Wroley Posh EV: ಆಕರ್ಷಕ ಲುಕ್ ಮತ್ತು 90 Km ಮೈಲೇಜ್, ಅಗ್ಗದ ಬೆಲೆಗೆ ಬಿಡುಗಡೆ ಆಯಿತು ಇನ್ನೊಂದು EV ಸ್ಕೂಟರ್.
90 Km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗದ ಬೆಲೆಗೆ ಬಿಡುಗಡೆ.
Wroley Posh Electric Scooter Price and Mileage: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಬಹುದು. ಜನರು ಹೆಚ್ಚಾಗಿ ಬಜೆಟ್ ಬೆಲೆಯ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಇಷ್ಟಪಡುತ್ತಾರೆ.
ಮಾರುಕಟ್ಟೆಯಲ್ಲಿ ಈಗಾಗಲೇ ವಿವಿದ ಕಂಪನಿಗಳು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ವಾಹಗಳನ್ನು ಪರಿಚಯಿಸುತ್ತಿದೆ. ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯಲ್ಲಿ ಮೊದಲು ಮೈಲೇಜ್ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಇದೀಗ ಗ್ರಾಹಕರಿಗಾಗಿ ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಒಂದು ಪರಿಚಯವಾಗಿದೆ.
Wroley Posh Electric Scooter
ಸದ್ಯ ಮಾರುಕಟ್ಟೆಯಲ್ಲಿ ನೂತನ Wroley Posh Electric Scooter ಪರಿಚಯವಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು. ಆಕರ್ಷಕ ವಿನ್ಯಾಸ ಮತ್ತು ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಕಂಪನಿಯು ಲಾಂಗ್ ಡ್ರೈವ್ ಶ್ರೇಣಿಯ ಜೊತೆಗೆ ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ನೀಡಿದೆ.
ಅಗ್ಗದ ಬೆಲೆಗೆ ಬಿಡುಗಡೆ ಆಯಿತು ಇನ್ನೊಂದು EV ಸ್ಕೂಟರ್
ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ 78,100 ಎಕ್ಸ್ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿದೆ. ಈ ಹಬ್ಬದ ಋತುವಿನಲ್ಲಿ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜನೆ ಹೂಡಿದ್ದರೆ ಈ ಸ್ಕೂಟರ್ ನಿಮಗೆ ಉತ್ತಮ ಆಯ್ಕೆ ಎನ್ನಬಹುದು. 80 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ನೀವು ಸುಧಾರಿತ ವೈಶಿಷ್ಟ್ಯಗಳಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ಆಕರ್ಷಕ ಲುಕ್ ಮತ್ತು 90 Km ಮೈಲೇಜ್
Wroley Posh Electric Scooter 1.8 kW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ಬ್ಯಾಟರಿ ಪ್ಯಾಕ್ ನೊಂದಿಗೆ ನೀವು BLDC ತಂತ್ರಜ್ಞಾನದ ಆಧಾರದ ಮೇಲೆ 250 ವ್ಯಾಟ್ ವಿದ್ಯುತ್ ಮೋಟರ್ ಅನ್ನು ಪಡೆಯುತ್ತೀರಿ. ಇನ್ನು ಬ್ಯಾಟರಿ ಪ್ಯಾಕ್ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸರಿಸುಮಾರು 90 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಈ ಸ್ಕೂಟರ್ ನಲ್ಲಿದೆ. ಇನ್ನು ಈ ಸ್ಕೂಟರ್ ನಲ್ಲಿ ನೀವು ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.
Wroley Posh Electric Scooter Feature
*Digital Instrument Console
*Anti Theft Alarm
*Cruise Control
*Digital Speedometer
*Digital Trip Meter
*LED Headlight
*LED Tail Light
*LED Turn Signal Lamp
*Reverse Assist