Yashaswini Scheme Karnataka 2026: ಕರ್ನಾಟಕದ ಗ್ರಾಮೀಣ ಜನತೆಗೆ ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕದ ಗ್ರಾಮೀಣ ಜನತೆಗೆ, ವಿಶೇಷವಾಗಿ ರೈತರು ಮತ್ತು ಸಹಕಾರಿ ಸಂಘ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. 2003 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದು 2008 ರಲ್ಲಿ ನಿಲ್ಲಿಸಲಾಗಿತ್ತು, ಆದರೆ 2022 ರಲ್ಲಿ ಮತ್ತೆ ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 5 ಲಕ್ಷ ರೂಪಾಯಿವರೆಗೆ ನಗದುರಹಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ನಾವೀಗ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು ಮತ್ತು ನೋಂದಣಿ ಮಾಡಿಕೊಳ್ಳುದು ಹೇಗೆ? ಮತ್ತು ಯಾರು ಯಾರು ಅರ್ಜಿ ಸಲ್ಲಿಸಬಹದು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಯಶಸ್ವಿನಿ ಯೋಜನೆ ಎಂದರೆ?
ಯಶಸ್ವಿನಿ ಯೋಜನೆಯು ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಸಮುದಾಯ ಆಧಾರಿತ, ಕಡಿಮೆ ವೆಚ್ಚದ ಆರೋಗ್ಯ ವಿಮಾ ಯೋಜನೆಯಾಗಿದ್ದು, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಇದನ್ನು ಪ್ರಾರಂಭಿಸಲಾಗಿದೆ.
ಯಶಸ್ವಿನಿ ಯೋಜನೆಯ ಹಿನ್ನೆಲೆ
ಈ ಯಶಸ್ವಿನಿ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ S.M. ಕೃಷ್ಣ ಅವರು ಪ್ರಾರಂಭಿಸಿದರು. ಇದು ಸಹಕಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ ಮತ್ತು ಗ್ರಾಮೀಣ ಅನೌಪಚಾರಿಕ ಕಾರ್ಮಿಕರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಕವರೇಜ್ ಲಭ್ಯವಿದೆ. ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು. ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಎಂದರೆ ನಿಮ್ಮ ಆರೋಗ್ಯ ವಿಮಾದಾರರು ನಿಮ್ಮ ವೈದ್ಯಕೀಯ ಬಿಲ್ ಗಳನ್ನು ನೇರವಾಗಿ ಆಸ್ಪತ್ರೆಗೆ ಪಾವತಿ ಮಾಡುತ್ತಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ, ನರವೈಜ್ಞಾನಿಕ, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಸಾವಿರಾರು ವಿಧದ ಚಿಕಿತ್ಸೆಗಳನ್ನು ಒಳಗೊಂಡಿವೆ. ರಾಜ್ಯಾದ್ಯಂತ ಸುಮಾರು 800 ಕ್ಕೂ ಹೆಚ್ಚು ಆಸ್ಪತ್ರೆಗಳು ಈ ಯೋಜನೆಯಲ್ಲಿ ಸೇರಿಕೊಂಡಿದೆ.
ಯಶಸ್ವಿನಿ ಯೋಜನೆಯ ಅರ್ಹತೆ
- ಸಹಕಾರಿ ಸಂಘದ ಸದಸ್ಯರಾಗಿರಬೇಕು
- ಹಾಲು ಉತ್ಪಾದಕರ ಸಂಘ
- ನೇಕಾರರ ಸಂಘ
- ಮೀನುಗಾರರ ಸಂಘ
- ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು
- ಕನಿಷ್ಠ 3 ತಿಂಗಳು ಸದಸ್ಯತ್ವ ಹೊಂದಿರಬೇಕು
- ಪ್ರಧಾನ ಸದಸ್ಯನ ಕುಟುಂಬದ ಪತ್ನಿ, ಮಕ್ಕಳು, ಪೋಷಕರು ಲಾಭ ಪಡೆದುಕೊಳ್ಳಬಹುದು
- ಸರ್ಕಾರಿ ನೌಕರರು ಅಥವಾ ತಿಂಗಳಿಗೆ 30 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವವರು ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ
ಯಶಸ್ವಿನಿ ಯೋಜನೆಯ ನೋಂದಣಿ
- ನೋಂದಣಿ ಅವಧಿಯಲ್ಲಿ ನಿಮ್ಮ ಹತ್ತಿರದ ಸಹಕಾರಿ ಬ್ಯಾಂಕ್ / ಸೊಸೈಟಿ ಗೆ ಭೇಟಿ ನೀಡಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಕುಟುಂಬದ ಎಲ್ಲಾ ಸದಸ್ಯರ ಅಗತ್ಯ ದಾಖಲೆಗಳನ್ನು ಸಲ್ಲಿಸಿ
ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಭರ್ತಿ ಮಾಡಿದ ಅರ್ಜಿ ನಮೂನೆ
- ಕುಟುಂಬದ ಸಧಸ್ಯರ ಆಧಾರ್ ಕಾರ್ಡ್
- ಪಡಿತರ ಚೀಟಿ
- ಕುಟುಂಬದ ಸಧಸ್ಯರ ಪಾಸ್ ಪೋರ್ಟ್ ಗಾತ್ರದ ಫೋಟೋ
- ಸಹಕಾರಿ ಸಂಘದ ಸದಸ್ಯತ್ವ ಪ್ರಮಾಣಪತ್ರ (ಕನಿಷ್ಠ 3 ತಿಂಗಳು)
- ಜಾತಿ ಪ್ರಮಾಣಪತ್ರ ( SC/ST ಗಳಿಗೆ )
ಪ್ರೀಮಿಯಂ ಸಾಮಾನ್ಯವಾಗಿ 250 ರಿಂದ 1000 ರೂಪಾಯಿವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ
https://sahakarasindhu.karnataka.gov.in/ ಅಥವಾ ಸಂಘದ ಅಧಿಕಾರಿಗಳನ್ನು ಭೇಟಿ ಮಾಡಿ. ನೋಂದಣಿ ವಾರ್ಷಿಕವಾಗಿ ನಿಗದಿತ ಅವಧಿಯಲ್ಲಿ ನೆಡೆಯುತ್ತದೆ. ಆಸ್ಪತ್ರೆ ಯಲ್ಲಿ ಚಿಕಿತ್ಸೆ ಗೆ ದಾಖಲಾದಾಗ ಯಶಶ್ವಿನಿ ಕಾರ್ಡ್ ಮತ್ತು ಗುರುತಿನ ದಾಖಲೆಗಳನ್ನು ತೋರಿಸಿ, 5 ಲಕ್ಷ ರೂಪಾಯಿವರೆಗೆ ನಗದುರಹಿತ ಚಿಕಿತ್ಸೆ ಪಡೆದುಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.