Fortuner: ಪೆಟ್ರೋಲ್ ಮತ್ತು ಡೀಸೆಲ್ ಬೇಕಾಗಿಲ್ಲ, ವಿಶೇಷ ಇಂಧನದಿಂದ ಚಲಿಸುವ ಫಾರ್ಚುನರ್ ಕಾರ್ ಲಾಂಚ್.

ವಿಶ್ವದ ಮೊದಲ ಎಥನಾಲ್ ಚಾಲಿತ ವಾಹನ ಅನಾವರಣ.

Toyota Innova: ಕೇಂದ್ರ ಸರ್ಕಾರ ಟ್ರಾಫಿಕ್ ಜಾಮ್ ಸಮಸ್ಯೆಯ ಜೊತೆಗೆ ವಾಯುಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಕೂಡ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಹೆಚ್ಚುತ್ತಿರುವ ವಾಯು ಮಾಲಿನ್ಯ ಸಮಸ್ಯೆಯ ನಿಯಂತ್ರಣಕ್ಕಾಗಿ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೆ ತರುವುದಾಗಿ ಘೋಷಣೆ ಹೊರಡಿಸಿದ್ದರು. ಎಥನಾಲ್ ಚಾಲಿತ ವಾಹನಗಳು ವಾಯುಮಾಲಿನ್ಯ ನಿಯಂತ್ರದ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆಗೆ ಕಾರಣವಾಗುತ್ತದೆ.

ದೇಶದಲ್ಲಿ ಎಥನಾಲ್ ಚಾಲಿತ (Ethanol Vehicle) ವಾಹನಗಳು ಚಲಾವಣೆಗೆ ಬಂದರೆ ಹೆಚ್ಚಿನ ಅನುಕೂಲವಾಗಲಿದೆ. ದೇಶದಲ್ಲಿನ ಮಾಲಿನ್ಯವನ್ನು ತಡೆಗಟ್ಟಿ ಶುದ್ಧ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿ, ಸೋಲಾರ್, ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಇದೀಗ ವಿಶ್ವದಲ್ಲೇ ಮೊದಲ ಎಥನಾಲ್ ಚಾಲಿತ ಇಂಧನ ಅನಾವರಣಗೊಳ್ಳಲಿದೆ.

Toyota has introduced a rebrand of an ethanol fueled car
Image Credit: Cartoq

ವಿಶ್ವದ ಮೊದಲ ಎಥನಾಲ್ ಚಾಲಿತ ವಾಹನ ಅನಾವರಣ
ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಈ ಹಿಂದೆ ಹೇಳಿರುವಂತೆ 100 % ಎಥನಾಲ್ ಚಾಲಿತ ವಾಹನವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪರ್ಯಾಯ ಇಂಧನವಾದ ಎಥನಾಲ್ ಮೂಲಕ ಚಲಿಸುವ ‘ಟೊಯೋಟಾ ಇನ್ನೋವಾ’ (Toyota Innova) ಎಂಜಿನ್ ಅನ್ನು ಪರಿಚಯಿಸಲಾಗುತ್ತಿದೆ. ಸದ್ಯದ ಎಥನಾಲ್ ಚಾಲಿತ ಟೊಯೋಟಾ ಇನ್ನೋವಾ ವಾಹನದ ಬೆಲೆ, ಫೀಚರ್ ಸೇರಿದಂತೆ ಇನ್ನಿತರ ಯಾವುದೇ ಮಾಹಿತಿ ಲಭ್ಯವಿಲ್ಲ.

ಟೊಯಾಟಾ ಕಂಪನಿಯು ಎಥೆನಾಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಎಥೆನಾಲ್ ಚಾಲಿತ ವಾಹನಗಳು 100 ಪ್ರತಿಶತ ಜೈವಿಕ ಎಥೆನಾಲ್ ನಲ್ಲಿ ಚಲಿಸುತ್ತದೆ ಮತ್ತು ಎಥೆನಾಲ್ ಇಂಧನವು ಪೆಟ್ರೋಲ್ ಗಿಂತ ಅಗ್ಗವಾಗಿದೆ.

World's first ethanol powered vehicle
Image Credit: Bollywoodwallah

ಇನ್ನು ಎಲ್ಲ ವಾಹನಗಳು ರೈತರು ತಯಾರಿಸಿದ ಎಥೆನಾಲ್ ನಿಂದ ಚಲಿಸಲು ಪ್ರಾರಂಭಿಸಿದಾಗ 60% ಎಥೆನಾಲ್, 40 % ವಿದ್ಯುತ್ ಬಳಕೆಯಾಗಲಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ 15 ರೂ. ಆಗುತ್ತದೆ ಎಂದು ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಕೃಷಿಯ ತ್ಯಾಜ್ಯದಿಂದ ತಯಾರಾಗಿರುವ ಎಥನಾಲ್ ಗ್ರಾಹಕರಿಗೆ ಬಹಳ ಅಗ್ಗವಾಗಿ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group