Yamaha Bike: ಯುವಕರಿಗಾಗಿ ಹೊಸ ಅವತಾರದಲ್ಲಿ ಬಂತು ಯಮಹಾ FZ, ಕಡಿಮೆ ಬೆಲೆ 50 ಕೀ ಮೀ ಮೈಲೇಜ್.
ಯಮಹಾ FZ ನ ಇನ್ನೊಂದು ಮಾದರಿಯ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲಿರುವ ಯಮಹಾ ಕಂಪನಿ.
Yamaha FZ 25: ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ (Yamaha) ತನ್ನ ಕಂಪನಿಯ ಹೊಸ ಮಾದರಿಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕಂಪನಿಯು ತನ್ನ ಯಮಹಾ FZ ಮಾದರಿಯ ಒಂದು ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಕಂಪನಿಯು ಯಮಹಾ FZ 25 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಯಮಹಾ FZ 25 ಬೈಕ್
ಯಮಹಾ ಕಂಪನಿಯ ಹಿಂದಿನ ಮಾದರಿಯ ಬೈಕ್ ಗಳಿಗೆ ಹೋಲಿಸಿದರೆ ಈ ಯಮಹಾ FZ 25 ಬೈಕ್ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಯಮಹಾ FZ 25 ಬೈಕ್ 249 ಸಿಸಿ ಏರ್ ಕೂಲ್ಡ್ ಎಂಜಿನ್ ನಿಂದ ಚಾಲಿತವಾಗಿದೆ. ಈ ಬೈಕ್ 20 .8 ಪಿಎಸ್ ಹಾಗೂ 8000 ಆರ್ ಪಿಎಂ ಶಕ್ತಿಯನ್ನು ಉತ್ಪಾದಿಸಲಿದೆ. ಈ ಬೈಕ್ 14 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕರ್ ಅನ್ನು ಹೊಂದಿದ್ದು, 50.33 kmpl ಮೈಲೇಜ್ ನೀಡಲಿದೆ. ಯಮಹಾ FZ 25 ಬೈಕ್ ಗ್ರಾಹಕರಿಗೆ ಒಂದು ರೂಪಾಂತದಲ್ಲಿ ಲಭ್ಯವಾಗಲಿದೆ.
ಯಮಹಾ FZ 25 ಬೈಕ್ ನ ಬೆಲೆ
ಈ ಬೈಕ್ ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಕೂಡ ಡಿಸ್ಕ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ. ಯಮಹಾ FZ 25 ಬೈಕ್ 20.1 Nm @ 6000 ಆರ್ ಪಿಎಂ ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1 .50 ಲಕ್ಷ ಆಗಿರುತ್ತದೆ. ಇನ್ನು ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಟೆಕೋಮೀಟರ್, ಡಿಜಿಟಲ್ ಟ್ರಿಪ್ಮೀಟರ್, LED ಹೆಡ್ ಲೈಟ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.