ಸಂದರ್ಶನದಲ್ಲಿ ಯಶ್ ನ ಪ್ರೀತಿ ಒಪ್ಪಿಕೊಳ್ಳಲು ಎಷ್ಟು ತಿಂಗಳು ಟೈಮ್ ತಗೆದುಕೊಂಡೆ ಎಂದು ಹೇಳಿದ ರಾಧಿಕಾ ಪಂಡಿತ್

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿದ್ದು ಕೆಜಿಎಫ್ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೌದು ಈ ಜೋಡಿಯ ಪ್ರೇಮಕಥೆ ಬಗ್ಗೆ ರಾಧಿಕ ಪಂಡಿತ್ ಅವರೇ ಹೇಳಿದ್ದು ರಾಕಿಂಗ್ ಸ್ಟಾರ್ ಯಶ್ ಪ್ರಪೋಸಲ್ಗೆ ಯೆಸ್ ಹೇಳಲು ರಾಧಿಕ ಎಷ್ಟು ಸಮಯ ತೆಗೆದುಕೊಂಡರು ಎನ್ನುವ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ಯಶ್ ಮತ್ತು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದು ಇಬ್ಬರೂ ಕೂಡ ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ದಂಪತಿಗಳು ತಮ್ಮ ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ಮತ್ತು ಸಿನಿಮಾ ಕುರಿತು ಮಾಹಿತಿ ನೀಡುತ್ತಿದ್ದು ಆದರೆ ಯಶ್ ಅವರು ಪ್ರಪೋಸ್ ಮಾಡಿದಾಗ ರಾಧಿಕಾ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ ಎಂಬುದು ಯಾರಿಗೂ ತಿಳಿದಿಲ್ಲ. ಸದ್ಯ ಬೆಂಗಳೂರು ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಯಶ್ ತಮ್ಮ ಪ್ರೇಮಕಥೆ ಬಗ್ಗೆ ಮಾತಾಡಿದ್ದು ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ಗೆ ಹೇಗೆ ಪ್ರಪೋಸ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.

ಇಬ್ಬರಲ್ಲಿ ಸ್ನೇಹವಿತ್ತು ನಾನು ಅನೇಕರ ಬಾರಿ ಸುಳಿವು ಕೊಟ್ರು ಅವರು ಅರ್ಥ ಮಾಡಿಕೊಂಡಿಲ್ಲ. ನಾನು ಮೂರ್ಖಳು ಎಂದು ಭಾವಿಸಿದ್ದೆ ಎಂದು ಯಶ್ ಬೆಂಗಳೂರು ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ನಾನು ಇನ್ನೂ ಅವರ ನಂಬರ್ ಅನ್ನು ಫೂಲ್ ಎಂದೇ ಸೇವ್ ಮಾಡಿದ್ದೇನೆ. ಹೌದು ನನಗೆ ಪ್ರಪೋಸ್ ಮಾಡಲು ತುಂಬಾ ಭಯವಾಗಿದ್ದು ಕಾರಣ ನಮ್ಮ ನಡುವಿನ ಸ್ನೇಹ ಎಂದು ಯಶ್ ಹೇಳಿದ್ದಾರೆ. ನನಗೆ ರಾಧಿಕಾ ಸ್ನೇಹವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ.

ನನಗೆ ಹೆಚ್ಚು ಆತ್ಮವಿಶ್ವಾಸ ಇರಲಿಲ್ಲ. ನಾನು ಪ್ರಪೋಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದೇ ಎಂದು ಯಶ್ ಹೇಳಿದ್ದಾರೆ. ಪ್ರೇಮಿಗಳ ದಿನದಂದು ನಾನು ಅವಳಿಗೆ ಪ್ರಪೋಸ್ ಮಾಡಬೇಕೆಂದು ನಿರ್ಧರಿಸಿದ್ದು ಆಗ ನಾನು ಎಲ್ಲಿದ್ದೀಯಾ ಎಂದು ಕೇಳಿದಾಗ ಅವಳು ಕೋರಮಂಗಲದ ಮಾಲ್ನಲ್ಲಿ ಸಿನಿಮಾ ನೋಡಲು ಹೋಗುತ್ತಿರುವುದಾಗಿ ಹೇಳಿದಳು.

ಈ ಹೊತ್ತಿನಲ್ಲಿ ಅವಳಿಗೆ ಪ್ರಪೋಸ್ ಮಾಡಬೇಕು ಅಂತ ಅನಿಸಿದ್ದು ಆದ್ದರಿಂದ ನಾನು ಮಾಲ್ಗೆ ಹೋಗಲು ನಿರ್ಧರಿಸಿದೆ. ನಾನು ಇಷ್ಟಪಡುವ ಎಲ್ಲವನ್ನೂ ಅವಳಿಗೆ ವಿಶೇಷ ಉಡುಗೊರೆಯಾಗಿ ನೀಡಲು ನಾನು ಬಯಸಿದ್ದೆ ಎಂದಿದ್ದು ಕೆಲವು ರೆಡಿಮೇಡ್ ಗಿಫ್ಟ್ ಸಿದ್ದ ಮಾಡಿದ್ದೆ ಚಾಕೊಲೇಟ್ ಗಳು ಅವರಿಗೆ ಇಷ್ಟವಾದ ಎಲ್ಲವನ್ನೂ ನಾನು ಸ್ಟಾಕ್ ಮಾಡಿ ಇಡುತ್ತಿದ್ದು ಕೊನೆಗೆ ಧೈರ್ಯ ಮಾಡಿ ಯಶ್ ಅಂತಿಮವಾಗಿ ರಾಧಿಕಾಗೆ ಪ್ರಪೋಸ್ ಮಾಡಿದರೂ ಆದರೆ ಅದಕ್ಕೆ ರಾಧಿಕ ಉತ್ತರ ನೀಡಿಲ್ಲ. ಯಶ್ ಮದುವೆ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ರಾಧಿಕಾ 6 ತಿಂಗಳು ತೆಗೆದುಕೊಂಡಿದ್ದಾರೆ.

Join Nadunudi News WhatsApp Group

ಇನ್ನು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಯಶ್ ಅವರ ಪತ್ನಿ ರಾಧಿಕಾ ಕೂಡ ಈ ಬಗ್ಗೆ ಮಾತಾಡಿದ್ದು ನಾವಿಬ್ಬರೂ ಚಿತ್ರರಂಗದಿಂದ ಬಂದವರು ಮತ್ತು ನಾನು ನಾಟಕೀಯ ರೀತಿಯಲ್ಲಿ ಪ್ರಪೋಸ್ ಮಾಡೋದನ್ನು ಬಯಸಲಿಲ್ಲ. ಯಶ್ ಫೋನ್ ಮೂಲಕ ನನ್ನನ್ನು ಕೇಳಿದರು ಮತ್ತು ಬಳಿಕ ನಾನು ಸಮಯವನ್ನು ತೆಗೆದುಕೊಂಡೆ ಎಂದು ಹೇಳಿದರು.

ಇನ್ನು ಕೆಜಿಎಫ್ ಸ್ಟಾರ್ ಯಶ್ ಮತ್ತು ರಾಧಿಕಾ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು ಹಾಗೂ ತದ ನಂತರ ಇಬ್ಬರೂ 2016 ರಲ್ಲಿ ಮದುವೆ ಮಾಡಿಕೊಂಡಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದು ಎಲ್ಲರೂ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಇಬ್ಬರು ಮೊದಲ ಬಾರಿಗೆ 2004 ರಲ್ಲಿ ನಂದಗೋಕುಲ ಟಿವಿ ಕಾರ್ಯಕ್ರಮದ ಸೆಟ್ನಲ್ಲಿ ಭೇಟಿಯಾದರು ಅಂದಿನಿಂದ ಇಬ್ಬರೂ ಸ್ನೇಹಿತರಾದರು ಮತ್ತು ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಬಹುದು.

Join Nadunudi News WhatsApp Group