Asia Cup 2023: ಏಷ್ಯಾಕಪ್ ನಲ್ಲಿ “ಮ್ಯಾನ್ ಆಫ್ ದಿ ಟೂರ್ನಮೆಂಟ್” ಪ್ರಶಸ್ತಿ ಗೆಲ್ಲುವ ಟಾಪ್ 5 ಆಟಗಾರರು ಇವರೇ.
ಏಷ್ಯಾಕಪ್ ನಲ್ಲಿ "ಮ್ಯಾನ್ ಆಫ್ ದಿ ಟೂರ್ನಮೆಂಟ್" ಪ್ರಶಸ್ತಿ ಗೆಲ್ಲುವ ಆಟಗಾರ ಪಟ್ಟಿ ಇಲ್ಲಿದೆ.
Asia Cup 2023 Man Of The Tournament: ಏಷ್ಯಾಕಪ್ 2023 (Asia Cup 2023) ರ 13 ನೇ ಆವೃತ್ತಿ ಆಗಸ್ಟ್ 30 ರಿಂದ ಆರಂಭವಾಗಿದೆ. ಕ್ರಿಕೆಟ್ ಪ್ರಿಯರು ಈ Asia Cup ಪಂದ್ಯಕ್ಕಾಗಿ ಕಾಯುತ್ತಿದ್ದರು. ಬಹಿನೀರಿಕ್ಷಿತ ಏಷ್ಯಾಕಪ್ ಆಗಸ್ಟ್ 30 ರಂದು ಅದ್ದೂರಿಯಾಗಿ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಖ್ಯಾತ ಆಟಗಾರವು ಹೊಸ ಹೊಸ ದಾಖಲೆ ಸೃಷ್ಟಿಮಾಡಲಿದ್ದಾರೆ.
ಏಷ್ಯಾ ಕಪ್ 2023 ರಲ್ಲಿ 6 ತಂಡಗಳು ಭಾಗವಹಿಸುತ್ತಿವೆ. ಇನ್ನು Asia Cup 2023 ರಲ್ಲಿ ‘ಮ್ಯಾನ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನು ಗೆಲ್ಲಬಹುದಾದ 5 ಆಟಗಾರರ ಯಾರು ಎನ್ನುವ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.
1. ಬಾಬರ್ ಆಜಮ್
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳ ತಂಡವನ್ನು 238 ರನ್ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೆಚ್ಚಿನ ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಬಾಬರ್ ಅಜಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಏಕದಿನ ಕ್ರಿಕೆಟ್‌ನಲ್ಲಿ 19 ಶತಕಗಳನ್ನು ಬಾರಿಸಿದ್ದಾರೆ.
2. ಶಾದಾಬ್ ಖಾನ್
ನಿನ್ನೆಯ ಮೊದಲ ಪಂದ್ಯದಲ್ಲಿ ಶಾದಾಬ್ ಖಾನ್ ತಮ್ಮ 7 ಓವರ್‌ಗಳಲ್ಲಿ 4 ವಿಕೆಟ್ ಗಳಿಸಿದ್ದಾರೆ. ಇನ್ನು 2023 ರ ಏಷ್ಯಾ ಕಪ್ ನಲ್ಲಿ ಶಾದಾಬ್ ಖಾನ್ ತನ್ನ ಆಲ್‌ರೌಂಡ್ ಆಟವನ್ನು ತೋರಿಸಿದರೆ ಈ ವರ್ಷ ಪಾಕಿಸ್ತಾನವನ್ನು ಏಷ್ಯಾಕಪ್ ಚಾಂಪಿಯನ್ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಬಹುದು.
3. ರಶೀದ್ ಖಾನ್
ರಶೀದ್ ಖಾನ್ ಪ್ರಸ್ತುತ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ತಂಡ 4 ಹಂತ ತಲುಪಿದರೆ, ರಶೀದ್ ಖಾನ್ ಕೂಡ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆಲ್ಲಬಹುದು.
4. ಶಾಹೀನ್ ಅಫ್ರಿದಿ
ಶಾಹೀನ್ ಅಫ್ರಿದಿ ಪ್ರಸ್ತುತ ವಿಶ್ವ ಕ್ರಿಕೆಟ್ ನ ಅಗ್ರ 3 ಬೌಲರ್ ಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ಶಾಹೀನ್ ತನ್ನ ಸ್ವಿಂಗ್ ಮತ್ತು ಸೀಮ್ ನಿಂದ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳಿಗೆ ಪಂದ್ಯಾವಳಿಯ ಆರಂಭದಲ್ಲಿ ಪೆವಿಲಿಯನ್ ಹಾದಿ ತೋರಿಸಿದರೆ, ನಂತರ ಪಾಕಿಸ್ತಾನವನ್ನು ಏಷ್ಯಾಕಪ್ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆಯಬಹುದಾಗಿದೆ.
5. ಹಾರ್ದಿಕ್ ಪಾಂಡ್ಯಾ
ಹಾರ್ದಿಕ್ ಪಾಂಡ್ಯ ಇಂದು ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ಈ ಏಷ್ಯಾಕಪ್ 2023 ರಲ್ಲಿ ಹಾರ್ದಿಕ್ ಪಾಂಡ್ಯಾ ಆಲ್ ರೌಂಡರ್ ಪ್ರದರ್ಶನ ನೀಡಿದರೆ ಟೀಮ್ ಇಂಡಿಯಾ ತನ್ನ ಎಂಟನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯವಾಗುತ್ತದೆ. ಈ ವೇಳೆ ಹಾರ್ದಿಕ್ ಪಾಂಡ್ಯ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆಯುವ ಅವಕಾಶ ಇರುತ್ತದೆ.