Xiaoma EV: ಒಮ್ಮೆ ಚಾರ್ಜ್ ಮಾಡಿದರೆ 750 Km ರೇಂಜ್, ಬೈಕಿಗಿಂತ ಕಡಿಮೆ ಬೆಲೆಗೆ ಇನ್ನೊಂದು ಚಿಕ್ಕ ಕಾರ್ ಲಾಂಚ್.
ಕಡಿಮೆ ಬೆಲೆಗೆ ಇನ್ನೊಂದು ಸಣ್ಣ ಕಾರ್ ಲಾಂಚ್.
Xiaoma EV Review: ಸಾಮಾನ್ಯವಾಗಿ ಕಾರ್ ಖರೀದಿ ಮಾಡುವ ಬಯಕೆ ಏಲ್ಲರಿಗೂ ಇದ್ದೆ ಇರುತ್ತದೆ. ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ಕಾರುಗಳಿಗೆ (Electric Cars) ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು.
ಹಲವು ಕಾರು ತಯಾರಕ ಕಂಪನಿಗಳು ಹಲವು ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುತ್ತಿದ್ದು ಸದ್ಯ ಜನರು ಹಚ್ಚು ಮೈಲೇಜ್ ಕೊಡುವ ಅಗ್ಗದ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ಅದೇ ರೀತಿಯಲ್ಲಿ ಈಗ ಜನರು ಬೈಕ್ ಖರೀದಿ ಮಾಡುವ ಬೆಲೆಯಲ್ಲಿ ಹೊಸ ಕಾರ್ ಖರಿದಿ ಮಾಡಬಹುದಾಗಿದ್ದು ಕಾರಿನ ಬೆಲೆ ಭರ್ಜರಿ ಆಫರ್ ಘೋಷಣೆ ಆಗಿದೆ.
ಬಿಡುಗಡೆ ಆಯಿತು ಇನ್ನೊಂದು ಸಣ್ಣ ಕಾರ್
ಹೌದು ಸದ್ಯ ಮರುಕಟ್ಟೆಯಲ್ಲಿ MG ಕಾಮೆಟ್ (MG Comet), ಟಾಟಾ ನ್ಯಾನೋ (Tata Nano) ಸಾಕಷ್ಟು ಮಾರಾಟ ಆಗುತ್ತಿದೆ. ಹೌದು MG ಕಾಮೆಟ್ ಎಲೆಕ್ಟ್ರಿಕ್ ಕಾರ್ ಸದ್ಯ ದೇಶದಲ್ಲಿ ಸಾಕಷ್ಟು ಮಾರಾಟ ಆಗುತ್ತಿದ್ದು ಈ ಕಾರ್ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಕಾರ್ ಅನಿಸಿಕೊಂಡಿದೆ. ಇದರ ನಡುವೆ ಟಾಟಾ ಕಂಪನಿ ಕೂಡ ತನ್ನ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಈ ಕಾರ್ ಕೂಡ ದೇಶದಲ್ಲಿ ಹೊಸ ಇತಿಹಾಸವನ್ನ ಸೃಷ್ಟಿ ಮಾಡಲು ತಯಾರಿಯನ್ನ ಮಾಡಿಕೊಂಡಿದೆ ಎಂದು ಹೇಳಬಹುದು.
ಬೈಕ್ ಖರೀದಿಸುವ ಬೆಲೆಗೆ ಕಾರ್
ಹೌದು ಕಾರು ತಯಾರಕ ಕಂಪನಿ ಈಗ ವಿಶ್ವದ ಇನ್ನೊಂದು ಚಿಕ್ಕ ಎಲೆಕ್ಟ್ರಿಕ್ ಕಾರನ್ನ ಕಡಿಮೆ ಬೆಲೆಗೆ ಲಾಂಚ್ ಮಾಡಿದ್ದು ಜನರು ಬೈಕ್ ಖರೀದಿ ಮಾಡುವ ಬೆಲೆಗೆ ಕಾರ್ ಖರೀದಿ ಮಾಡಬಹುದು. ಬೆಸ್ಟ್ಯೂನ್ ಬ್ರಾಂಡ್ ಅಡಿಯಲ್ಲಿ Xiaoma ಅನ್ನು ಸಣ್ಣ ಕಾರು ಎಲೆಕ್ಟ್ರಿಕ್ ಮಾರುಕಟ್ಟೆಗೆ ಲಾಂಚ್ ಆಗಿದ್ದು ಈ ಕಾರಿಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು. ಪ್ರಸ್ತುತ ಚೀನಾ ದೇಶದಲ್ಲಿ ಈ ಕಾರ್ ಲಾಂಚ್ ಆಗಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಬೇರೆಬೇರೆ ದೇಶದಲ್ಲಿ ಈ ಕಾರ್ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ.
Xiaoma ಕಾರಿನ ಬೆಲೆ ಮತ್ತು ಮೈಲೇಜ್
ಪ್ರಸ್ತಿತ ಚೀನಾ ದೇಶದಲ್ಲಿ ಲಾಂಚ್ ಆಗಿರುವ ಈ ಕಾರಿನ ಆರಂಭಿಕ ಬಲೆ ಸುಮಾರು 3 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಹೆಡ್ ಲೈಟ್, ಉತ್ತಮ ಡ್ಯಾಶ್ಬೋರ್ಡ್ ಮತ್ತು ಸಾಕಷ್ಟು ವಿಶೇಷತೆಯನ್ನ ನಾವು ನೋಡಬಹುದು. ಇನ್ನು ಈ ಕಾರ್ ಭಾರತಕ್ಕೆ ಬಂದರೆ ಟಾಟಾ ಮತ್ತು MG ಕಾರುಗಳಿಗೆ ಪ್ರತಿಸ್ಪರ್ಧಿ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಈ ಕಾರ್ ಗಾತ್ರದಲ್ಲಿ ಬಹಳ ಚಿಕ್ಕದಾದ ಕಾರ್ ಆಗಿದ್ದು ಸಣ್ಣ ಜಾಗದಲ್ಲಿ ಪಾರ್ಕಿಂಗ್ ಕೂಡ ಮಾಡಬಹುದಾಗಿದೆ. ಸದ್ಯ ಈ ಕಾರ್ ಚಿಕ ದೇಶದಲ್ಲಿ ಸಾಕಷ್ಟು ಸೇಲ್ ಆಗಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೂಡ ಖರೀದಿಗೆ ಲಭ್ಯ ಇರಲಿದೆ. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಈ Xiaoma ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 750 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.