Yashasvi Jaiswal: ಮೊದಲ ಶತಕ ಭಾರಿಸಿದ ಬೆನ್ನಲ್ಲೇ ಗಳಗಳನೆ ಕಣ್ಣೀರು ಹಾಕಿದ ಯಶಸ್ವಿ ಜೈಸ್ವಾಲ್, ನಿಜಕ್ಕೂ ಗ್ರೇಟ್.
ಶತಕ ಬಾರಿಸಿದ ಸಂತೋಷದಲ್ಲಿ ಕಣ್ಣೀರು ಹಾಕಿದ ಯಶಸ್ವಿ ಜೈಸ್ವಾಲ್.
Yashasvi Jaiswal Emotion: ಭಾರತೀಯ ತಂಡದ ಅಂತಾರಾಷ್ಟ್ರೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ (Yashasvi Jaiswal) ಇದೀಗ ಮೊದಲ ಶತಕ ಭಾರಿಸಿ ಸುದ್ದಿಯಾಗಿದ್ದಾರೆ. ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ನಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಶತಕವನ್ನು ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಯಶಸ್ವಿ ಅವರು ರಾಜಸ್ತಾನ್ ರಾಯಲ್ಸ್ ಪರ ಆಡುತ್ತಾರೆ. ಇದೀಗ ಯಶಸ್ವಿ ಜೈಸ್ವಾನ್ ಅವರು ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಪಂದ್ಯದಲ್ಲಿ ಶತಕ ಭಾರಿಸಿದ ಬೆನ್ನಲ್ಲೇ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ.
ಮೊದಲ ಶತಕ ಭಾರಿಸಿದ ಬೆನ್ನಲ್ಲೇ ಗಳಗಳನೆ ಕಣ್ಣೀರು ಹಾಕಿದ ಯಶಸ್ವಿ ಜೈಸ್ವಾಲ್
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಟೆಸ್ಟ್ ನಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 171 ರನ್‌ಗಳ ಇನ್ನಿಂಗ್ಸ್ ಗಳಿಸಿದ್ದಾರೆ.
ಶತಕ ಭಾರಿಸಿದ ಸಂತೋಷದಲ್ಲಿ ಯಶಸ್ವಿ ಜೈಸ್ವಾಲ್ ಅವರು ತಮ್ಮ ತಂದೆಯೊಡನೆ ವಿಡಿಯೋ ಕರೆಯಲ್ಲಿ ಮಾತನಾಡಿ ಭಾವುಕರಾಗಿದ್ದಾರೆ. ಈ ಬಗ್ಗೆ ಯಶಸ್ವಿ ಜೈಸ್ವಾಲ್ ಅವರ ತಂದೆ ಭೂಪೇಂದ್ರ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಮಗನ ಬಗ್ಗೆ ಮಾತನಾಡಿದ ಭೂಪೇಂದ್ರ ಜೈಸ್ವಾಲ್
ಬೆಳಗಿನ ಜಾವಾ 4 :30 ರ ಸಮಯದಲ್ಲಿ ಯಶಸ್ವಿ ತಮಗೆ ಕರೆ ಮಾಡಿರುವ ಬಗ್ಗೆ ಭೂಪೇಂದ್ರ ಜೈಸ್ವಾಲ್ ಅವರು ಮಾಹಿತಿ ನೀಡಿದ್ದಾರೆ. ಶತಕ ಬಾರಿಸಿದ ಬಳಿಕ ಯಶಸ್ವಿ ಕರೆ ಮಾಡಿದ್ದು ಈ ವೇಳೆ ಯಶಸ್ವಿಗೆ ಕಣ್ಣೀರು ತಡೆಯಲಾಗಲಿಲ್ಲ ಎಂದು ಅವರ ತಂದೆ ತಿಳಿಸಿದ್ದಾರೆ. ಸಂಭಾಷಣೆಯ ವೇಳೆ ಯಶಸ್ವಿ ಹಾಗೂ ಅವರ ತಂದೆ ಭಾವುಕರಾಗಿ ಮಾತನಾಡಿದ್ದಾರೆ. ಯಶಸ್ವಿ ಅವರು ತಮ್ಮ ಅದ್ಬುತ ಸಾಧನೆಯ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ.
ವಿಶೇಷ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್
ವಿದೇಶಿ ನೆಲದಲ್ಲಿ ಪದಾರ್ಪಣೆ ಮಾಡಿದ ಭಾರತೀಯ ಬ್ಯಾಟ್ಸ್ ಮನ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ತಮ್ಮ ಶತಕ ಭಾರಿಸಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ 150 ರನ್‌ಗಳ ಗಡಿ ದಾಟಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಹಿಂದೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಈ ಸಾಧನೆಯನ್ನು ಮಾಡಿದ್ದರು. ಇದೀಗ ಇವರ ಸಾಲಿಗೆ ಯುವಪ್ರತಿಭೆ ಯಶಸ್ವಿ ಜೈಸ್ವಾಲ್ ಕೂಡ ಸೇರಿಕೊಂಡಿದ್ದಾರೆ.