Yashaswini Card: ಜುಲೈ 31 ಕ್ಕೆ ಸಿಗಲಿದೆ ಇನ್ನೊಂದು ಯೋಜನೆಯ ಕಾರ್ಡ್, ರಾಜ್ಯದ ಜನರಿಗೆ ಇನ್ನೊಂದು ಗುಡ್ ನ್ಯೂಸ್.
ಸರ್ಕಾರ ರಾಜ್ಯದ ರೈತರಿಗೆ ಯಶಸ್ವಿನಿ ಕಾರ್ಡ್ ವಿತರಣೆಯ ಕುರಿತು ಮಹತ್ವದ ಮಾಹಿತಿಯನ್ನು ನೀಡಿದೆ.
Yashaswini Card Distribution: ರಾಜ್ಯದ ರೈತರಿಗಾಗಿ ಸರ್ಕಾರವು ಯಶಸ್ವಿನಿ (Yashaswini Card) ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಸಹಕಾರಿ ಇಲಾಖೆಯಲ್ಲಿ ನೋಂದಾಯಿತ ಸಹಕಾರ ಸಂಘಗಳ ಸದಸ್ಯರಾಗಿರುವ ಕರ್ನಾಟಕದ ರೈತರಿಗೆ ಪರಿಣಾಮಕಾರಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ .
ರೈತರಿಗೆ ರಕ್ಷಣೆ ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೀಗ ಸರ್ಕಾರ ರಾಜ್ಯದ ರೈತರಿಗೆ ಯಶಸ್ವಿನಿ ಕಾರ್ಡ್ ವಿತರಣೆಯ ಕುರಿತು ಮಹತ್ವದ ಮಾಹಿತಿಯನ್ನು ನೀಡಿದೆ.
ರೈತರಿಗೆ ಜುಲೈ 31 ಕ್ಕೆ ಸಿಗಲಿದೆ ಇನ್ನೊಂದು ಯೋಜನೆಯ ಕಾರ್ಡ್
ರಾಜ್ಯದ ಜನರಿಗೆ ಬಾಕಿ ಇರುವ ಯಶಸ್ವಿನಿ ಕಾರ್ಡ್ ಗಳನ್ನೂ ಜುಲೈ 31 ರೊಳಗೆ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸಹಕಾರ ಸಚಿವ ಕೆ. ಏನ್ ರಾಜಣ್ಣ ಮಾಹಿತಿ ನೀಡಿದ್ದಾರೆ. ರಾಜ್ಯದ ರೈತರಿಗೆ ಜುಲೈ 31 ರಿಂದ ಯಶಸ್ವಿನಿ ಯೋಜನೆಯ ಕಾರ್ಡ್ ಲಭ್ಯವಾಗಲಿದೆ. ನೋಂದಣಿಯಾಗಿರುವ 45 ಲಕ್ಷ ಸದಸ್ಯರಿಗೆ ಸಂಬಂಧಿಸಿದಂತೆ ಪ್ರತಿ ಕುಟುಂಬಕ್ಕೆ ಒಂದು ಕಾರ್ಡ್ ನಂತೆ 12 .89 ಲಕ್ಷ ಕಾರ್ಡ್ ಗಳನ್ನೂ ಜುಲೈ 31 ರ ಅಂತ್ಯಕ್ಕೆ ಜಿಲ್ಲಾ ಸಹಕಾರ ನಿಬಂಧಕ ಕಚೇರಿಗೆ ಕಾರ್ಡ್ ಅನ್ನು ಮುದ್ರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಯಶಸ್ವಿನಿ ಯೋಜನೆಗೆ ಯಾರು ಅರ್ಹರು
ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಸಮುದಾಯ ಆಧಾರಿತ ವೈದ್ಯಕೀಯ ಕವರೇಜ್ ಯೋಜನೆಯಾಗಿದ್ದು, ಇದು ಕರ್ನಾಟಕದಲ್ಲಿ ಅನೌಪಚಾರಿಕ ವಲಯದಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದ ಕಾರ್ಮಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಸಹಕಾರಿ ಅಥವಾ ಬ್ಯಾಂಕ್ ಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ನೇಕಾರರು , ಮೀನುಗಾರರ ಸಹಕಾರ ಸಂಘಗಳು, ಬಿಡಿ ಕಾರ್ಮಿಕರು ಮತ್ತು ಸ್ತ್ರೀ ಶಕ್ತಿ ಗುಂಪುಗಳಂತಹ ಸ್ವ ಸಹಾಯ ಗುಂಪುಗಳ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯಶಸ್ವಿನಿ ಯೋಜನೆಯು ಪ್ರಮುಖ ಆಸ್ಪತ್ರೆಗಳಲ್ಲಿ ಸರಿಸುಮಾರು 823 ಶಸ್ತ್ರಚಿಕಿತ್ಸಾ ವಿಧಾನವನ್ನು ಒಲ್ಗೊಂಡಿದೆ. ಈ ಯೋಜನೆಯಿಂದಾಗಿ ರೂ. 1 .25 ಲಕ್ಷದವರೆಗೆ ಉಚಿತ ವೈದ್ಯಕೀಯ ಶಸ್ತ್ರಚಿಕಿತ್ಸೆಯನ್ನು ಪಡೆಯಬಹುದು.