Yash In Jawan: ಜವಾನ್ ಚಿತ್ರದಲ್ಲಿ ನಟ ಯಶ್, ಥೀಯೇಟರ್ ನಲ್ಲಿ ಮತ್ತೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ಅಬ್ಬರಿಸಲಿದೆ.
ಜವಾನ್ ಕರ್ನಾಟಕಲ್ಲಿ ಅಬ್ಬರಿಸಲು ಯಶ್ ಅವರು ದೊಡ್ಡ ಸಹಾಯ ಮಾಡಿದ್ದಾರೆ.
Yash Voice For Shah Rukh Khan Jawan Movie: ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಇದೀಗ ತಮ್ಮ ಹೊಸ ಚಿತ್ರದ ವಿಚಾರವಾಗಿ ಮತ್ತೆ ಸುದ್ದಿಯಾಗುತ್ತಿದ್ದಾರೆ. ಪಠಾಣ್ ಚಿತ್ರದ ಯಶಸ್ಸಿನ ಬಳಿಕ ಇದೀಗ ಮತ್ತೆ ಹೊಸ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್ ಸಂಚಲನ ಮೂಡಿಸಲಿದ್ದಾರೆ.
ಇನ್ನು ಶಾರುಖ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ದೇಶದೆಲ್ಲೆಡೆ ಜನವರಿ 25 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.
ಶಾರುಖ್ ಖಾನ್ ಹೊಸ ಚಿತ್ರ ‘ಜವಾನ್‘
ಐದು ವರ್ಷದ ಬಳಿಕ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ಮತ್ತೆ ದಾಖಲೆ ಬರೆದಿದ್ದರು. ಇದೀಗ ಶಾರುಖ್ ಅಭಿನಯದ ‘ಜವಾನ್’ ಚಿತ್ರ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ. ಬಹು ನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆ ದಿನಾಂಕ ಕೂಡ ನಿಗಧಿಯಾಗಿದೆ. ಶಾರುಖ್ ಅಭಿಮಾನಿಗಳು ಈ ಚಿತ್ರದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಜವಾನ್ ಚಿತ್ರ ಟ್ರೈಲರ್ ನಲ್ಲಿಯೇ ಭರ್ಜರಿ ರೆಸ್ಪೋನ್ಸ್ ಪಡೆದುಕೊಂಡಿದೆ. ಇದೀಗ ಜವಾನ್ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಲಭಿಸಿದೆ.
ಸೆಪ್ಟೆಂಬರ್ 7 ಕ್ಕೆ ತೆರೆ ಮೇಲೆ ಬರಲಿದೆ ಜವಾನ್
ಇನ್ನು ಬಹುನಿರೀಕ್ಷಿತ ಜಾವನ್ ಚಿತ್ರ ಸೆಪ್ಟೆಂಬರ್ 7 ರಂದು ಎಲ್ಲೆಡೆ ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ಕನ್ನಡ, ಮಲಯಾಳಂ, ತೆಲಗು ಭಾಷೆಗಳಲ್ಲಿ ಚಿತ್ರ ರಿಲೀಸ್ ಗೆ ಸಿದ್ಧವಾಹಿದೆ. ಇನ್ನು ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಜವಾನ್ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಬಾರಿ ಸಂಚಲನ ಮೂಡಿಸಿದೆ. ಇನ್ನು ಸದ್ಯದಲ್ಲೇ ಜವಾನ್ ಕನ್ನಡ ಆವೃತ್ತಿ ಬಿಡುಗಡೆಗೆ ತಯಾರಾಗುತ್ತಿದೆ. ಕನ್ನಡದಲ್ಲಿ ಶಾರುಖ್ ಖಾನ್ ಪಾತ್ರಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಧ್ವನಿಯಾಗುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಶಾರುಖ್ ಖಾನ್ ಪಾತ್ರಕ್ಕೆ ಧ್ವನಿಯಾದ ರಾಕಿ ಭಾಯ್
ಕನ್ನಡಲ್ಲಿ ಜವಾನ್ ಬಿಡುಗಡೆ ಬಾರಿ ಕುತೂಹಲವನ್ನು ಮೂಡಿಸಿದೆ. ಏಕೆಂದರೆ ಫ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ (Yash) ಈ ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ. ಶಾರುಖ್ ಖಾನ್ ಗೆ ಯಶ್ ಧ್ವನಿಯಾಗುತ್ತಿದ್ದಾರೆ. ಯಶ್ ಧ್ವನಿಯಲ್ಲಿ ಜವಾನ್ ಚಿತ್ರವನ್ನು ವೀಕ್ಷಿಸಲು ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಜವಾನ್ ಕನ್ನಡ ವರ್ಷನ್ ಬಿಡುಗಡೆ ಯಾವಾಗ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಯೂಟ್ಯೂಬ್ ನಲ್ಲಿ ಜವಾನ್ ಟ್ರೈಲರ್ ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದ್ದು ಬಿಡುಗಡೆಗೊಂಡ ಬಳಿಕ ಪಠಾಣ್ ಕಲೆಕ್ಷನ್ ರೆಕಾರ್ಡ್ ಅನ್ನು ಮುರಿಯುತ್ತ ಎನ್ನುವುದನ್ನು ಕಾದು ನೋಡಬೇಕಿದೆ.