R15 V4: ಕಾಲೇಜು ಯುವಕರಿಗೆ ಗುಡ್ ನ್ಯೂಸ್, ಕೇವಲ 17 ಸಾವಿರಕ್ಕೆ ಖರೀದಿಸಿ ಯಮಹಾ R15 ಬೈಕ್.

ಈ ನೂತನ ಯಮಹಾ R15 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.

Yamaha R15 V4 Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬೈಕ್ ಗಳು ಲಗ್ಗೆ ಇಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಬೈಕ್ ಗಳು ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಕೆಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಹೊಸ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯ Yamaha R15 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ನೂತನ ಯಮಹಾ R15 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.

Yamaha R15 V4 Bike
Image Credit: Bikewale

ಯಮಹಾ R15 ಬೈಕ್ ಬೆಲೆ ಮತ್ತು ವಿಶೇಷತೆ
ಯಮಹಾ R15 V4 ಬೈಕ್ ನ ನೋಟ ಬಹಳ ಆಕರ್ಷಣೀಯವಾಗಿದೆ. ಈ ಬೈಕ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಸ್ಪೋರ್ಟಿ ಸ್ಟೈಲಿಂಗ್ ಸಿಂಗಲ್ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್‌ಗಳು, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್‌ ಗಳು, ಕ್ಲಿಪ್-ಆನ್ ಹ್ಯಾಂಡಲ್‌ ಬಾರ್‌ ಗಳು ಮತ್ತು ಸ್ಟೆಪ್ಡ್ ಸೀಟ್‌, ಬ್ಲೂಟೂತ್ ಡೇ ನೈಟ್ ಮೋಡ್‌ಗಳು, ಗೇರ್ ಪೊಸಿಷನಿಂಗ್ ಇಂಡಿಕೇಟರ್‌ ಗಳನ್ನೂ ಅಳವಡಿಸಲಾಗಿದೆ. ಇನ್ನು ಯಮಹಾ R15 V4 ಬೈಕ್ ಬೆಲೆ ಎಕ್ಸ್ ಶೋರೂಮ್ ಪ್ರಕಾರ 1.72 ಲಕ್ಷ ಆಗಿದೆ.

ಯಮಹಾ R15 V4 ಬೈಕ್‌ನ ಹಣಕಾಸು ಯೋಜನೆ
ಈ ಬೈಕ್ ಖರೀದಿಸಲು ನೀವು ಒಟ್ಟಿಗೆ 1.72 ಲಕ್ಷ ರೂಪಾಯಿ ಖರ್ಚು ಮಾಡಬೇಕಿಲ್ಲ. ಯಮಹಾ R15 ಬೈಕ್‌ ನ ಬೆಲೆಯ 10 ಪ್ರತಿಶತವನ್ನು ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಬಹುದಾಗಿದೆ. ನೀವು 5 ವರ್ಷಗಳ ಅವಧಿಗೆ ಬ್ಯಾಂಕ್‌ನಿಂದ ಸಾಲ ಪಡೆದರೆ, ಅದರಿಂದ ನೀವು ಮಾಸಿಕ EMI ಆಗಿ ಪ್ರತಿ ತಿಂಗಳು 4,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ನೀವು ಕೆಲವ 17 ಸಾವಿರ ಡೌನ್ ಪೇಮೆಂಟ್ ಮಾಡುವುದರ ಮೂಲಕ ಬೈಕ್ ಖರೀದಿ ಮಾಡಬಹುದು.

Yamaha R15 V4 Bike Price
Image Credit: Evoindia

ಯಮಹಾ R15 ಬೈಕ್ ಎಂಜಿನ್ ಹಾಗೂ ಮೈಲೇಜ್
ನೂತನ ಮಾದರಿಯ ಯಮಹಾ R15 ಬೈಕ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನಲ್ಲಿ 115 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ವೇರಿಯೇಬಲ್ ವಾಲ್ಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 18.1 bhp ಮತ್ತು 14.2 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಯಮಹಾ R15 ಬೈಕ್ ಪ್ರತಿ ಲೀಟರ್ ಗೆ ಬರೋಬ್ಬರಿ 55.20 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group