ಲಿ ಮತ್ತು ಸಚಿನ್ ದಾಖಲೆ ಮುರಿದ ರಚಿನ್ ರವೀಂದ್ರ, ಮೆಚ್ಚಿದ ಕ್ರಿಕೆಟ್ ಅಭಿಮಾನಿಗಳು.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರಚಿನ್ ರವೀಂದ್ರ

Zealand international cricketer Rachin Ravindra Break Sachin Tendulkar Records: ಸದ್ಯ ಭಾರತದಲ್ಲಿ ICC World Cup ನೆಡೆಯುತ್ತಿದೆ. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಡೆದ ಪಂದ್ಯದಲ್ಲಿ ಪಾಕ್‌ ವಿರುದ್ಧ ರಚಿನ್‌ ರವೀಂದ್ರ ಭರ್ಜರಿ ಶತಕ ಸಿಡಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಈ ಶತಕದೊಂದಿಗೆ ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ (Sachin tendulkar) ಹಾಗೂ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ಕೊಹ್ಲಿಗೂ ಮುನ್ನವೇ ನ್ಯೂಜಿಲೆಂಡ್‌ ಕ್ರಿಕೆಟಿಗ Rachin Ravindra ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲೇ Sachin Tendulkar ಅವರ ಶತಕ ದಾಖಲೆಯೊಂದನ್ನ ಮುರಿದಿದ್ದಾರೆ.

Rachin Ravindra
Image Credit: Public TV

ಸಚಿನ್ ದಾಖಲೆ ಮುರಿದ ರಚಿನ್
ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ 2 ಶತಕಗಳನ್ನು ಗಳಿಸಿದವರಲ್ಲಿ Sachin Tendulkar ಮೊದಲಿಗರಾಗಿದ್ದಾರೆ. ಸಚಿನ್‌ ತೆಂಡೂಲ್ಕರ್‌ 23 ವರ್ಷವಿದ್ದಾಗ 1996 ರ ವಿಶ್ವಕಪ್‌ನಲ್ಲಿ 2 ಶತಕ ಸಿಡಿಸಿದ್ದರು ಆದರೆ ಈಗ ಆ ದಾಖಲೆಯನ್ನು ರಚಿನ್ ಉಡೀಸ್ ಮಾಡಿದ್ದಾರೆ. ಹೌದು ಇದೀಗ 23 ವರ್ಷ ವಯಸ್ಸಿನ ರಚಿನ್‌ ರವೀಂದ್ರ 2023 ರ ವಿಶ್ವಕಪ್‌ ಟೂರ್ನಿಯಲ್ಲಿ 3 ಶತಕ ಸಿಡಿಸಿ ಸಚಿನ್‌ ದಾಖಲೆ ಮುರಿದಿದ್ದಾರೆ.

ಕೊಹ್ಲಿಗೂ ಮುನ್ನವೇ ಸಚಿನ್ ಶತಕ ದಾಖಲೆ ಉಡೀಸ್‌ ಮಾಡಿದ ರಚಿನ್‌
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ ನಲ್ಲಿ 7 ಪಂದ್ಯಗಳಲ್ಲಿ 4 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್‌ ಡಿಕಾಕ್‌ 545 ರನ್‌ ಗಳಿಸಿ ವಿಶ್ವಕಪ್‌ ಟೂರ್ನಿಯ ಟಾಪ್‌ ಆಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಈಗ Rachin Ravindra  ಹಿಂದಿಕ್ಕಿದ್ದಾರೆ. ಹೌದು ರವೀಂದ್ರ 8 ಪಂದ್ಯಗಳಲ್ಲಿ 3 ಶತಕ ಬಾರಿಸಿ 523 ರನ್‌ನಿಂದ 2ನೇ ಸ್ಥಾನದಲ್ಲಿದ್ದಾರೆ. ಆದರೆ 442 ರನ್‌ ಬಾರಿಸಿರುವ Virat Kohli 3ನೇ ಸ್ಥಾನದಲ್ಲಿದ್ದಾರೆ. 428 ರನ್‌ ಗಳಿಸಿರುವ David Warner 4ನೇ ಸ್ಥಾನದಲ್ಲಿದ್ದಾರೆ, 402 ರನ್‌ ಬಾರಿಸಿರುವ Rohit Sharma 5ನೇ ಸ್ಥಾನದಲ್ಲಿದ್ದಾರೆ.

Rachin Ravindra And Virat Kohli
Image Credit: news.jan-manthan

ರಚಿನ್‌ ರವೀಂದ್ರ ಯಾರು..?
Rachin Ravindra ಅವರು ನ್ಯೂಜಿಲೆಂಡ್‌ನ ಕ್ರಿಕೆಟ್ ಪ್ಲೇಯರ್. ರಚಿನ್‌ ರವೀಂದ್ರ ಅವರ ತಂದೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಇವರು ಅಪ್ಪಟ ಕ್ರಿಕೆಟ್‌ ಅಭಿಮಾನಿ. ಅದರಲ್ಲೂ ರವಿ ಕೃಷ್ಣಮೂರ್ತಿ ಅವರು ಭಾರತೀಯ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರ ಪಕ್ಕಾ ಫ್ಯಾನ್‌. ಈ ಕಾರಣದಿಂದಾಗಿ ರಾಹುಲ್‌ ದ್ರಾವಿಡ್‌ ಹೆಸರಿನಿಂದ ʻರʼ ಹಾಗೂ ಸಚಿನ್‌ ತೆಂಡೂಲ್ಕರ್‌ ಹೆಸರಿನಿಂದ ʻಚಿನ್‌ʼ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದರು ಎಂಬುದು ವಿಶೇಷವಾದ ಸಂಗತಿಯಾಗಿದೆ.

Join Nadunudi News WhatsApp Group

Join Nadunudi News WhatsApp Group