Yuva Nidhi Eligibility: ಡಿಪ್ಲೊಮೊ ಪದವೀಧರರಿಗೆ ಬಿಗ್ ಅಪ್ಡೇಟ್, ಈ ದಾಖಲೆ ಇಲ್ಲವಾದರೆ ಹಣ ಪಡೆಯಲು ಸಾಧ್ಯವಿಲ್ಲ.
ಈ ದಾಖಲೆ ಇಲ್ಲದಿದ್ದರೆ ಯುವ ನಿಧಿ ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ.
Yuva Nidhi Eligibility Documents: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಇದೀಗ ಕೇವಲ ಒಂದು ಯೋಜನೆಯ ಅನುಷ್ಠಾನ ಕಾರ್ಯ ಭಾಕಿ ಇದೆ. December ನಲ್ಲಿ ನಿರುದ್ಯೋಗ ಭತ್ಯೆ ಯೋಜನೆಯಾದ Yuva Nidhi ಅನುಷ್ಠಾನಗೊಳ್ಳುವುದಾಗಿ ಸರ್ಕಾರ ಆದೇಶಿಸಿದೆ. ಇನ್ನು ಮೇ ತಿಂಗಳಿನಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಕ್ಕೆ ಬಂದಿದ್ದು ಆರು ತಿಂಗಳ ಬಳಿಕ ಇದೀಗ ಯುವ ನಿಧಿ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಹೊರಡಿಸಿದೆ.
ನಿರುದ್ಯೋಗ ಭತ್ಯೆಯಡಿ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಸರ್ಕಾರ ಎಲ್ಲ ನಿಭಂದನೆಯನು ಅನುಸರಿಸಬೇಕಿದೆ. ಸರ್ಕಾರ ಆದೇಶಿಸಿರುವ ಹಾಗೆ ಯಾವುದೇ ಅರ್ಜಿದಾರರು ಯಾವುದೇ ದಾಖಲೆಯನ್ನು ಹೊಂದಿಲ್ಲದಿದ್ದರು ಅಂತವರ ಅರ್ಜಿ ತಿರಸ್ಕಾರಗೊಳುತ್ತದೆ. ಇದೀಗ ನಾವು ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಯಾವುವು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಡಿಪ್ಲೊಮೊ ಪದವೀಧರರಿಗೆ ಬಿಗ್ ಅಪ್ಡೇಟ್
2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇನ್ನು ಯುವನಿಧಿ ಯೋಜನೆಯ ಲಾಭ ಪಡೆಯುತ್ತಿದ್ದು ಮಧ್ಯದಲ್ಲಿ ಉದ್ಯೋಗ ದೊರೆತರೆ ಅದರ ಬಗ್ಗೆ ಮಾಹಿತಿ ನೀಡಬೇಕು ಹಾಗೆ ಸುಳ್ಳು ಮಾಹಿತಿಯನ್ನ ನೀಡಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ಇದೀಗ ಈ ಯುವ ನಿಧಿ ಯೋಜನೆಯ ಕುರಿತು ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ಲಾಭವನ್ನು ಪಡೆಯಲು ಈ ದಾಖಲೆಗಳನ್ನು ಹೊಂದುವುದು ಕಡ್ಡಾಯವಾಗಿದೆ.
ಈ ದಾಖಲೆ ಇಲ್ಲವಾದರೆ ನಿರುದ್ಯೋಗ ಭತ್ಯೆ ಪಡೆಯಲು ಸಾಧ್ಯವಿಲ್ಲ
*ಆಧಾರ್ ಕಾರ್ಡ್
*ಆದಾಯ ಪ್ರಮಾಣಪತ್ರ
*ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
*ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ
*ಮೊಬೈಲ್ ಸಂಖ್ಯೆ
*ಭಾವಚಿತ್ರ
*ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ
ಯುವನಿಧಿ ಯೋಜನೆ ಯಾರಿಗೆ ಲಭ್ಯವಾಗುವುದಿಲ್ಲ
ಉನ್ನತ ವ್ಯಾಸಂಗಕ್ಕೆ ದಾಖಲಾಗಿರುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು, ಅಪ್ರೆಟಿಸ್ ವೇತನ ಪಡೆಯುತ್ತಿರುವವರು, ಸರಕಾರಿ ಅಥವಾ ಖಾಸಗಿ ಉದ್ಯೋಗ ಪಡೆದಿರುವವರು, ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಂತ ಉದ್ಯೋಗ ಇರುವವರು ಯುವ ನಿಧಿ ಯೋಜನೆಗೆ ಅರ್ಹರಾಗಿರುವುದಿಲ್ಲ.