RX 100: ಹೊಸ ಅವತಾರದಲ್ಲಿ ಬಂತು ಯುವಕರ ನೆಚ್ಚಿನ ಯಮಹಾ RX 100, ಕಡಿಮೆ ಬೆಲೆ 50 Km ಮೈಲೇಜ್.
ಭಾರತೀಯ ಮಾರುಕಟ್ಟೆಗೆ ರೀ ಎಂಟ್ರಿ ಕೊಡಲಿದೆ ಯಮಹಾ RX 100.
Yamaha RX 100 New: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಬಿಡುಗಡೆಗೊಳ್ಳುತ್ತಿವೆ. ಬೈಕ್ ಖರೀದಿಸುವವರಿಗೆ ದಿನದಿಂದ ದಿನಕ್ಕೆ ಆಯ್ಕೆ ಹೆಚ್ಚಾಗುತ್ತಿದೆ. ಯಾವ ಬೈಕ್ ಖರೀದಿಸಬೇಕು ಎನ್ನುವ ಗೊಂದಲ ಉಂಟಾಗುವಷ್ಟು ಮಾರುಕಟ್ಟೆಯಲ್ಲಿ ಬೈಕ್ ಗಳ ಕಲೆಕ್ಷನ್ ಇವೆ. ಇನ್ನು ಯಮಹಾ ಆರ್ ಎಕ್ಸ್ 100 (Yamaha RX 100) ಬೈಕ್ ಮಾರುಕಟ್ಟೆಯಲ್ಲಿ ಒಂದು ರೀತಿಯ ಕ್ರೇಜ್ ಸೃಷ್ಟಿಸಿದೆ.
ಭಾರತೀಯ ಮಾರುಕಟ್ಟೆಗೆ ರೀ ಎಂಟ್ರಿ ಕೊಡಲಿದೆ ಯಮಹಾ RX 100
ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ ಬೈಕ್ ಹೆಚ್ಚು ಜನಪ್ರಿಯತೆ ಪಡೆದಿದೆ. ಯಮಹಾ ಕಂಪನಿಯ ಬೈಕ್ ಅನ್ನು ಯುವಕರು ಹೆಚ್ಚು ಇಷ್ಟಪಡುತ್ತಾರೆ. Yamaha RX 100 ಬೈಕಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಹಿಂದೆ ಭಾರತದಲ್ಲಿ Yamaha RX100 ಬೈಕ್ ಗೆ ಹೆಚ್ಚಿನ ಬೇಡಿಕೆ ಇದ್ದಿತ್ತು, ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಂಪನಿ ಈ ಬೈಕ್ ಅನ್ನು ಸ್ಥಗಿತ ಮಾಡಿತ್ತು.
ಸದ್ಯ ಈಗ ಮತ್ತೆ RX 100 ಬಿಡುಗಡೆ ಆಗಲಿದ್ದು ಇದು ಯುವಕರ ಸಂತಸಕ್ಕೆ ಕಾರಣವಾಗಿದೆ. Yamaha RX100 ಬೈಕ್ ಖರೀದಿಸಬೇಕೆಂದು ಆಸೆ ಇಟ್ಟುಕೊಂಡವರಿಗೆ ಇದೀಗ ಕಂಪನಿಯು ಸಿಹಿ ಸುದ್ದಿ ನೀಡಿದೆ. ಭಾರತದಲ್ಲಿ ಮತ್ತೆ RX 100 ಬಿಡುಗಡೆಯಾಗಲಿದೆ.
ಯಮಹಾ ಆರ್ ಎಕ್ಸ್ 100, Yamaha RX 100
ಯಮಹಾ ಕಂಪನಿಯು ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್ ನ ಹೆಸರು RX ಎಂದು ಹೇಳಲಾಗುತ್ತಿದೆ. 1997 ರಲ್ಲಿ ಯಮಹಾ RXZ ಅನ್ನು ಬಿಡುಗಡೆ ಮಾಡಿತು. ಆದರೆ ಹೊಸ ಮಾದರಿಯ RX 100 ಚಿಕ್ಕದಾದ ವೀಲ್ ಬೇಸ್ ನೊಂದಿಗೆ ಸಂಪೂರ್ಣವಾಗಿ ವಿಭಿನ್ನವಾದ ಛಾಸಿಸ್ ಅನ್ನು ಹೊಂದಿದೆ. ಈ ಮಾದರಿಯು 12 ಬಿ ಹೆಚ್ ಪಿ ನಲ್ಲಿ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತಿತ್ತು.
ಯಮಹಾ ಆರ್ ಎಕ್ಸ್ 100 ಫೀಚರ್, Yamaha RX 100 Features
ಯಮಹಾ RX100 ಬೈಕ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್-ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಕ್ರೋಮ್ಡ್ ಫೆಂಡರ್‌ಗಳು, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
ಯಮಹಾ ಆರ್ ಎಕ್ಸ್ 100 ಬೆಲೆ ಮತ್ತು ಮೈಲೇಜ್, Yamaha RX 100 Price And Mileage
ಯಮಹಾ ಆರ್ ಎಕ್ಸ್ 100 ಬೈಕಿನಲ್ಲಿ 150 ಸಿಸಿ ಎರಡು ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11 ಬಿ ಹೆಚ್ ಪಿ ಪವರ್ ಮತ್ತು 10.45 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಹೊಸ ಯಮಹ RX100 ಬೆಲೆ ಬಗ್ಗೆ ಇನ್ನೂ ಕೂಡ ನಿಖರವಾದ ಮಾಹಿತಿ ತಿಳಿದುಬಂದಿಲ್ಲ.
ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಹೊಸ RX100 ಬೆಲೆ ಸುಮಾರು 1.50 ಲಕ್ಷ ಎಂದು ಹೇಳಲಾಗುತ್ತಿದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ 45 ಕಿಲೋಮೀಟರ್ ಗಳಷ್ಟು ಮೈಲೇಜ್ ನೀಡಲಿದೆ. ಇನ್ನು ಕೆಲವೇ ತಿಂಗಳಲ್ಲಿ ಹೊಸ ಯಮಹಾ RX 100 ಮಾರುಕಟ್ಟೆಗೆ ಲಾಂಚ್ ಆಗಲಿದ್ದು ಜನರ ಕೈಸೇರಲಿದೆ ಎಂದು ಹೇಳಬಹುದು.