Yamaha RX 100: ಈ ಕಾರಣಕ್ಕೆ ಯಮಹಾ RX100 ಬೈಕ್ ಖರೀದಿಸಲು ಮುಗಿಬಿದ್ದ ಜನರು, ಫೀಚರ್ ಕಂಡು ಜನರು ಫಿದಾ
Yamaha RX 100 ಇಷ್ಟು ಕ್ರೇಜ್ ಹುಟ್ಟಿಸಲು ಕಾರಣವೇನು...?
Yamaha RX 100 Price And Feature: ಭಾರತೀಯ ಮಾರುಕಟ್ಟೆಯಲ್ಲಿ Yamaha ಕಂಪನಿಯ RX 100 ಬೈಕ್ ನ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ. ಯುವಕರ ಹಾರ್ಟ್ ಫೆವರೇಟ್ ಬೈಕ್ ನಲ್ಲಿ ಯಮಹ ಕಂಪನಿಯ RX 100 ಕೂಡ ಒಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ RX 100 ಮತ್ತೆ ಸದ್ದು ಮಾಡಲಿದೆ. ಹೌದು, ಬರಿ ಸೌಂಡ್ ಮೂಲಕ ಎಲ್ಲರನ್ನು ಆಕರ್ಷಿಸುವ Yamaha RX 100 ಇನ್ನೇನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಯುವಕರಂತೂ Yamaha RX 100 ಬೈಕ್ ನ ಖರೀದಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಅತ್ಯಾಕರ್ಷಕ ಫೀಚರ್ ಹೆಚ್ಚು ಮೈಲೇಜ್ ನೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಯಮಹ ಸಂಚಲನ ಮೂಡಿಸಲಿದೆ. ಇನ್ನು ಮಾರುಕಟ್ಟೆಯಲ್ಲಿ Yamaha RX Bike ಅಷ್ಟೊಂದು ಕ್ರೇಜ್ ಸೃಷ್ಟಿಸಲು, ಬೈಕ್ ನಲ್ಲಿ ಏನೆಲ್ಲಾ ವೈಶಿಷ್ಟ್ಯ ಇರಬಹುದು ಎನ್ನುವ ಬಗ್ಗೆ ನೀವು ಯೋಚಿಸಿರಬಹುದು. ಸದ್ಯ ನಾವೀಗ ಈ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಯಮಹ RX100 ಬೈಕ್ ಅಷ್ಟೊಂದು ಫೇಮಸ್ ಆಗಲು ಕಾರಣವೇನು…? ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
Yamaha RX 100 ಇಷ್ಟು ಕ್ರೇಜ್ ಹುಟ್ಟಿಸಲು ಕಾರಣವೇನು…?
•ಸದ್ಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ Yamaha RX 100 Bike ಬಾರಿ ಸಡ್ಡು ಮಾಡುತ್ತಿದೆ. RX100 ವಿನ್ಯಾಸವು ತುಂಬಾ ಆಕರ್ಷಕವಾಗಿತ್ತು. ಇದರ ಸ್ಲಿಮ್ ಬಾಡಿ, ಸಣ್ಣ ಟ್ಯಾಂಕ್ ಮತ್ತು ಉದ್ದದ ಸೀಟ್ ಇತರ ಮೋಟಾರ್ ಸೈಕಲ್ ಗಳಿಗಿಂತ ಭಿನ್ನವಾಗಿದೆ. ಈ ಬೈಕು ತುಂಬಾ ಸೊಗಸಾದ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ಇದು ಸವಾರಿ ಮಾಡಲು ತುಂಬಾ ಸುಲಭವಾಗಿದೆ.
•ಆರ್ ಎಕ್ಸ್ 100 ಬೈಕ್ 98 ಸಿಸಿ 2 ಸ್ಟ್ರೋಕ್ ಎಂಜಿನ್ ಹೊಂದಿತ್ತು. ಎಂಜಿನ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಈ ಬೈಕ್ ರಾಕೆಟ್ ನಂತೆ ಓಡುತ್ತಿತ್ತು. ಇದರ ವೇಗವರ್ಧನೆ ಎಷ್ಟರಮಟ್ಟಿಗಿದೆಯೆಂದರೆ ಯುವಕರು ಈಗಲೂ ಈ ಬೈಕನ್ನು ಇತರ ಬೈಕ್ ಗಳಿಗಿಂತ ಹೆಚ್ಚು ಇಷ್ಟಪಡುತ್ತಾರೆ.
•RX100 ಬಹಳ ಮಿತವ್ಯಯದ ಬೈಕ್ ಆಗಿತ್ತು. ಈ ಬೈಕ್ ಪ್ರತಿ ಲೀಟರ್ ಗೆ 45-50 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಬೆಲೆ ತುಂಬಾ ಕಡಿಮೆ ಇದ್ದ ಸಮಯದಲ್ಲಿ, ಈ ಬೈಕ್ ಕೈಗೆಟುಕುವ ಆಯ್ಕೆಯಾಗಿತ್ತು.
•ಯಮಹಾ RX100 ನ ನಿರ್ವಹಣೆಯೂ ಕಡಿಮೆಯಾಗಿದೆ. ಅದರ ಬಿಡಿ ಭಾಗಗಳು ಸುಲಭವಾಗಿ ಲಭ್ಯವಿದ್ದವು ಮತ್ತು ಅದರ ಸೇವಾ ವೆಚ್ಚವೂ ಕಡಿಮೆಯಾಗಿತ್ತು.
•ಯಮಹಾ RX100 ಯಾವುದೇ ರೀತಿಯ ಅಗ್ಗದ ಬೈಕ್ ಆಗಿರಲಿಲ್ಲ. ಇದರ ಮೊದಲ ಬ್ಯಾಚ್ ಬೆಲೆ 19,764 ರೂ. ನಾವು ಇಂದಿನ ಬೆಲೆಗಳ ವಿಷಯದಲ್ಲಿ ಹೇಳುವುದಾದರೆ ಅದು ಸುಮಾರು ಒಂದು ಲಕ್ಷ ರೂಪಾಯಿಗಳಿಗೆ ಸಮನಾಗಿರುತ್ತದೆ.