World Cup Ticket: ಕ್ರಿಕೆಟ್ ಪ್ರಿಯರಿಗೆ ಇದೊಂದು ಭರ್ಜರಿ ಆಫರ್, ವರ್ಲ್ಡ್ ಕಪ್ ಟಿಕೆಟ್ ಅಗ್ಗದ ಬೆಲೆಗೆ ಖರೀದಿಸಿ.

ಈಗ ವರ್ಲ್ಡ್ ಕಪ್ ಟಿಕೆಟ್ ಅನ್ನು ಅತೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

World Cup Ticket Booking: ನಮ್ಮ ದೇಶದಲ್ಲಿ ಕ್ರಿಕೆಟ್(Cricket) ಆಟಕ್ಕೆ ವಿಶೇಷವಾದ ಅಭಿಮಾನಿ ಬಳಗವಿದೆ ಎಂದರೆ ತಪ್ಪಾಗಲಾರದು. ಯಾವುದೇ ಟೆಸ್ಟ್ ಪಂದ್ಯ, ಅಥವಾ ಏಕ ದಿನ ಪಂದ್ಯಗಳು ಅಥವಾ ಯಾವುದೇ ವಿಶ್ವಕಪ್(WorldCup) ಪಂದ್ಯಗಳದರೂ ಇಂತಹ ಪಂದ್ಯಗಳನ್ನು ನೋಡಲು ಜನರು ಕಾತುರದಿಂದ ಕಾದು ಕುಳಿತಿರುತ್ತಾರೆ.

ಇನ್ನು ಅನೇಕರು ತಮ್ಮ ಮನೆಯ ಟಿವಿಯಲ್ಲಿ ಅಥವಾ ಕೆಲವರು ತಮ್ಮ ಮೊಬೈಲ್ ನಲ್ಲಿ ಕೆಲವು ಆಪ್ ಗಳ ಸಬ್ಸ್ಕ್ರಿಪ್ಷನ್ ಪಡೆದು ಮ್ಯಾಚ್ ನೋಡುತ್ತಾರೆ. ಎಲ್ಲಾ ಕ್ರಿಕೆಟ್ ಪ್ರಿಯರಿಗೂ ಸಹ ಒಮ್ಮೆಯಾದರೂ ಸ್ಟೇಡಿಯಂ ಗೆ ಭೇಟಿ ನೀಡಿ ಮ್ಯಾಚ್ ವೀಕ್ಷಣೆ ಮಾಡಬೇಕು ಎನ್ನುವುದು ಅವರ ಕನಸು.

World Cup Ticket Booking
Image Credit: Thecricketlounge

ಸ್ಟೇಡಿಯಂ ಗೆ ಭೇಟಿ ನೀಡಿ ಮ್ಯಾಚ್ ನೋಡುವುದು ಅಷ್ಟು ಸುಲಭವಲ್ಲ. ಹೌದು, ಈ ಮ್ಯಾಚ್ ನೋಡಲು ಇವುಗಳ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಆದರೂ ಕೆಲವೊಮ್ಮೆ ಕೆಲವರು ಹಣ ಪಾವತಿ ಮಾಡಿ ಟಿಕೆಟ್ ಗಳನ್ನು ಪಡೆಯಲು ಹೋದರೆ ಆಗ ಟಿಕೆಟ್ ಖಾಲಿ ಆಗಿರುತ್ತದೆ. ಹೌದು, ಯಾವುದೇ ಮ್ಯಾಚ್ ನಡೆಯುತ್ತಿದೆ ಎನ್ನುವ ಸಂದರ್ಭದಲ್ಲಿ ಕೆಲವರು ಮುಂಚಿತವಾಗಿಯೇ ಆನ್ ಲೈನ್ ಮೂಲಕ ಆ ದಿನದ ಟಿಕೆಟ್ ಗಳನ್ನು ಖರೀದಿ ಮಾಡುತ್ತಾರೆ.

ಇನ್ನು ಇಂದಿನ ಈ ಪುಟದಲ್ಲಿ ಇದೀಗ ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ ಟಿಕೆಟ್ ಎಲ್ಲಿ ದೊರೆಯುತ್ತದೆ ಹಾಗೂ ಅದರ ಬೆಲೆ ಕುರಿತು ಸಂಪೂರ್ಣ ವಿವರಗಳನ್ನು ನೀಡುತ್ತೇವೆ, ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ. ಈ ಬಾರಿ ಐಸಿಸಿ ವಿಶ್ವಕಪ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲಾಗಿದೆ.

ಇನ್ನು ಅಕ್ಟೋಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮತ್ತು ಫೈನಲ್ಸ್ ಪಂದ್ಯಕ್ಕೆ ಸದ್ಯ ಎಲ್ಲರೂ ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಈ ಪಂದ್ಯವನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ಅನೇಕರು ಬಯಸುತ್ತಿದ್ದಾರೆ. ಇದೇ ಕಾರಣದಿಂದ ಈ ಪಂದ್ಯಗಳ ಟಿಕೆಟ್ ಗಳಿಗೆ ಬಾರಿ ಬೇಡಿಕೆ ಇದೆ.

Join Nadunudi News WhatsApp Group

World Cup Ticket Booking
Image Credit: Moneycontrol

ಸಾಮಾನ್ಯವಾಗಿ ಭಾರತದಲ್ಲಿನ ಪಂದ್ಯಗಳ ಟಿಕೆಟ್ ದರಗಳು ಹೆಚ್ಚಾಗಿ ಇರುತ್ತದೆ. ಇನ್ನು ಸದ್ಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ದರಗಳನ್ನು ಇನ್ನು ಬಿಡುಗಡೆ ಮಾಡಲಾಗಿಲ್ಲ. ಇನ್ನು ಇತರ ಟಿಕೆಟ್ ಗಳ ಬೆಲೆ ವೆಬ್ ಸೈಟ್ ನಲ್ಲಿ ಸುಮಾರು 29 ಸಾವಿರ ಇದೆ. ನೀವು ಅತ್ಯಂತ ಕಡಿಮೆ ದರದಲ್ಲಿ ಅಂದರೆ ಕೇವಲ 500 ರೂ ಗಳಿಗೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಗಳನ್ನು ಖರೀದಿ ಮಾಡಬಹುದು. ಹೌದು ನೀವು ಬುಕ್ ಮೈ ಶೋ ನಲ್ಲಿ ಕಡಿಮೆ ದರದಲ್ಲಿ ವಿಶ್ವ ಕಪ್ ಪಂದ್ಯಗಳ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Join Nadunudi News WhatsApp Group