Dinner With Modi: ಮೋದಿ ಔತಣಕೂಟದಲ್ಲಿ ಕಾಣಿಸಿಕೊಂಡ ಯಶ್- ರಿಷಬ್, ಫೋಟೋ ವೈರಲ್.

Yash and Rishabh Shetty who dined with Modi.: ಏರೋ ಇಂಡಿಯಾ ಶೋ ಉದ್ಘಾಟನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರದಂದು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಭಾನುವಾರ ರಾತ್ರಿ ಮೋದಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.

ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ತೆರಳಿದ್ದಾರೆ. ಈ ವೇಳೆ ನಡೆದ ಔಟಕೂಟಕ್ಕೆ ಫ್ಯಾನ್ ಇಂಡಿಯಾ ಸ್ಟಾರ್ ಗಳಾದ ಯಶ್ (Yash) ಹಾಗೂ ರಿಷಬ್ ಶೆಟ್ಟಿ (Rishabh Shetty) ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. Sandalwood Celebrities With Narendra Modi.

Yash, Rishabh Shetty Matti Ashwini Puneet Rajkumar appeared with Narendra Modi.
Image Credit: twitter

ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಏರೋ ಇಂಡಿಯಾ ಶೋ ಉದ್ಘಾಟನೆಯ ಸಲುವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 13 ಬೆಳಿಗ್ಗೆ 9:30 ಕ್ಕೆ ಉದ್ಘಾಟನೆ ಇರುವ ಕಾರಣ ಭಾನುವಾರ ರಾತ್ರಿ ಮೋದಿ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ.

ಉದ್ಘಾಟನೆ ಇರುವ ಕಾರಣ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಆಗಮಿಸಿದ್ದು, ಇದರ ಸಂಬಂಧ ಚಿತ್ರರಂಗದ ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆವ್ಹಾನ ನೀಡಿದ್ದರು ಎನ್ನಲಾಗುತ್ತಿದೆ.

Ashwini Puneeth Rajkumar appeared with Modi
Image Credit: twitter

ಮೋದಿ ಔತಣಕೂಟದಲ್ಲಿ ಕಾಣಿಸಿಕೊಂಡ ಯಶ್- ರಿಷಬ್
ರಾಜಭವನದಲ್ಲಿ ಪ್ರಧಾನಿ ಮೋದಿ ಎಲ್ಲ ಚಿತ್ರರಂಗ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರನ್ನು ಔತಣಕೂಟದಲ್ಲಿ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೆ ಮೋದಿ ಔತಣಕೂಟದಲ್ಲಿ ಫ್ಯಾನ್ ಇಂಡಿಯಾ ಸ್ಟಾರ್ ಗಳಾದ ಯಶ್ ಹಾಗೂ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.

Join Nadunudi News WhatsApp Group

Actor Yash took a photo with Modi
Image Credit: twitter

ಮೋದಿ ನಡೆಸಿದ ಔತಣ ಕೂಟದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ಶ್ರದ್ದಾ ಜೈನ, ಅಶ್ವಿನಿ ಪುನೀತ್ ರಾಜಕುಮಾರ್,ನಿರ್ದೇಶಕ ಪ್ರಶಾಂತ್ ನೀಲ್, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್, ಮನೀಶ್ ಪಾಂಡೆ, ಮಾಯಾಂಕ್ ಅಗರ್ವಾಲ್, ಉದ್ಯಮಿ ನಿತಿನ್ ಕಾಮತ್, ತರುಣ್ ಮೆಹ್ತಾ ಸೇರಿದಂತೆ ಹಲವಾರು ಔತಣ ಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವರದಿಯಾಗಿದೆ.

ಹಾಗೆಯೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

Join Nadunudi News WhatsApp Group