Wrong UPI Pin: ಇನ್ಮುಂದೆ ಇದಕ್ಕಿಂತ ಹೆಚ್ಚು ಬಾರಿ ತಪ್ಪಾದ ಪಿನ್ ಹಾಕಿದರೆ ಖಾತೆ ಬ್ಲಾಕ್, UPI ಹೊಸ ನಿಯಮ.
ಎಷ್ಟು ಬಾರಿ ತಪ್ಪಾದ UPI ಪಿನ್ ಅನ್ನು ನಮೂದಿಸಬಹುದು?
Wrong UPI Pin Limit: ಸದ್ಯದ ಡಿಜಿಟಲ್ ದುನಿಯಾದಲ್ಲಿ Digital ಪಾವತಿ ಹೆಚ್ಚಾಗಿದೆ. ಎಲ್ಲರು ಕೂಡ ಆನ್ಲೈನ್ ಪೇಮೆಂಟ್ ಅನ್ನು ಬಳಸುತ್ತಿದ್ದಾರೆ. ದೇಶದಲ್ಲಿ ವಿವಿಧ UPI ಅಪ್ಲಿಕೇಶನ್ ಗಳು ಗ್ರಾಹಕರಿಗೆ ಆನ್ಲೈನ್ ಪಾವತಿಯ ಸೇವೆಯನ್ನು ನೀಡುತ್ತದೆ. ಇದರಿಂದ ಗ್ರಾಹಕರ ಹಣಕಾಸಿನ ವಹಿವಾಟು ಬಾರಿ ಸರಳವಾಗಿದೆ. ಇನ್ನು UPI Application ಗಳು ಬಳಕೆದಾರರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಾ ಹೆಚ್ಚಿನ ಅನುಭವನ್ನು ನೀಡುತ್ತಿದೆ.
ಇನ್ನು UPI ಅಪ್ಲಿಕೇಶನ್ ಗಳ ಮೂಲಕ ಪಾವತಿ ಮಾಡುವುದು ತುಂಬಾ ಸುಲಭ. ನೀವು ಫೋನ್ ನಲ್ಲಿ ಅಪ್ಲಿಕೇಶನ್ ಅನ್ನು ತೆರೆದ ತಕ್ಷಣ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ ಪಾವತಿ ಮಾಡಲಾಗುತ್ತದೆ. ನೀವು ಪಾವತಿ ಮಾಡಿದರೆ, ಇದಕ್ಕಾಗಿ ನಿಮಗೆ UPI ಪಿನ್ ಅಗತ್ಯವಿದೆ. ನಾವೀಗ ಈ ಲೇಖನದಲ್ಲಿ UPI Pin ಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
UPI ಹೊಸ ನಿಯಮ ತಿಳಿದುಕೊಳ್ಳಿ
ಆನ್ ಲೈನ್ ಪಾವತಿ ಮಾಡಲು ಬಳಕೆದಾರರು ತಮ್ಮ UPI ಪಿನ್ ಅನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಇದು ಸಂಭವಿಸದಿದ್ದರೆ ಪಾವತಿಯನ್ನು ಮತ್ತಷ್ಟು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ತಪ್ಪಾದ UPI ಪಿನ್ ಅನ್ನು ಮತ್ತೆ ಮತ್ತೆ ನಮೂದಿಸಬಾರದು ಎಂದು ನಿಮಗೆ ತಿಳಿದಿದೆಯೇ. ಹೌದು, ನೀವು ತಪ್ಪಾದ UPI ಪಿನ್ ಅನ್ನು ಹೆಚ್ಚು ಬಾರಿ ನಮೂದಿಸಿದರೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ.
ಇನ್ನು UPI ವಹಿವಾಟಿನಲ್ಲಿ ತಪ್ಪಾದ UPI ಪಿನ್ ಸಂಖ್ಯೆಯನ್ನು ನಮೂದಿಸಲು ಮಿತಿಯನ್ನು ಹೊಂದಿಸಲಾಗಿದೆ. ಈ ಮಿತಿಯನ್ನು ತಲುಪಿದ ನಂತರ, ನಿಮ್ಮ ಬ್ಯಾಂಕ್ UPI ಪಾವತಿಯನ್ನು ನಿರ್ಬಂಧಿಸುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. UPI ಪಾವತಿಗಳನ್ನು ನಿರ್ಬಂಧಿಸುವುದು ಎಂದರೆ ನೀವು ಯಾವುದೇ ಅಪ್ಲಿಕೇಶನ್ ಮೂಲಕ UPI ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದರ್ಥ. ಅದಾಗ್ಯೂ, ಬ್ಯಾಂಕ್ ನಿಂದ ತಪ್ಪಾದ ಪಿನ್ ನ ಪುನರಾವರ್ತಿತ ನಮೂದಿನಿಂದಾಗಿ ಇದು ತಾತ್ಕಾಲಿಕವಾಗಿ ನಿರ್ಬಂಧಿಸಲ್ಪಡುತ್ತದೆ.
ಎಷ್ಟು ಬಾರಿ ತಪ್ಪಾದ UPI ಪಿನ್ ಅನ್ನು ನಮೂದಿಸಬಹುದು?
ಬಳಕೆದಾರರು ತಪ್ಪು UPI ಪಿನ್ ಅನ್ನು 3 ಬಾರಿ ಮಾತ್ರ ನಮೂದಿಸಬಹುದು ಎಂದು Google Pay ಅಪ್ಲಿಕೇಶನ್ ಹೇಳುತ್ತದೆ. ತಪ್ಪಾದ UPI ಪಿನ್ ಅನ್ನು ಮೂರಕ್ಕಿಂತ ಹೆಚ್ಚು ಬಾರಿ ನಮೂದಿಸಲು ಅವಕಾಶವಿಲ್ಲ. ಹೀಗಾದರೆ 24 ಗಂಟೆಗಳ ಕಾಲ UPI ಪಾವತಿಯನ್ನು ನಿರ್ಬಂಧಿಸಲಾಗುತ್ತದೆ. ಫೋನ್ ಬಳಕೆದಾರರು ತಮ್ಮ UPI ಪಿನ್ ಅನ್ನು ಮರೆತಿದ್ದರೆ ಮತ್ತೆ ಮತ್ತೆ ಪಿನ್ ನಮೂದಿಸದಂತೆ ಸಲಹೆ ನೀಡಲಾಗುತ್ತದೆ.
ತಪ್ಪಾದ ಪಿನ್ ನಮೂದಿಸುವುದಕ್ಕಿಂತ ಅದನ್ನು ಮರುಹೊಂದಿಸುವುದು ಉತ್ತಮ. ಪಿನ್ ಅನ್ನು ಮರುಹೊಂದಿಸಿ ಎಂದರೆ ನಿಮ್ಮ ಡೆಬಿಟ್ ಕಾರ್ಡ್ನ ಎಲ್ಲಾ ವಿವರಗಳನ್ನು ನೀವು ಮತ್ತೆ ಹಂಚಿಕೊಳ್ಳಬೇಕಾಗುತ್ತದೆ. ಇದರ ನಂತರ ನಿಮ್ಮ ಹೊಸ ಪಿನ್ ಅನ್ನು ಹೊಂದಿಸಲಾಗುತ್ತದೆ.