Prize Money: ವರ್ಲ್ಡ್ ಕಪ್ ನಲ್ಲಿ ವಿನ್ ಆದ ತಂಡಕ್ಕೆ ಸಿಗುವ ಒಟ್ಟು ಬಹುಮಾನದ ಹಣ ಎಷ್ಟು…? ದುಬಾರಿ ಬಹುಮಾನ.

ವರ್ಲ್ಡ್ ಕಪ್ ನಲ್ಲಿ ವಿನ್ ಆಗುವ ತಂಡಕ್ಕೆ ದೊಡ್ಡ ಮೊತ್ತದ ಬಹುಮಾನವನ್ನ ಕೊಡಲಾಗುತ್ತದೆ.

ICC World Cup 2023 Prize Money: ICC World Cup 2023 ಸೆಮಿ ಫೈನಲ್ ನಲ್ಲಿ Team India ನ್ಯೂಜಿಲ್ಯಾಂಡ್ ನ ವಿರುದ್ಧ ಹಾಗೂ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ ಜಯ ಗಳಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಇಂದು (ನವೆಂಬರ್ 19) ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. India ಹಾಗು Australia ತಂಡಗಳು 20 ವರ್ಷಗಳ ನಂತರ ಏಕದಿನ ವಿಶ್ವಕಪ್ ಫೈನಲ್‌ ನಲ್ಲಿ ಮುಖಾಮುಖಿಯಾಗಿದೆ.

ಭಾರತ ತಂಡವು 12 ವರ್ಷಗಳ ನಂತರ ತನ್ನ ನಾಲ್ಕನೇ ಬಾರಿ ಏಕದಿನ ವಿಶ್ವಕಪ್ ಫೈನಲ್ ತಲುಪಿದೆ. ಸದ್ಯ ಭಾನುವಾರದಂದು ನಡೆಯಲಿರುವ India v/s Australia Final Match ನಲ್ಲಿ ವಿನ್ನರ್ ಪಟ್ಟ ಯಾವ ತಂಡ ಗೆಲ್ಲುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ICC World Cup 2023 ನಲ್ಲಿ ವಿನ್ ಆಗುವ ತಂಡ ಕಪ್ ಗೆಲ್ಲುದರ ಜೊತೆಗೆ ಎಷ್ಟು ಬಹುಮಾನ ಮೊತ್ತವನ್ನು ಗೆಲ್ಲುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

worldcup 2023 price money
Image Credit: Original Source

ವರ್ಲ್ಡ್ ಕಪ್ ನಲ್ಲಿ ವಿನ್ ಆದ ತಂಡಕ್ಕೆ ಸಿಗುವ ಒಟ್ಟು ಬಹುಮಾನದ ಹಣ ಎಷ್ಟು…?
*IND vs AUS ODI ವಿಶ್ವಕಪ್ ವಿಜೇತರು US$4 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 33 ಕೋಟಿ ನಗದು ಬಹುಮಾನವನ್ನು ಪಡೆಯುತ್ತಾರೆ ಮತ್ತು ಇತರ ಭಾಗವಹಿಸುವ ತಂಡಗಳನ್ನು ಸಹ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳೊಂದಿಗೆ ಗೌರವಿಸಲಾಗುತ್ತದೆ.

*ಒಟ್ಟಾರೆ US$10 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 83 ಕೋಟಿ ಬಹುಮಾನದ ಮೊತ್ತದಲ್ಲಿ, ICC ODI ವಿಶ್ವಕಪ್‌ ನಲ್ಲಿ ರನ್ನರ್- ಅಪ್‌ ಗೆ US$2 ಮಿಲಿಯನ್ ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 16 ಕೋಟಿ ನೀಡಲಾಗುವುದು.

World Cup 2023
Image Source: Star Sports

*ಸೆಮಿ ಫೈನಲ್‌ ನಲ್ಲಿ ನಿರ್ಗಮಿಸುವ ತಂಡಗಳು ತಲಾ US$800,000 ಹಣ ಪಡೆಯುತ್ತವೆ.

Join Nadunudi News WhatsApp Group

*ICC ಕ್ರಿಕೆಟ್ ODI ವರ್ಲ್ಡ್ ಕಪ್ 2023 ರ ಗುಂಪು ಹಂತದಲ್ಲಿ ಹೊರಹಾಕಲ್ಪಟ್ಟ ಆರು ತಂಡಗಳಿಗೆ ತಲಾ $100,000 ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 80 ಲಕ್ಷ ಮೊತ್ತವನ್ನು ನೀಡಲಾಗುತ್ತದೆ. ಹಾಗೆಯೆ ಗುಂಪು ಹಂತದಲ್ಲಿ ಪ್ರತಿ ಪಂದ್ಯದ ವಿಜೇತರಿಗೆ ಬೋನಸ್ ಆಗಿ ಹೆಚ್ಚುವರಿ $40,000 ಅಂದರೆ ಭಾರತೀಯ ರೂ. ಗಳಲ್ಲಿ ಸುಮಾರು 33 ಲಕ್ಷ ರೂಪಾಯಿ ಮೊತ್ತವನ್ನು ನೀಡಲಾಗುತ್ತದೆ.

Join Nadunudi News WhatsApp Group