Yamaha NMax 155: ಆಕ್ಟಿವಾಗೆ ಪೈಪೋಟಿ ಕೊಡಲು ಬಂತು ಆಕರ್ಷಕ ಯಮಹಾ ಸ್ಕೂಟರ್, ಕಡಿಮೆ ಬೆಲೆ ಮತ್ತು ಬೆಸ್ಟ್ ಫೀಚರ್

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ರೆಡಿಯಾಗುತ್ತಿದೆ Yamaha NMax 155

Yamaha NMax 155 Scooter Price And Mileage: ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ವಿವಿಧ ವಾಹನ ತಯಾಕರ ಕಂಪನಿಗಳು ತಮ್ಮ ಹೊಸ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುತ್ತ ಇರುತ್ತದೆ. ಸದ್ಯ ಈ ಬಾರು ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ YAMAHA ತನ್ನ ಹೊಚ್ಚ ಹೊಸ ಮಾದರಿಯ ಬೈಕ್ ಅನ್ನು ಅನಾವರಣಗೊಳಿಸಿದೆ. Yamaha NMax 155 ಹೆಸರಿನ ಸ್ಕೂಟರ್ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಅನಾವರಣಗೊಂಡಿದೆ.

ಸದ್ಯದಲ್ಲೇ ಯಮಹ ಕಂಪನಿಯು ತನ್ನ ನೂತನ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಇದೀಗ ನಾವು ಮಾರುಕಟ್ಟೆಯಲ್ಲಿ ಹೆಚ್ಚಿನ ಕ್ರೇಜ್ ಹುಟ್ಟಿಸಲಿರುವ Yamaha NMax 155 ಬೈಕ್ ನ ಎಂಜಿನ್ ಕೆಪ್ಯಾಸಿಟಿ, ಮೈಲೇಜ್, ಫೀಚರ್ ಬಗ್ಗೆ ಮಾಹಿತಿ ನೀಡಲಿದ್ದೇವೆ. Yamaha NMax 155 ಸ್ಕೂಟರ್ ನ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Yamaha NMax 155 Scooter Price
Image Credit: Carousell

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ರೆಡಿಯಾಗುತ್ತಿದೆ Yamaha NMax 155
YAMAHA NMax 155 ಸ್ಕೂಟರ್ 155 cc ಸಿಂಗಲ್ ಸಿಲಿಂಡರ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಸಹಾಯದಿಂದ, NMax 155 ಸ್ಕೂಟರ್ ಸುಮಾರು 15 bhp ಮತ್ತು 14 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಯಮಹಾ ತನ್ನ ಎಂಜಿನ್ ಕಾರ್ಯಗಳನ್ನು ಮತ್ತಷ್ಟು ಸುಲಭಗೊಳಿಸಲು ಈ ಸ್ಕೂಟರ್‌ ನಲ್ಲಿ ಐಡಲ್ ಸ್ಟಾರ್ಟ್ ಮತ್ತು ಸ್ಟಾಪ್ ಕಾರ್ಯವನ್ನು ಸಹ ಸಂಯೋಜಿಸಿದೆ.

NMax 155 ಸ್ಕೂಟರ್‌ ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸೊಗಸಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ NMax 155 ಭಾರತದಲ್ಲಿ ಬಿಡುಗಡೆಯಾಗಲಿದೆ. ಹೆಚ್ಚು ಸ್ಥಳಾವಕಾಶ ಮತ್ತು ಉತ್ತಮ ಆಕಾರವನ್ನು ಹೊಂದಿರುವ ಈ ಸ್ಕೂಟರ್ ಸವಾರಿ ಮಾಡುವಾಗ ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ ಎಂಬುದರಲ್ಲಿ ಯಾವೂದೆ ಸಂದೇಹವಿಲ್ಲ.

Yamaha NMax 155 Scooter
Image Credit: Hindustan Times

35km ಮೈಲೇಜ್, ಕಡಿಮೆ ಬೆಲೆ
V-ಬೆಲ್ಟ್ ಸ್ವಯಂಚಾಲಿತ ಗೇರ್‌ ಬಾಕ್ಸ್ ಈ ಹೊಸ NMax 155 ಮ್ಯಾಕ್ಸಿ ಸ್ಕೂಟರ್‌ ನ ಸವಾರಿಯನ್ನು ಇನ್ನಷ್ಟು ಆನಂದಿಸುವಂತೆ ಮಾಡುತ್ತದೆ. ಸುಗಮವಾಗಿ ಸ್ಪಂದಿಸುವ ಸವಾರಿಯ ಅನುಭವವನ್ನು ನೀಡುವ ಈ ಸ್ಕೂಟರ್ ನಗರ ಮತ್ತು ಹೆದ್ದಾರಿ ಪ್ರಯಾಣಿಕರಿಗೆ ಹೆಚ್ಚು ಇಷ್ಟವಾಗಲಿದೆ. ಇನ್ನು Yamaha ಕಂಪನಿಯು MyRide ಅಪ್ಲಿಕೇಶನ್ ಸಹ ನೀಡಲಿದ್ದು, ಕನೆಕ್ಟಿವಿಟಿ ಫೀಚರ್ ಗಳು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲಿದೆ.

Join Nadunudi News WhatsApp Group

ಇನ್ನು YAMAHA NMax 155 ಸ್ಕೂಟರ್ ಮಾರುಕಟ್ಟೆಯಲ್ಲಿ ಸರಿಸುಮಾರು 1.30 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು 155cc ಎಂಜಿನ್ ಅನ್ನು ಹೊಂದಿರುವ Yamaha NMax 155 ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 35 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಇದಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group