Expensive Mango: ಇದು ವಿಶ್ವದ ಅಂತ್ಯಂತ ದುಬಾರಿ ಮಾವಿನ ಹಣ್ಣು, ಶ್ರೀಮಂತರಿಗಾಗಿ ಮಾತ್ರ.

ಇದು ವಿಶ್ವದ ಅತೀ ದುಬಾರಿ ಮಾವಿನ ಹಣ್ಣಾಗಿದ್ದು ಈ ಹಣ್ಣನ್ನ ಸಾಮಾನ್ಯ ಜನರು ತಿನ್ನಲು ಸಾಧ್ಯವಿಲ್ಲ.

Expensive Mango In The World: ಮಾವಿನ ಹಣ್ಣನ್ನು (Mango) ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಈಗಂತೂ ಮಾವಿನ ಹಣ್ಣಿನ ಸೀಸನ್ ಆಗಿದೆ. ಸಾಕಷ್ಟು ಮಾವಿನ ಹಣ್ಣುಗಳು ದೊರೆಯುತ್ತದೆ. ಮಾವಿನ ಹಣ್ಣುಗಳು ಬಹಳ ಸೊಗಸಾಗಿರುತ್ತದೆ. ಮಾವಿನ ಹಣ್ಣಿನಲ್ಲಿ ವಿವಿಧ ರೀತಿಯ ಮಾವಿನ ಹಣ್ಣುಗಳು ಸಿಗುತ್ತದೆ.

ಎಲ್ಲಾ ರೀತಿಯ ಮಾವಿನ ಹಣ್ಣುಗಳು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಇದೀಗ ವಿಶ್ವದಲ್ಲೇ ದುಬಾರಿ ಮಾವಿನ ಬಗ್ಗೆ ಮಾಹಿತಿ ಲಭಿಸಿದೆ. ಈ ಮಾವಿನ ಹಣ್ಣಿನ ಬೆಲೆಯ ಬಗ್ಗೆ ತಿಳಿದರೆ ಅಚ್ಚರಿ ಪಡುತ್ತೀರಿ. ಈ ದುಬಾರಿ ಮಾವಿನ ಹಣ್ಣಿನ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ತಿಳಿಯೋಣ.

Expensive Mango In The World
Image Source: Youtube

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು
ಇದೀಗ ಜಪಾನ್ ನಲ್ಲಿ ಅತ್ಯಂತ ದುಬಾರಿ ಮಾವಿನ ಹಣ್ಣು ಕಾಣಿಸಿಕೊಂಡಿದೆ. ಜಪಾನ್ ನ ಹೊಕ್ಕಿಯಾಡೋ ದ್ವಿಪದ ಒಟ್ಟಿಕೊದಲ್ಲಿ ಈ ದುಬಾರಿ ಮಾವಿನ ಹಣ್ಣು ಮಾರಾಟಗೊಂಡಿದೆ. ಹಿರೋಯಿಕಿ ನಕಗವ ಎನ್ನುವ ರೈತ ಈ ಮಾವಿನ ಹಣ್ಣನ್ನು ಮಾರಾಟ ಮಾಡಿದ್ದಾರೆ. ಮಾವಿನ ಹಣ್ಣುಗಳನ್ನು ಹಡಗಿನಲ್ಲಿ 8 ಡಿಗ್ರಿ ಸೆಲ್ಸಿಯಸ್ ಐಸ್ ನಲ್ಲಿ ಈ ಹಣ್ಣುಗಳನ್ನು ಸಾಗಿಸಲಾಗಿದೆ. ಇನ್ನು ವಿಶೇಷವೆಂದರೆ ಈ ಹಣ್ಣುಗಳನ್ನು 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಬೆಳೆಯಲಾಗಿದೆ.

ದುಬಾರಿ ಮಾವಿನ ಹಣ್ಣಿನ ಬೆಲೆ
ರೈತನೋರ್ವ ತನ್ನ ಫಾರ್ಮ್ ಹೌಸ್ ನಲ್ಲಿ ಈ ದುಬಾರಿ ಬೆಲೆಯ ಮಾವಿನ ಹಣ್ಣನ್ನು ಬೆಳೆದಿದ್ದಾನೆ. ಈ ಮಾವಿನ ಹಣ್ಣಿನ ಬೆಲೆ ಬರೋಬ್ಬರಿ 19 ಸಾವಿರ. ಡಾಲರ್ ನಲ್ಲಿ 234 ಡಾಲರ್ ಗೆ ಮಾರಾಟವಾಗಿದೆ. ಈ ಮಾವಿನ ಹಣ್ಣು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮಾವಿನ ಹಣ್ಣು ಎನ್ನುವ ಖ್ಯಾತಿ ಪಡೆದಿದೆ.

Expensive Mango In The World
Image Source: Vijaykarnataka

Join Nadunudi News WhatsApp Group

Join Nadunudi News WhatsApp Group