Yalu Vine: 55 ಸಾವಿರ ಕೊಟ್ಟು ಮನೆಗೆ ತನ್ನಿ 68 Km ಮೈಲೇಜ್ ಕೊಡುವ ಈ ಸ್ಕೂಟರ್, ಕೀ ಮತ್ತು ಲೈಸೆನ್ಸ್ ಬೇಕಾಗಿಲ್ಲ.
ಅಗ್ಗದ ಬೆಲೆಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್.
Yalu Vine Electric Scooter: ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಗಳ ಬೆಲೆ ಹೆಚ್ಚಿಸಿರುವುದರಿಂದ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ಯಲು ವೈನ್ ಎಲೆಕ್ಟ್ರಿಕ್ ಸ್ಕೂಟರ್
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ 1 ರಿಂದ 1 .5 ಲಕ್ಷ ರೂಪಾಯಿಗಳಾಗಿವೆ. ಇದೀಗ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನ ಹೆಸರು ಯಲು ವೈನ್. ಇದರ ಬೆಲೆ 55,555 ರೂಪಾಯಿ ಆಗಿದೆ.
ಕಂಪನಿಯು ಇದರ ಮೇಲೆ 1 ವರ್ಷದ ವಾರಂಟಿಯನ್ನು ಕೂಡ ನೀಡಲಾಗಿದೆ. ಇದು ಒನ್ ಶೀಟರ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಇದನ್ನು ಓಡಿಸಲು ಲೈಸೆನ್ಸ್ ಅಗತ್ಯವಿಲ್ಲ. ಈ ಸ್ಕೂಟರ್ ಅನ್ನು ಬಳಸಲು ನಿಮಗೆ ಕೀ ಅಗತ್ಯವಿಲ್ಲ. ಯುಲು ಅಪ್ ಮೂಲಕ ನೀವು ನಿಮ್ಮ ಫೋನಿನ ಮೂಲಕವೇ ಇದರ ಕೀ ಸಿದ್ಧಪಡಿಸಬಹುದು. ಇದು ಲೊಕೇಶನ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಹೊಂದಿದೆ.
ಯಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಈ ಯಲು ವೈನ್ ಸ್ಕೂಟರ್ ನ ಎತ್ತರವು 740 ಎಂ ಎಂ ಮತ್ತು ವೀಲ್ ಬೇಸ್ ಕೇವಲ 1200 ಏ ಎಂ ಹಾಗು ಲೋಡ್ ಸಾಮರ್ಥ್ಯವು 100 ಕೆಜಿ ಗಳಷ್ಟಿದೆ. ವೈನ್ ಪೂರ್ಣ ಚಾರ್ಜ್ ನಲ್ಲಿ 68 ಕಿಮೀ ಡ್ರೈವಿಂಗ್ ರೇಂಜ್ ಹೊಂದಿದೆ .
ಈ ಸ್ಕೂಟರ್ ನ ಗರಿಷ್ಠ ವೇಗವು 25 ಕಿಮೀ ವರೆಗೆ ಇರುತ್ತದೆ. ವೈನ್ ಅನ್ನು ರಿಯರ್ ವ್ಯೂ ಮಿರರ್ ಗಳ ಸೆಟ್, ಸೆಂಟರ್ ಸ್ಟ್ಯಾಂಡ್, ರಿಯರ್ ಕ್ಯಾರಿಯರ್ ಮೊಬೈಲ್ ಹೋಲ್ಡರ್ ಮತ್ತು ಹೆಲ್ಮೆಟ್ ನಂತಹ ಹಲವಾರು ಬಿಡಿಭಾಗಗಳೊಂದಿದೆ ಖರೀದಿಸಬಹುದು. ಈ ಸ್ಕೂಟರ್ ಕೆಂಪು ಮತ್ತು ಬಿಳಿ ಎರಡು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.