Yamaha FZ: ಕೇವಲ 25 ಸಾವಿರಕ್ಕೆ ಖರೀದಿಸಿ ಯಮಹಾ FZ, ವರಮಹಾಲಕ್ಷ್ಮಿ ಹಬ್ಬದ ಆಫರ್.
ಈಗ ಕೇವಲ 25 ಸಾವಿರ ರೂ ಪಾವತಿ ಮಾಡುವುದರ ಮೂಲಕ FZ ಬೈಕ್ ಖರೀದಿ ಮಾಡಬಹುದು.
Yamaha FZS 25 Bike: ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಬೈಕ್ ಗಳು ಖರೀದಿಗೆ ಲಭ್ಯವಿದೆ. ದೇಶದ ವಿವಿಧ ಬೈಕ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಾ ಇರುತ್ತವೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ರೂಪಾಂತರದ ಬೈಕ್ ಗಳು ಸಾಕಷ್ಟು ಬಿಡುಗಡೆಗೊಂಡಿದೆ. ಇನ್ನು ಮಾರುಕಟ್ಟೆಯಲ್ಲಿ ಸ್ಟ್ರೀಟ್ ಫೈಟರ್ ವಿಭಾಗದಲ್ಲಿ ಬೈಕ್ ಗಳು ಕಡಿಮೆ ಆಯ್ಕೆಗೆ ಲಭ್ಯವಿದೆ.
ಈ ವಿಭಾಗದಲ್ಲಿ ಬೈಕ್ ಹೆಚ್ಚಾಗಿ ಪರಿಚಯವಾಗುವುದಿಲ್ಲ. ಆದರೂ ಬಜಾಜ್ ಕಂಪನಿಯು ಸ್ಟ್ರೀಟ್ ಫೈಟರ್ ವಿಭಾಗದಲ್ಲಿ ಕೆಲ ಮಾದರಿಯ ಬೈಕ್ ಅನ್ನು ಪರಿಚಯಿಸಿದೆ. ಯಮಹಾ (Yamaha) ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯನ್ನು ಈ ವಿಭಾಗದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಬೈಕ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ನೀಡಿದ್ದು ಇದರ ಲುಕ್ ಗ್ರಾಹಕರನ್ನು ಸೆಳೆಯಲಿದೆ.
ಯಮಹಾ FZS 25
ಯಮಹಾ ಕಂಪನಿಯು ಸ್ಟ್ರೀಟ್‌ಫೈಟರ್ ಬೈಕ್ ಅನ್ನು ಕೇವಲ ಒಂದು ರೂಪಾಂತರದೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇನ್ನು ಈ ನೂತನದ ಮಾದರಿಯ ಯಮಹಾ FZS 25 ಮಾರುಕಟ್ಟೆಯಲ್ಲಿ 1,83,614 ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಬೈಕ್ ಖರೀದಿ ಕೆಲ ವರ್ಗದ ಜನರಿಗೆ ಕಷ್ಟವಾಗುತ್ತದೆ. ಈ ಬೈಕ್ ಖರೀದಿಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಕಂಪನಿಯು ಇದರ ಖರೀದಿಗಾಗಿ ಹಣಕಾಸು ಯೋಜನೆಯನ್ನು ಬಿಡುಗಡೆ ಮಾಡಿದೆ.
ಕೇವಲ 25 ಸಾವಿರಕ್ಕೆ ಖರೀದಿಸಿ ಯಮಹಾ FZS 25
ಈ ಬೈಕ್ ಖರೀದಿ ಗ್ರಾಹಕರಿಗೆ ಸುಲಭವಾಗಲು ಕಂಪನಿಯು ಹಣಕಾಸು ಯೋಜನೆಯುನ್ನು ಪರಿಚಯಿಸಿದೆ. ಕೇವಲ 25 ಸಾವಿರ ರೂ. ಡೌನ್ ಪೇಮೆಂಟ್ ನಮೂಲಕ ನೀವು ಬೈಕ್ ಅನ್ನು ಖರೀದಿಸಬಹುದಾಗಿದೆ. ಈ ಯಮಹಾ FZS 25 ಬೈಕ್ ಖರೀದಿಗೆ ಬ್ಯಾಂಕ್ 1,58,614 ರೂ. ಸಾಲವನ್ನು ನೀಡುತ್ತದೆ. ಶೇ. 9.7 ರ ವಾರ್ಷಿಕ ಬಡ್ಡಿದರದಲ್ಲಿ 3 ವರ್ಷಗಳ ಅವಧಿಯ ಸಾಲವನ್ನು ಪಡೆಯಬಹುದು. ಇನ್ನು ಮಾಸಿಕವಾಗಿ 5,096 ರೂ. EMI ಪಾವತಿಸುವ ಮೂಲಕ ಸಾಲದ ಮರುಪಾವತಿ ಮಾಡಬಹುದು.
ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್
ಇನ್ನು ಕಂಪನಿಯು ಯಮಹಾ FZS 25 ನಲ್ಲಿ ಬಲಿಷ್ಠ ಎಂಜಿನ್ ಅನ್ನು ಅಳವಡಿಸಿದೆ. ಈ ಬೈಕ್ ಸಿಂಗಲ್ ಸಿಲಿಂಡರ್ 249 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. 20.8 bhp ಗರಿಷ್ಠ ಶಕ್ತಿಯನ್ನು ಮತ್ತು 20.1 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಂಪನಿಯು 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಿದ್ದು, ಪ್ರತಿ ಲೀಟರ್ ಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಕಂಪನಿ ನೀಡಿರುವ ಹಣಕಾಸು ಯೋಜನೆಯನ್ನು ಬಳಸಿಕೊಂಡು ಈ ನೂತನ ಬೈಕ್ ಅನ್ನು ಖರೀದಿಸಬಹುದಾಗಿದೆ.