Semi Final: ವಿಶ್ವಕಪ್ ಸೆಮಿ ಫೈನಲ್ ತಲುಪಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು, ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ.
ಈ ಬಾರಿ ಭಾರತ ವಿಶ್ವಕಪ್ ಸೆಮಿಫೈನಲ್ ತಲುಪಲು ಎಷ್ಟು ಪಂದ್ಯ ಗೆಲ್ಲಬೇಕು ಎನ್ನುವ ಬಗ್ಗೆ ಸಂಪೂರ್ಣ ವಿವರ.
World Cup 2023 Semi Final: ಸದ್ಯ ದೇಶದಲ್ಲಿ ವಿಶ್ವ ಕಪ್ (Wolrd Cup) ಪಂದ್ಯದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ. ಈ ಬಾರಿ ಟೀಮ್ ಇಂಡಿಯಾ ಕಪ್ ಗೆಲ್ಲುವುದ್ದಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ. ಈಗಾಗಲೇ ಹಲವು ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ (Team India) ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ವಿಶ್ವ ಕಪ್ ಪಂದ್ಯ ದಿನೇ ದಿನೇ ರೋಚಕ ತಿರುವನ್ನು ಪಡೆಯುತ್ತಿದೆ.
ICC ಏಕದಿನ ವಿಶ್ವ ಕಪ್ 2023
ಸದ್ಯ ICC ಏಕದಿನ ವಿಶ್ವ ಕಪ್ 2023 ರ ಪಂದ್ಯ ಗೆಲ್ಲಲು ಬರೋಬ್ಬರಿ 10 ತಂಡಗಳು ಮೈದಾನಕ್ಕಿಳಿದಿದೆ. ಬರೋಬ್ಬರಿ 10 ತಂಡಗಳು 2023 World Cup ಗಾಗಿ ಸೆಣಸಾಡುತ್ತಿವೆ. ಈ ಮೆಗಾ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡವು 9 ಪಂದ್ಯಗಳನ್ನು ಆಡುತ್ತದೆ. ಈ ಬಾರಿ ವಿಶ್ವಕಪ್ ಸೆಮಿಫೈನಲ್ ತಲುಪಲು ಪ್ರತಿ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದೆ ವಿಶ್ವಕಪ್ ಅನ್ನು 2 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಆದರೆ ಈ ಬಾರಿ ಎಲ್ಲಾ ತಂಡಗಳು ಎಲ್ಲಾ ತಂಡಗಳ ವಿರುದ್ಧ ಪೈಪೋಟಿಗೆ ಇಳಿಯಲಿದೆ.
ವಿಶ್ವ ಕಪ್ ಸೆಮಿ ಫೈನಲ್ ತಲುಪಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು
ಕಳೆದ 2019ರ ವಿಶ್ವಕಪ್ ಮಾದರಿಯಲ್ಲೇ ಈ ಬಾರಿಯೂ ವಿಶ್ವಕಪ್ ಟೂರ್ನಿ ನಡೆಯಲಿದೆ. ಪ್ರತಿ ತಂಡವೂ ಲೀಗ್ ಹಂತದಲ್ಲಿ 9 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಲೀಗ್ ಹಂತದಲ್ಲಿ 45 ಪಂದ್ಯಗಳು ನಡೆಯಲಿವೆ. ಈ ವೇಳೆ ಅಂಕಪಟ್ಟಿಯಲ್ಲಿ ಅಗ್ರ 4 ತಂಡಗಳು ಸೆಮಿಸ್ ಪ್ರವೇಶಿಸಲಿವೆ. ನಂತರ 1 ಮತ್ತು 4ನೇ ಸ್ಥಾನ ಪಡೆದ ತಂಡಗಳು ಫೈನಲ್ ಗೆ ಸೆಣಸಲಿದ್ದು, 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ 2 ತಂಡಗಳು ಫೈನಲ್ ಪ್ರವೇಶಿಸಲಿವೆ.
ವಿಶ್ವಕಪ್ 2023 ರ ಲೀಗ್ ಹಂತದಲ್ಲಿ ಪ್ರತಿ ತಂಡವು 9 ಪಂದ್ಯವನ್ನು ಆಡುತ್ತದೆ. ಈ ವೇಳೆ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯ ಗೆದ್ದರೆ ಆ ತಂಡವು ಸೆಮಿ ಫೈನಲ್ ಹಂತಕ್ಕೆ ತಲುಪುತ್ತದೆ. ಆದರೆ 7 ಪಂದ್ಯವನ್ನು 4 ಕಿಂತ ಹೆಚ್ಚು ತಂಡಗಳು ಸಮಾನವಾಗಿ ಗೆದ್ದಿದ್ದರೆ ಆಗ ನೆಟ್ ರನ್ ರೆಟ್ ಆಧಾರದ ಮೇಲೆ ಸೆಮೀಸ್ ನಿರ್ಧಾರವಾಗುತ್ತದೆ. ಇನ್ನು 2011 ರಲ್ಲಿ ವಿಶ್ವ ಕಪ್ ಗೆದ್ದ ಟೀಮ್ ಇಂಡಿಯಾ 2023 ರಲ್ಲಿ ವಿಶ್ವಕಪ್ ಪಡೆಯುತ್ತ ಎನ್ನುವುದನ್ನು ಕಾದು ನೋಡಬೇಕಿದೆ.