Yamaha Bike: ಬಂತು ಯುವಕರ ನೆಚ್ಚಿನ ನೆಕ್ಸ್ಟ್ ಜನರೇಶನ್ ಯಮಹಾ R15, ಕಡಿಮೆ ಬೆಲೆ 63 Km ಮೈಲೇಜ್.
ನೂತನ ಯಮಹಾ 15 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.
Yamaha R15 Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಬೈಕ್ ಗಳು ಬೈಕ್ ಪ್ರಿಯರನ್ನು ಸೆಳೆಯುತ್ತಿದೆ. ಕೆಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಹೊಸ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಯಮಹಾ (Yamaha) ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇದೀಗ ಯಮಹಾ R15 ಬೈಕ್ (Yamaha R15) ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಯಮಹಾ R15 ಇತ್ತೀಚಿನ ಮಾದರಿಯ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ. ಈ ನೂತನ ಯಮಹಾ 15 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.
ಯಮಹಾ R15 ಬೈಕ್ ಬೆಲೆ ಮತ್ತು ವಿಶೇಷತೆ
ಯಮಹಾ R15 2023 ನೂತನ ಮಾದರಿಯ ಬೈಕ್ ಅಪಾಚೆ ಮತ್ತು ಪಲ್ಸರ್ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಈ ಬೈಕ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಸ್ಪೋರ್ಟಿ ಸ್ಟೈಲಿಂಗ್ ಸಿಂಗಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳು, ಕ್ಲಿಪ್-ಆನ್ ಹ್ಯಾಂಡಲ್ ಬಾರ್ ಗಳು ಮತ್ತು ಸ್ಟೆಪ್ಡ್ ಸೀಟ್, ಬ್ಲೂಟೂತ್ ಡೇ ನೈಟ್ ಮೋಡ್‌ಗಳು, ಗೇರ್ ಪೊಸಿಷನಿಂಗ್ ಇಂಡಿಕೇಟರ್ ಗಳನ್ನೂ ಅಳವಡಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಈ ಬೈಕ್ ಗೆ 1.41 ಲಕ್ಷದಿಂದ 1.98 ಲಕ್ಷ ರೂ.ಗಳನ್ನೂ ನಿಗದಿಪಡಿಸಲಾಗಿದೆ.
ಯಮಹಾ R15 ಬೈಕ್ ಮೈಲೇಜ್
ನೂತನ ಮಾದರಿಯ ಯಮಹಾ R15 ಬೈಕ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನಲ್ಲಿ 115 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ವೇರಿಯೇಬಲ್ ವಾಲ್ಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 18.1 bhp ಮತ್ತು 14.2 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಯಮಹಾ R15 ಬೈಕ್ ಪ್ರತಿ ಕಿಲೋಮೀಟರ್ ಗೆ ಬರೋಬ್ಬರಿ 63 ಕಿಲೋಮೀಟರ್ ಮೈಲೇಜ್ ನೀಡಲಿದೆ.