Yuva Nidhi: ನಾಳೆ ಇಂತವರ ಖಾತೆಗೆ ಜಮಾ ಆಗಲಿದೆ ಯುವ ನಿಧಿ ಯೋಜನೆಯ ಹಣ, ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.
ನಾಳೆ ಅರ್ಹ ನಿರುದ್ಯೋಗಿಗಳ ಖಾತೆಗೆ ಯುವ ನಿಧಿ ಯೋಜನೆಯ ಹಣ ಜಮಾ ಆಗಲಿದೆ
Yuva Nidhi Amount Credit: ರಾಜ್ಯದಲ್ಲಿ ಡಿಸೆಂಬರ್ 26 ರಿಂದ ಯುವ ನಿಧಿ ನೋಂದಣಿ ಪ್ರಾರಂಭವಾಗಿದ್ದು, ನಿರುದ್ಯೋಗ ಭತ್ಯೆಯ ಹಣ ಜಮಾ ಆಗಲು ದಿನಾಂಕ ನಿಗದಿಯಾಗಿದೆ. ಸರ್ಕಾರದ ನಿಯಮಾನುಸಾರ ಅರ್ಹರಿಗೆ ನಿರುದ್ಯೋಗ ಭತ್ಯೆ ದೊರೆಯಲಿದೆ. ಈಗಾಗಲೇ ಸಾಕಷ್ಟು ಜನರು ಯುವ ನಿಧಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಿರುದ್ಯೋಗ ಭತ್ಯೆಯಡಿ ಮಾಸಿಕ ಸಹಾಯಧನ ಪಡೆಯಲು ರಾಜ್ಯದ ಅರ್ಹ ನಿರುದ್ಯೋಗಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿರುವ ಎಲ್ಲರಿಗು ಕೂಡ ನಾಳೆ ಯುವ ನಿಧಿ ಯೋಜನೆಯ ಹಣ ಖಾತೆಗೆ ಜಮಾ ಆಗಲಿದೆ.
ನಾಳೆ ಇಂತವರ ಖಾತೆಗೆ ಜಮಾ ಆಗಲಿದೆ ಯುವ ನಿಧಿ ಯೋಜನೆಯ ಹಣ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ ಯುವ ನಿಧಿ ನಾಳೆ ಅನುಷ್ಠಾನಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ನಾಳೆ (ಜನವರಿ 12) ಯೋಜನೆಗೆ ಚಾಲನೆ ನೀಡಲಿದ್ದಾರೆ. 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ.
ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ. ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸುವುದು ಕಡ್ಡಾಯ. ನಾಳೆ ಯುವ ನೀಡಿ ಅರ್ಜಿದಾರರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳುವ ಮೂಲಕ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು.
ಯುವ ನಿಧಿ ಯೋಜನೆಗೆ ಇಂತವರು ಅರ್ಜಿ ಸಲ್ಲಿಸುವಂತಿಲ್ಲ
•ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.
•ಅಪ್ರೆಂಟಿಸ್ ವೇತನದ ಫಲಾನುಭವಿ.
•ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.
•ಸ್ವಯಂ ಉದ್ಯೋಗದಲ್ಲಿರುವ ಯುವಕರು.
•ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.